ETV Bharat / state

ಲಿಂಗಾಯತರ 2ಎ ಮೀಸಲಾತಿಗೆ ಕ್ಷತ್ರೀಯ ಒಕ್ಕೂಟ ವಿರೋಧ - etv bharata kannada

ಲಿಂಗಾಯತ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ಪ್ರಸ್ತಾವನೆಗೆ ಸರ್ಕಾರ ನೀಡಿರುವ ಸಕಾರಾತ್ಮಕ ಸ್ಪಂದನೆಗೆ ಕರ್ನಾಟಕ ಕ್ಷತ್ರೀಯ ಒಕ್ಕೂಟ ಅಸಮಾಧಾನ ವ್ಯಕ್ತಪಡಿಸಿದೆ.

Kshatriya Union Opposing to 2A reservation for Lingayats
ಲಿಂಗಾಯತರ 2ಎ ಮೀಸಲಾತಿಗೆ ಕ್ಷತ್ರೀಯ ಒಕ್ಕೂಟದಿಂದ ವಿರೋಧ
author img

By

Published : Sep 25, 2022, 1:59 PM IST

ಬೆಂಗಳೂರು: ಪಂಚಮಸಾಲಿಗಳು ಸಹಿತ ವೀರಶೈವ ಲಿಂಗಾಯತ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ಪ್ರಸ್ತಾವನೆಗೆ ಸರ್ಕಾರ ನೀಡಿರುವ ಸಕಾರಾತ್ಮಕ ಸ್ಪಂದನೆಗೆ ಕರ್ನಾಟಕ ಕ್ಷತ್ರೀಯ ಒಕ್ಕೂಟ ವಿರೋಧ ವ್ಯಕ್ತಪಡಿಸಿದೆ.

ಬೆಂಗಳೂರಿನ ಪ್ರೆಸ್ ಕ್ಲಬ್​​ನಲ್ಲಿಂದು ನಡೆದ ಮಾಧ್ಯಮಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ಕ್ಷತ್ರೀಯ ಒಕ್ಕೂಟದ ರಾಜ್ಯಾಧ್ಯಕ್ಷ ಉದಯ್ ಸಿಂಗ್, ವೀರಶೈವ ಲಿಂಗಾಯತ ಸಮುದಾಯ ಹಾಗೂ ಅದರ ಉಪಜಾತಿಗಳನ್ನು 2ಎ ಪ್ರವರ್ಗಕ್ಕೆ ಸೇರ್ಪಡೆಗೊಳಿಸಿದರೆ ಕ್ಷತ್ರೀಯ ಜನಾಂಗ ಸಹಿತ ಅತಿ ಹಿಂದುಳಿದ 102ಕ್ಕೂ ಅಧಿಕ ಜಾತಿಗಳಿಗೆ ತಾರತಮ್ಯ ಎಸಗಿದಂತಾಗುತ್ತದೆ. ಇಂದು ಲಿಂಗಾಯತ ಸಮುದಾಯವೇ ಅತ್ಯಂತ ಬಲಿಷ್ಠವಾಗಿದ್ದು, ರಾಜಕೀಯದಲ್ಲಿ ಶೇ. 25ರಷ್ಟು ಪಾಲು ಲಿಂಗಾಯತ ಸಮುದಾಯವೇ ಹೊಂದಿದೆ. ಅಲ್ಲದೇ ಎಲ್ಲ ವರ್ಗಗಳಲ್ಲಿ ಲಿಂಗಾಯತವೇ ಮೇಲುಗೈ ಸಾಧಿಸಿದ್ದು, 2ಎ ವರ್ಗಕ್ಕೆ ಸೇರಿಸುವುದು ಅಸಮಂಜಸವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಇದನ್ನೂ ಓದಿ: ಮೈಸೂರಿನಲ್ಲೂ ಪೇಸಿಎಂ ಅಭಿಯಾನ ಪ್ರಾರಂಭಿಸಿದ ಕಾಂಗ್ರೆಸ್

ಸರ್ಕಾರದ ಈ ನಡೆಯ ವಿರುದ್ಧ ಕರ್ನಾಟಕ ಕ್ಷತ್ರೀಯರ ಒಕ್ಕೂಟವು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಈ ನಿರ್ಣಯದ ವಿರುದ್ಧ ಉಗ್ರ ಹೋರಾಟ ಮಾಡುವುದರೊಂದಿಗೆ ಒಕ್ಕೂಟದ ವತಿಯಿಂದ ರಾಜ್ಯಪಾಲರು ಹಾಗೂ ಕೇಂದ್ರ ಸರ್ಕಾರಕ್ಕೂ ದೂರು ಸಲ್ಲಿಸಲು ನಿರ್ಧರಿಸಲಾಗಿದೆ. ಈ ವೇಳೆ ಒಕ್ಕೂಟದ ವಿವಿಧ ಮುಖ್ಯಸ್ಥರು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.