ETV Bharat / state

ಕುಟುಂಬ ಸಮೇತ ಹಳ‍್ಳಿಮನೆ ಹೋಟೆಲ್​ನಲ್ಲಿ ಹಬ್ಬದ ಊಟ ಸವಿದ ಕೃಷ್ಣ ಬೈರೇಗೌಡ - ಸಚಿವ ಕೃಷ್ಣಭೈರೇಗೌಡ

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಹಾಗೂ ಸಚಿವ ಕೃಷ್ಣ ಬೈರೇಗೌಡ ಅವರು ಕುಟುಂಬ ಸಮೇತರಾಗಿ ಹಳ್ಳಿಮನೆಯ ಹೋಟೆಲ್​ವೊಂದರಲ್ಲಿ ಹಬ್ಬದ ಊಟ ಸವಿದರು.

ಹಳ‍್ಳಿಮನೆಯಲ್ಲಿ ಊಟ ಸವಿಯುತ್ತಿರುವ ಉತ್ತರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಕೃಷ್ಣ ಭೈರೇಗೌಡ
author img

By

Published : Apr 6, 2019, 7:18 PM IST

Updated : Apr 6, 2019, 7:36 PM IST

ಬೆಂಗಳೂರು: ಉತ್ತರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಕೃಷ್ಣಬೈರೇಗೌಡ ಕುಟುಂಬ ಸಮೇತ ಮಲ್ಲೇಶ್ವರಂನ ಹಳ್ಳಿಮನೆ ಹೋಟೆಲ್​ಗೆ ತೆರಳಿ ಯುಗಾದಿ ಹಬ್ಬದ ಊಟ ಸವಿದರು. ಚುನಾವಣೆ ಪ್ರಚಾರದ ಭರಾಟೆ ನಡುವೆ ಕೊಂಚ ಬಿಡುವು ಮಾಡಿಕೊಂಡು ಇಂದು ಮಧ್ಯಾಹ್ನ ಪತ್ನಿ ಮೀನಾಕ್ಷಿ ಹಾಗೂ ತಾಯಿ ಸಾವಿತ್ರಮ್ಮ ಅವರೊಂದಿಗೆ ಮಲ್ಲೇಶ್ವರಕ್ಕೆ ತೆರಳಿ ಊಟ ಸವಿದರು.

ಹಳ‍್ಳಿಮನೆಯಲ್ಲಿ ಊಟ ಸವಿಯುತ್ತಿರುವ ಉತ್ತರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಕೃಷ್ಣ ಭೈರೇಗೌಡ

ಪ್ರಚಾರದ ಒಂದು ಭಾಗವಾಗಿ ಕೂಡ ಇವರು ಈ ಭೇಟಿಯನ್ನು ಬಳಸಿಕೊಂಡರು. ಆದರೆ, ಹೆಚ್ಚು ಹೊತ್ತು ಅಲ್ಲಿರದೇ ಊಟ ಮುಗಿದ ಕೆಲ ಕಾಲ ಆಪ್ತರ ಜತೆ ಮಾತನಾಡುತ್ತಾ ಕೆಲ ನಾಗರಿಕರನ್ನು ಭೇಟಿ ಮಾಡಿ ಕಾಂಗ್ರೆಸ್‍ ಗೆಲ್ಲಿಸುವಂತೆ ಮನವಿ ಮಾಡಿದರು. ಕಳೆದ ಒಂದು ವಾರದಿಂದ ನಿರಂತರವಾಗಿ ಉತ್ತರ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಸುತ್ತಾಡಿ ಜನರ ಮನೆ ಮನೆಗೆ ತೆರಳಿ, ಬೀದಿ ಬೀದಿ ಸುತ್ತಿ ಪ್ರಚಾರದಲ್ಲಿ ತೊಡಗಿರುವ ಕೃಷ್ಣಬೈರೇಗೌಡ, ಪ್ರಸಕ್ತ ಚುನಾವಣೆಯಲ್ಲಿ ಕೇಂದ್ರ ಸಚಿವ ಹಾಗೂ ಬಿಜೆಪಿ ಅಭ್ಯರ್ಥಿ ಸದಾನಂದಗೌಡರ ವಿರುದ್ಧ ಸ್ಪರ್ಧಿಸುತ್ತಿದ್ದು, ತುರುಸಿನ ಸ್ಪರ್ಧೆ ಕ್ಷೇತ್ರದಲ್ಲಿ ಏರ್ಪಟ್ಟಿದೆ.

sample description
Last Updated : Apr 6, 2019, 7:36 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.