ETV Bharat / state

ಭ್ರಷ್ಟಾಚಾರ ನಡೆಸಲು ರಾಜ್ಯ ಸರ್ಕಾರಕ್ಕೆ ಕೇಂದ್ರದ ಸಹಕಾರ ಸಿಕ್ಕಿದೆ: ಕೃಷ್ಣ ಬೈರೇಗೌಡ

ಬಿಜೆಪಿಯವರು 100 ಕೋಟಿ ತಿಂದ್ರೂ ಐಟಿ ರೇಡ್ ಇಲ್ಲ, ಯಾವ ಇಡಿಯೂ ತನಿಖೆ ಮಾಡಲ್ಲ ಎಂದು ಬಿಜೆಪಿ ವಿರುದ್ಧ ಮಾಜಿ ಸಚಿವ ಕೃಷ್ಣ ಬೈರೇಗೌಡ ಆರೋಪ ಮಾಡಿದ್ದಾರೆ.

KN_BNG_01_KRISHNA_BIRAGOWDA_PC_SCRIPT_7208077
ಕೃಷ್ಣ ಬೈರೇಗೌಡ
author img

By

Published : Sep 1, 2022, 5:31 PM IST

ಬೆಂಗಳೂರು: ರಾಜ್ಯ ರಾಜಧಾನಿಯ ಅವನತಿ ಹೇಳಲು ಸಾಧ್ಯವಿಲ್ಲ. ಇಲ್ಲಿನ ದುಸ್ಥಿತಿಯನ್ನು ಸಹ ರಾಜ್ಯ ಸರ್ಕಾರ ತನ್ನ ಅನುಕೂಲಕ್ಕೆ ಬಳಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್​ನ ಮಾಜಿ ಸಚಿವ ಕೃಷ್ಣ ಬೈರೇಗೌಡ ಆರೋಪಿಸಿದ್ದಾರೆ.

ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಬೆಂಗಳೂರು ಅಂದ್ರೆ ಕ್ಯಾಶ್​ಟವರ್ ಆಗಿದೆ. ಬೆಂಗಳೂರು ಎಲ್ಲೆಲ್ಲಿ ಕಿತ್ತು ಹೋಗಿದೆ ಅಂತಾ ಹೇಳಲಾಗಲ್ಲ. ಮುಕ್ಕಾಲು ಭಾಗ ಇವತ್ತು ಸಮಸ್ಯೆಗೆ ಸಿಲುಕಿದೆ. ಪ್ರಧಾನಿ ಬಂದಿದ್ದು ಕೇವಲ ಅರ್ಧ ದಿನ ಮಾತ್ರ. ಅದಕ್ಕೆ ಖರ್ಚು ಮಾಡಿದ್ದು 26 ಕೋಟಿ ರೂಪಾಯಿ. ಸುಳ್ಳು ಭರವಸೆ ಬಿಟ್ಟರೆ ಮತ್ತೇನು ಪ್ರಯೋಜನವಿಲ್ಲ. ಮಳೆಯಿಂದಾದ ಅನಾಹುತ ಸರಿಪಡಿಸುತ್ತಿಲ್ಲ. ಇವತ್ತು ಬೆಂಗಳೂರಿನ‌ ಜನ ಕೇಳ್ತಿದ್ದಾರೆ ಎಂದರು.

ರಾಜ್ಯ ಸರ್ಕಾರದ ಬಳಿ ರಸ್ತೆಗುಂಡಿ ಮುಚ್ಚಲು ಹಣ ಇಲ್ವೇ? ರಾಜಕಾಲುವೆ ಕಸ ತೆರವಿಗೆ ಹಣ ಇಲ್ವೇ? ಇದನ್ನು ನಾವು ಕೇಳ್ತಿಲ್ಲ, ಇಲ್ಲಿನ ಜನ ಕೇಳ್ತಿದ್ದಾರೆ. ರಾಜ್ಯ ಸರ್ಕಾರಕ್ಕೆ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಭಯವಿದೆ. ಬಿಜೆಪಿಯವರು 100 ಕೋಟಿ ತಿಂದ್ರೂ ಐಟಿ ರೇಡ್ ಇಲ್ಲ. ಯಾವ ಇಡಿಯೂ ತನಿಖೆ ಮಾಡಲ್ಲ. ಎಲ್ಲಿಂದ ಬಂತು ದುಡ್ಡು ಅಂತಾನೂ ಕೇಳಲ್ಲ. ಸಂಪೂರ್ಣ ಪ್ರೊಟೆಕ್ಷನ್ ಬಿಜೆಪಿಯವರಿಗೆ ಸಿಕ್ಕಿದೆ. ಹಾಗಾಗಿ ಇವತ್ತು 50% ವರೆಗೆ ಕಮೀಷನ್ ಹೋಗಿದೆ ಎಂದು ಮಾಜಿ ಸಚಿವ ಬೈರೇಗೌಡ ಆರೋಪಿಸಿದರು.

ಬಿಜೆಪಿ ವಿರುದ್ದ ಕೃಷ್ಣ ಬೈರೇಗೌಡ ಆರೋಪ

ಸಿಬಿಐ, ಐಟಿ, ಇಡಿ ಅಪ್ಪಿತಪ್ಪಿ ಅವರನ್ನು ಕೇಳ್ತಿಲ್ಲ. ಇವೆಲ್ಲವೂ ರಾಜಕೀಯ ಅಸ್ತ್ರಗಳಾಗಿಬಿಟ್ಟಿವೆ. ಅವರು ರಾಜಕೀಯ ಮಾಡ್ತಿರೋದ್ರಿಂದ ಭ್ರಷ್ಟಾಚಾರ ಹೆಚ್ಚಾಗಿದೆ ಎಂದರು. ಮಂತ್ರಿಗಳ ಮೇಲೆ ಭ್ರಷ್ಟಾಚಾರದ ಆರೋಪಗಳು ಬರ್ತಿವೆ. ಆದರೆ ಸಿಎಂ ಪ್ರೂಫ್​ ಏನು ಅಂತಾ ಕೇಳ್ತಾರೆ. ಭ್ರಷ್ಟಾಚಾರಕ್ಕೆ ನೀವು ಪ್ರೂಫ್​ ಕೇಳ್ತಿದ್ದೀರಾ?. ನೀವು ಎಷ್ಟು ಲಂಚ ತೆಗೆದುಕೊಳ್ತಿದ್ದೀವಿ ಅಂತ ರಸೀದಿ ಕೊಡಿ. ಆಗ ನಾವು ಪ್ರೂಫ್​ ಕೊಡ್ತೇವೆ ಎಂದು ಮಾಜಿ ಸಚಿವರು ಗರಂ ಆದರು.

ಕಳೆದ 30 ವರ್ಷಗಳಿಂದ ಬೆಂಗಳೂರು ಅಭಿವೃದ್ಧಿ ಆಗಿತ್ತು. ಲಕ್ಷಾಂತರ ಯುವಜನರಿಗೆ ಉದ್ಯೋಗ ನೀಡಿತ್ತು. ಇದಕ್ಕೆ ಉತ್ತಮ ಲೀಡರ್ ಶಿಪ್ ಕಾರಣವಾಗಿತ್ತು. ಇವತ್ತು ಬೆಂಗಳೂರು ಮುಳುಗುತ್ತಿದೆ. ಈ ನೀರಿನಲ್ಲಿ ಪಕ್ಕದವರು ಮೀನುಗಾರಿಕೆ ಮಾಡೋಕೆ ನೋಡ್ತಿದ್ದಾರೆ. ನೀವು ಬನ್ನಿ ನಮ್ಮಲ್ಲಿಗೆ ಅಂತ ಕರೆಯುತ್ತಿದ್ದಾರೆ. ಇದಕ್ಕೆ ಕಾರಣ ಇಂದಿನ ಸರ್ಕಾರದ ದುಸ್ಥಿತಿ.

ಸಚಿವ ಮುನಿರತ್ನಂ ವಿರುದ್ಧ ಕಮೀಷನ್ ಆರೋಪ ವಿಚಾರ ಮಾತನಾಡಿ, ರಾಜಕಾರಣದಲ್ಲಿ ಎಲ್ಲರೂ ಭ್ರಷ್ಟರಿಲ್ಲ. ಆದರೆ ಬಹುತೇಕರು ಭ್ರಷ್ಟಾಚಾರದಲ್ಲಿದ್ದಾರೆ. ದುರಹಂಕಾರದ ಪರಮಾವಧಿ ಅವರದ್ದು. 50 ಅಲ್ಲ 100% ತಿಂದ್ರು ಯಾರೂ ಕೇಸ್ ಹಾಕಲ್ಲ. ಈ ವಿಶ್ವಾಸ ಇರೋದ್ರಿಂದ ಅವರು ಹೆದರುತ್ತಿಲ್ಲ. ಲಾ ಆಂಡ್ ಆರ್ಡರ್ ಪೊಲಿಟಿಕಲ್ ಪ್ರೊಟೆಕ್ಷನ್ ಸಿಕ್ಕಿದೆ. ನೀವು ಏನು ಮಾಡಿದ್ರೂ ಯಾರು ಕೇಳಲ್ಲ ಅಂತ. ಹಾಗಾಗಿ ಅವರು ಸುಮ್ಮನೆ ಇರ್ತಾರೆ. ಪ್ರಾಮಾಣಿಕವಾಗಿ ಕಂಟ್ರೋಲ್ ಮಾಡೋಕೂ‌ ಆಗ್ತಿಲ್ಲ. ದೇಶದಲ್ಲಿ ಜಿಎಸ್​ಟಿ ಇದ್ರೆ, ಇಲ್ಲಿ ವಿಎಸ್​ಟಿ (ವಿಜಯೇಂದ್ರ ಸರ್ವಿಸ್ ಟ್ಯಾಕ್ಸ್)ಇತ್ತು. ಅಲಿಗೇಶನ್ ಬಂದ್ರೆ ಅವರನ್ನು ಸಮರ್ಥಿಸಿಕೊಳ್ಳುವ ಕೆಲಸ ಆಗ್ತಿದೆ. ಜನರ ದುಡ್ಡನ್ನು ಗಲೀಜು ತಿಂದಂತೆ ತಿನ್ನುತ್ತಿದ್ದಾರೆ ಎಂದು‌ ಮುನಿರತ್ನಂ‌ ವಿರುದ್ಧ ಕೃಷ್ಣ ಬೈರೇಗೌಡ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಕಾಂಗ್ರೆಸ್​ ಬಿಟ್ಟು, 2023ರ ಚುನಾವಣೆಯಲ್ಲಿ ಕುಣಿಗಲ್​ನಿಂದ ಸ್ಪರ್ಧೆ: ಮಾಜಿ ಸಂಸದ ಮುದ್ದಹನುಮೇಗೌಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.