ETV Bharat / state

55 ವರ್ಷ ಮೇಲ್ಪಟ್ಟ ಕೆಎಸ್​ಆರ್​​ಪಿ ಸಿಬ್ಬಂದಿ ಕಚೇರಿಯಲ್ಲೇ ಕರ್ತವ್ಯ.. ಎಡಿಜಿಪಿ ಅಲೋಕ್ ಕುಮಾರ್​ - ಅಸಿಸ್ಟೆಂಟ್ ಕಮಾಂಡೆಂಟ್

ಇತ್ತೀಚೆಗೆ ಕೇರಳ ಚುನಾವಣೆ ಕರ್ತವ್ಯಕ್ಕೆ ತೆರಳಿದ್ದ ಅಸಿಸ್ಟೆಂಟ್ ಕಮಾಂಡೆಂಟ್ ಸೇರಿ 8 ಮಂದಿಗೆ ಪಾಸಿಟಿವ್ ಬಂದಿತ್ತು‌. ಉಳಿದ 12 ಮಂದಿ ಬೇರೆ ಬೇರೆ ಕಡೆ ಭದ್ರತೆಗೆ ನಿಯೋಜನೆ ಆಗಿದ್ದರು. ಇವರಿಗೂ ಕೊರೊನಾ ಹಬ್ಬಿತ್ತು‌. ತಮ್ಮ ಇಲಾಖೆಯ ಸಿಬ್ಬಂದಿಗೆ ಸೋಂಕು ಹರಡುತ್ತಿರುವುದರಿಂದ ಗಂಭೀರವಾಗಿ ಪರಿಗಣಿಸಲಾಗಿದ್ದು, ಹೊರಗಡೆಯ ಕರ್ತವ್ಯಕ್ಕೆ ಕಳುಹಿಸದಿರಲು ಇಲಾಖೆ ನಿರ್ಧರಿಸಿದೆ.

ADGP Alok kumar
ಎಡಿಜಿಪಿ ಅಲೋಕ್ ಕುಮಾರ್​
author img

By

Published : Apr 22, 2021, 3:36 PM IST

ಬೆಂಗಳೂರು: ರಾಜ್ಯ ಪೊಲೀಸ್ ಮೀಸಲು ಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ 55 ವರ್ಷ ಮೇಲ್ಪಟ್ಟ ಸಿಬ್ಬಂದಿಗೆ ಹೊರಗಡೆ ಕೆಲಸಕ್ಕೆ ಕಳುಹಿಸದೇ ಕಚೇರಿಯಲ್ಲೇ ಕೆಲಸ ಮಾಡುವಂತೆ ಕೆಎಸ್ಆರ್​ಪಿ ಎಡಿಜಿಪಿ ಅಲೋಕ್ ಕುಮಾರ್ ಆದೇಶಿಸಿದ್ದಾರೆ.

ಕೊರೊನಾ 2ನೇ ಅಲೆ ಉಲ್ಬಣಗೊಂಡಿದ್ದು, ಕರ್ತವ್ಯ ನಿರತ ಪೊಲೀಸರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಸೋಂಕು ಹರಡಿರುವುದು ಆತಂಕಕಾರಿ. ವೈರಾಣು ಹರಡದಂತೆ ಮುಂಜಾಗ್ರತ ಕ್ರಮ ಕೈಗೊಂಡಿದ್ದರೂ ಸೋಂಕಿನ ಸರಪಳಿ ಬ್ರೇಕ್ ಮಾಡಲು ಸಾಧ್ಯವಾಗುತ್ತಿಲ್ಲ. ಬಂದೋಬಸ್ತ್, ಗಸ್ತು ಸೇರಿದಂತೆ ಕರ್ತವ್ಯ ಮಾಡುತ್ತಿರುವ 55 ವರ್ಷ ಮೇಲ್ಪಟ್ಟ ಸಿಬ್ಬಂದಿಗೆ ಹೊರಗಡೆ ಕೆಲಸಕ್ಕೆ ನಿಯೋಜನೆ ಮಾಡದಂತೆ ಅಯಾ ಬೆಟಾಲಿಯನ್ ಕಮಾಡೆಂಟ್​​​ಗಳಿಗೆ ತಿಳಿಸಿದ್ದೇನೆ ಎಂದು ಅಲೋಕ್ ಕುಮಾರ್ ಹೇಳಿದ್ದಾರೆ.

ಕೆಎಸ್​ಆರ್​​ಪಿ ಸಿಬ್ಬಂದಿಗೆ ಕೊರೊನಾ ಕುರಿತು ಮುಂಜಾಗ್ರತೆ ವಹಿಸುವಂತೆ ಸೂಚಿಸಿದ ಎಡಿಜಿಪಿ ಅಲೋಕ್ ಕುಮಾರ್​
20 ಮಂದಿ ಕೆಎಸ್​​ಆರ್​​ಪಿ ಸಿಬ್ಬಂದಿಗೆ ಕೊರೊನಾ

ಪೊಲೀಸ್ ಸಿಬ್ಬಂದಿ ಜೊತೆ ಜೊತೆಗೆ ಕೆಎಸ್ಆರ್​ಪಿ ಇಲಾಖೆಯ 20 ಸಿಬ್ಬಂದಿಗೆ ಕೊರೊನಾ ಸೋಂಕು ದೃಢವಾಗಿದೆ. ಈ ಪೈಕಿ ನಾಲ್ವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ ಉಳಿದವರು ಹೋಮ್ ಐಸೋಲೇಷನ್​ಗೆ ಒಳಗಾಗಿದ್ದಾರೆ.

ಇತ್ತೀಚೆಗೆ ಕೇರಳ ಚುನಾವಣೆ ಕರ್ತವ್ಯಕ್ಕೆ ತೆರಳಿದ್ದ ಅಸಿಸ್ಟೆಂಟ್ ಕಮಾಂಡೆಂಟ್ ಸೇರಿ 8 ಮಂದಿಗೆ ಪಾಸಿಟಿವ್ ಬಂದಿತ್ತು‌. ಉಳಿದ 12 ಮಂದಿ ಬೇರೆ ಬೇರೆ ಕಡೆ ಭದ್ರತೆಗೆ ನಿಯೋಜನೆ ಆಗಿದ್ದರು. ಇವರಿಗೂ ಕೊರೊನಾ ಹಬ್ಬಿತ್ತು‌. ತಮ್ಮ ಇಲಾಖೆಯ ಸಿಬ್ಬಂದಿಗೆ ಸೋಂಕು ಹರಡುತ್ತಿರುವುದರಿಂದ ಗಂಭೀರವಾಗಿ ಪರಿಗಣಿಸಲಾಗಿದ್ದು, ತಾವು ವಾಸ ಮಾಡುವ ಪ್ರದೇಶಗಳಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳಬೇಕು.

ರೋಗ ನಿರೋಧಕ‌‌ ಶಕ್ತಿ ಹೆಚ್ಚಿಸುವಂತಹ ಆಹಾರ ಸೇವಿಸಬೇಕು. ಯೋಗ, ಪ್ರಾಣಾಯಾಮ ಸೇರಿದಂತೆ ಸದಾ ದೈಹಿಕ ಕಸರತ್ತಿನಲ್ಲಿ ತೊಡಗಿಸಿಕೊಳ್ಳುವ ಹಾಗೇ ನೋಡಿಕೊಳ್ಳಬೇಕೆಂದು ಕಮಾಡೆಂಟ್ ಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.