ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ 2023ರ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಗೆ (ಟಿಇಟಿ) ಅರ್ಜಿ ಆಹ್ವಾನಿಸಲಾಗಿದೆ. 1ರಿಂದ 8ನೇ ತರಗತಿಗಳಿಗೆ ಶಿಕ್ಷಕರಾಗಿ ನೇಮಕಾತಿಗೆ ಅರ್ಹರಾಗಲು ಈ ಪರೀಕ್ಷೆಯ ಅರ್ಹತೆ ಸಂಪಾದಿಸುವುದು ಕಡ್ಡಾಯ. ಶಿಕ್ಷಣ ಇಲಾಖೆ ನಡೆಸುವ ಕೆಎಆರ್ಟಿಟಿಇ ಪರೀಕ್ಷೆಗೆ ಅರ್ಜಿ ಸಲ್ಲಿಕೆಗೆ ನಾಳೆಯೇ ಕಡೆಯ ದಿನಾಂಕ. ಅರ್ಜಿ ಸಲ್ಲಿಕೆ ಸೇರಿದಂತೆ ಇನ್ನಿತರ ಮಾಹಿತಿ ಇಲ್ಲಿದೆ.
ವಿದ್ಯಾರ್ಹತೆ: ಪತ್ರಿಕೆ 1 (1ರಿಂದ 5ನೇ ತರಗತಿ): ಪಿಯುಸಿ ಪರೀಕ್ಷೆಯಲ್ಲಿ ಶೇ 50 ಅಂಕ ಗಳಿಸಿರಬೇಕು. ಎರಡು ವರ್ಷದ ಡಿಎಡ್ ಕೋರ್ಸ್ ತೇರ್ಗಡೆ ಹೊಂದಿರಬೇಕು/ 4 ವರ್ಷದ ಬ್ಯಾಚುಲರ್ ಇನ್ ಎಲಿಮೆಂಟರಿ ಎಜುಕೇಶನ್/ ಎರಡು ವರ್ಷದ ಡಿಪ್ಲೋಮೋ ಇನ್ ಎಜುಕೇಶನ್/ ಬಿ.ಎಡ್ ಪದವಿ ಪೂರ್ಣಗೊಳಿಸರಬೇಕು. ಈ ಕೋರ್ಸ್ಗಳ ಪ್ರವೇಶಕ್ಕೆ ಅಭ್ಯಾಸ ಮಾಡುತ್ತಿರುವ ಅಭ್ಯರ್ಥಿಗಳು ಕೂಡಾ ಅರ್ಜಿ ಸಲ್ಲಿಸಬಹುದು.
ಪತ್ರಿಕೆ 2: ಪದವಿಯಲ್ಲಿ ಕನಿಷ್ಠ 50ರಷ್ಟು ಅಂಕ ಗಳಿಸಿರಬೇಕು. ಎರಡು ವರ್ಷದ ಡಿಎಲ್.ಎಡ್/ ಬಿಇಡಿ ಪದವಿ/ ನಾಲ್ಕು ವರ್ಷದ ಬ್ಯಾಚುಲರ್ ಇನ್ ಎಲಿಮೆಂಟರಿ ಎಜುಕೇಶನ್/ ಎರಡು ವರ್ಷದ ಬಿಇಡಿ (ವಿಶೇಷ ಶಿಕ್ಷಣ)ದಲ್ಲಿ ತೇರ್ಗಡೆ ಹೊಂದಿದ ಹಾಗೂ ಪ್ರವೇಶ ಪಡೆದು ಅಭ್ಯಾಸ ಮಾಡುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅರ್ಜಿ ಶುಲ್ಕ: ವಿಶೇಷ ಅಗತ್ಯತೆಯುಳ್ಳ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ವಿನಾಯಿತಿ ನೀಡಲಾಗಿದೆ. ಪತ್ರಿಕೆ-1 ಅಥವಾ ಪ್ರತಿಕೆ-2 (ಎರಡರಲ್ಲಿ ಒಂದಕ್ಕೆ ಅರ್ಜಿ ಸಲ್ಲಿಕೆ) ಸಾಮಾನ್ಯ ವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳು- 700 ರೂ. ಪ.ಜಾ, ಪ. ವರ್ಗ, ಪ್ರವರ್ಗ-1 -350 ರೂಪತ್ರಿಕೆ-1 ಹಾಗೂ ಪತ್ರಿಕೆ-2 (ಎರಡು ಪತ್ರಿಕೆ ಅರ್ಜಿ ಸಲ್ಲಿಕೆಗೆ). ಸಾಮಾನ್ಯ ವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳು- 1000 ರೂಪ.ಜಾ, ಪ. ವರ್ಗ, ಪ್ರವರ್ಗ-1 -500 ರೂ ಇದೆ.
ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು. ಅರ್ಜಿ ಸಲ್ಲಿಕೆ ಜುಲೈ 14 ರಿಂದ ಆರಂಭವಾಗಿದ್ದು, ಆಗಸ್ಟ್ 5 ಕಡೆಯ ದಿನಾಂಕ. ಶುಲ್ಕ ಪಾವತಿಗೂ ಕೂಡ ಆಗಸ್ಟ್ 5 ಕಡೆಯ ದಿನವಾಗಿದೆ.
ಪ್ರವೇಶ ಪತ್ರ: ಪ್ರವೇಶ ಪತ್ರವನ್ನು ಆಗಸ್ಟ್ 23ರಿಂದ ಸೆಪ್ಟೆಂಬರ್ 1ರಿಂದ ಇಲಾಖೆಯ ವೆಬ್ಸೈಟ್ www.schooleducation.kar.nic.in ನಲ್ಲಿ ಪಡೆದುಕೊಳ್ಳಬಹುದು.
ಅರ್ಜಿ ಸಲ್ಲಿಸುವ ಪ್ರಕ್ರಿಯೆ: ಅಭ್ಯರ್ಥಿಗಳು https://www.schooleducation.kar.nic.in/ ಅಧಿಕೃತ ಅಧಿಸೂಚನೆಯಲ್ಲಿ ನೀಡಲಾಗಿರುವ ಅರ್ಜಿ ಸಮೂನೆ ಭರ್ತಿ ಮಾಡಬೇಕು. ಅರ್ಜಿ ಭರ್ತಿಗೂ ಮುನ್ನ ಸಂಪೂರ್ಣ ಅಧಿಸೂಚನೆ ಪರಿಶೀಲಿ ಮುಂದುವರೆಯಬೇಕು. ಬಳಿಕ ಅಗತ್ಯ ವಿವರ ತುಂಬಬೇಕು. ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕೃತ ವೆಬ್ಸೈಟ್ schooleducation.kar.nic.in ಗೆ ಭೇಟಿ ನೀಡಿ.
ಇದನ್ನೂ ಓದಿ: Gramin Dak Sevak Job: ಅಂಚೆ ಇಲಾಖೆಯಿಂದ ಬೃಹತ್ ನೇಮಕಾತಿ.. ರಾಜ್ಯದಲ್ಲಿ 1714 ಡಾಕ್ ಸೇವಕ್ ಹುದ್ದೆಗೆ ಅರ್ಜಿ ಆಹ್ವಾನ