ETV Bharat / state

ಬಿಬಿಎಂಪಿಗೆ ಐವತ್ತು ಸಾವಿರ ದಂಡ ಕಟ್ಟಿದ ರಾಜ್ಯ ಕ್ರಿಕೆಟ್ ಸಂಸ್ಥೆ

author img

By

Published : Jan 29, 2020, 6:55 PM IST

ಭಾರತ- ಆಸ್ಟ್ರೇಲಿಯಾ ಪಂದ್ಯಾವಳಿ ವೇಳೆ ಯಥೇಚ್ಚವಾಗಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪ್ಲಾಸ್ಟಿಕ್ ಬಳಕೆ ಮಾಡಿದ ಹಿನ್ನೆಲೆ ಬಿಬಿಎಂಪಿ ವಿಧಿಸಿದ್ದ 50 ಸಾವಿರ ರೂ. ದಂಡವನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಪಾವತಿಸಿದೆ.

KSCA Paid fifty thousand fine to BBMP
ಗೌತಮ್ ಕುಮಾರ್, ಬಿಬಿಎಂಪಿ ಮೇಯರ್​

ಬೆಂಗಳೂರು: ಭಾರತ-ಆಸ್ಟ್ರೇಲಿಯಾ ಪಂದ್ಯಾವಳಿ ವೇಳೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಯಥೇಚ್ಚವಾಗಿ ಪ್ಲಾಸ್ಟಿಕ್ ಬಳಕೆ ಮಾಡಿದ ಹಿನ್ನೆಲೆ ಬಿಬಿಎಂಪಿ ವಿಧಿಸಿದ್ದ 50 ಸಾವಿರ ರೂ. ದಂಡವನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಪಾವತಿಸಿದೆ.

ಕೆ.ಎಸ್.ಸಿ.ಎ ಸಂಸ್ಥೆಯು 50 ಸಾವಿರ ರೂ. ಡಿಡಿಯನ್ನು ಜನವರಿ 28ರಂದು ಬಿಬಿಎಂಪಿಗೆ ಸಲ್ಲಿಸುವ ಮೂಲಕ ದಂಡದ ಮೊತ್ತವನ್ನು ಪಾವತಿಸಿದ್ದಾರೆ. ಡಂಡ ಪಾವತಿಸಲು ಕೆ.ಎಸ್.ಸಿ.ಎ ಗೆ ಬಿಬಿಎಂಪಿ ನಿಗದಿತ ಸಮಯವನ್ನು ನೀಡಿತ್ತು. ಹೀಗಾಗಿ ದಂಡ ವಿಧಿಸಿದ ಒಂಬತ್ತು ದಿನಗಳ ಒಳಗಾಗಿ ಕೆ.ಎಸ್.ಸಿ.ಎ ದಂಡ ಪಾವತಿಸಿದೆ.

ಗೌತಮ್ ಕುಮಾರ್, ಬಿಬಿಎಂಪಿ ಮೇಯರ್​

ಸಾಕಷ್ಟು ಜನ ಜಾಗೃತಿಯ ಬಳಿಕವೂ ಸ್ಟೇಡಿಯಂ ಒಳಗಡೆ ಪ್ಲಾಸ್ಟಿಕ್ ಕಪ್, ಬಾಟಲಿಗಳು, ರ್ಯಾಪರ್ಸ್, ಫ್ಲೆಕ್ಸ್​ಗಳನ್ನು ಬಳಸಿದ ಹಿನ್ನೆಲೆ ದಂಡ ಹಾಕಲಾಗಿತ್ತು. ಈ ಬಗ್ಗೆ ಮಾತನಾಡಿದ ಮೇಯರ್ ಗೌತಮ್ ಕುಮಾರ್, ಪಾಲಿಕೆ ಅಧಿಕಾರಿಗಳು ದಂಡ ವಿಧಿಸಿದ್ದಕ್ಕೆ ಕೆ.ಎಸ್.ಸಿ.ಎ ಸ್ಪಂದಿಸಿರಲಿಲ್ಲ, ಆದರೆ ಮಾಧ್ಯಮಗಳ ಎಚ್ಚರಿಕೆಯಿಂದ ದಂಡ ಕಟ್ಟಿದ್ದಾರೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.