ETV Bharat / state

ಕೆಪಿಎಲ್​​ ಮ್ಯಾಚ್ ಫಿಕ್ಸಿಂಗ್​ ಪ್ರಕರಣ: ಸಿಸಿಬಿಯಿಂದ ಅಂತಾರಾಷ್ಟ್ರೀಯ ಬುಕ್ಕಿ ಬಂಧನ

ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಭಾಗಿಯಾಗಿದ್ದ ಅಂತಾರಾಷ್ಟ್ರೀಯ ಬುಕ್ಕಿಯನ್ನ ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

ಸಿಸಿಬಿಯಿಂದ ಅಂತಾರಾಷ್ಟ್ರೀಯ ಬುಕ್ಕಿ ಬಂಧನ
author img

By

Published : Nov 10, 2019, 9:07 AM IST

ಬೆಂಗಳೂರು: ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಭಾಗಿಯಾಗಿದ್ದ ಅಂತಾರಾಷ್ಟ್ರೀಯ ಬುಕ್ಕಿಯನ್ನ ಇದೀಗ ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

ಬುಕ್ಕಿ ಸಯ್ಯಂ ಬಂಧಿತ ಆರೋಪಿ. ಈ ಅಂತಾರಾಷ್ಟ್ರೀಯ ಬುಕ್ಕಿ ಸಯ್ಯಂ ಹರ್ಯಾಣ ಮೂಲದವನಾಗಿದ್ದು, ಬೆಳಗಾವಿ ಪ್ಯಾಂಥರ್ಸ್ ಮಾಲೀಕ ಅಸ್ಪಕ್ ಆಲಿಯನ್ನ ಬಂಧಿಸುತ್ತಿದ್ದಂತೆ ವೆಸ್ಟ್ ಇಂಡೀಸ್​​ನಲ್ಲಿ ತಲೆಮರೆಸಿಕೊಂಡಿದ್ದ. ಕೆಪಿಎಲ್ ಪ್ರಕರಣದಲ್ಲಿ ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ತನಿಖೆಗೆ ಇಳಿದಾಗ ಹಲವು ಮಂದಿ ಅಂತಾರಾಷ್ಟ್ರೀಯ ಬುಕ್ಕಿಗಳು ಭಾಗಿಯಾಗಿದ್ದಾರೆ ಅನ್ನೋ‌ ಮಾಹಿತಿ ಸಿಕ್ಕಿದೆ. ಈ ಬಗ್ಗೆ ತನಿಖೆಗೆ ಇಳಿದಾಗ ಭಾಗಿಯಾದ ಕೆಲ ಬುಕ್ಕಿಗಳು ವಿದೇಶಕ್ಕೆ ಹೋಗಿರುವ ವಿಚಾರ ಬೆಳಕಿಗೆ ಬಂದಿತ್ತು. ಹೀಗಾಗಿ ತಲೆಮರೆಸಿಕೊಂಡವರಿಗೆ ಸಿಸಿಬಿ ಲುಕ್ ಔಟ್ ನೋಟಿಸ್ ಹೊರಡಿಸಿತ್ತು. ಖಚಿತ ಮಾಹಿತಿ ಮೇರೆಗೆ ಸಿಸಿಬಿ, ದೆಹಲಿಗೆ ವಾಪಸಾದ ಸಯ್ಯಂನನ್ನ ವಶಕ್ಕೆ ಪಡೆದಿದೆ. ನಗರದ ಸಿಸಿಬಿ‌ ಕಚೇರಿಗೆ ಕರೆ ತಂದು ನ್ಯಾಯಲಯಕ್ಕೆ ಹಾಜರುಪಡಿಸಿ ಹೆಚ್ಚಿನ ಮಾಹಿತಿ ಪಡೆಯಲಿದೆ. ಈತ ಬುಕ್ಕಿ ಭವೀಶ್ ಭಫ್ನಾ ಜೊತೆ ಸೇರಿ ಕೆಪಿಎಲ್ ಮ್ಯಾಚ್ ಫಿಕ್ಸಿಂಗ್​​ನಲ್ಲಿ ತೊಡಗಿದ್ದ. ಭವೀಶ್ ಭಫ್ನಾ ಹಾಗೂ ಈಗ ಬಂಧನವಾದ ಸಯ್ಯಂನನ್ನು ಬಳ್ಳಾರಿ‌ ತಂಡದ ಬೌಲರ್ ಒಬ್ಬನಿಗೆ ಹಣದ ಆಮಿಷ ಒಡ್ಡಿ ಒಂದು ಓವರ್​​ನಲ್ಲಿ ‌ನಾವು ಹೇಳಿದಷ್ಟು ರನ್‌ ಕೊಟ್ಟರೆ ಕೇಳಿದಷ್ಟು ಹಣ ಕೊಡುವುದಾಗಿ ಹೇಳಿ ಮ್ಯಾಚ್ ಫಿಕ್ಸಿಂಗ್ ಮಾಡಿದ್ದರು‌ ಎಂಬ ಆರೋಪದ ಮೇರೆಗೆ ಬಂಧಿಸಲಾಗಿದೆ.

ತನಿಖೆಯಿಂದ ಮತ್ತಷ್ಟು ಮಾಹಿತಿ ಬಯಲು ಸಾಧ್ಯತೆ:

ಕೆಪಿಎಲ್ ಹಗರಣದಲ್ಲಿ ಬಗೆದಷ್ಟು ಮಾಹಿತಿಗಳು ಹೊರ ಬೀಳ್ತಿದೆ.‌ ಸದ್ಯ ಕೆಪಿಎಲ್​​ನಲ್ಲಿ ಬುಕ್ಕಿಗಳ ಪಾತ್ರ ಬಹಳಷ್ಟಿದೆ. ಯಾಕಂದ್ರೆ ಈ ಬುಕ್ಕಿಗಳು ಪ್ರತಿಷ್ಠಿತ ಆಟಗಾರರನ್ನ ಟಾರ್ಗೆಟ್ ಮಾಡಿ ಮ್ಯಾಚ್ ಫಿಕ್ಸಿಂಗ್ ಮಾಡ್ತಿದ್ರು. ಸದ್ಯ ಬುಕ್ಕಿಗಳ ಮಾಹಿತಿ ಮೇರೆಗೆ ಈಗಾಗಲೇ ಪ್ರತಿಷ್ಠಿತ ಆಟಗಾರನ ಬಂಧನವಾಗಿದೆ. ಇನ್ನು ಈ ಪ್ರಕರಣದಲ್ಲಿ ಹಲವಾರು ಆಟಗಾರರು ಭಾಗಿಯಾಗಿರುವ ಹಿನ್ನೆಲೆ ಈ ಬುಕ್ಕಿಗಳಿಂದ ಸಿಸಿಬಿ ಬಹಳಷ್ಟು ಮಾಹಿತಿ ಕಲೆಹಾಕಲಿದೆ.

Intro:ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣ
ಅಂತರಾಷ್ಟ್ರೀಯ ಬುಕ್ಕಿ ಬಂಧಿಸಿದ ಸಿಸಿಬಿ

ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ತನಿಖೆ ಬಹಳಷ್ಟು ಪ್ರತಿಷ್ಟಿತ ಹಂತಕ್ಕೆ ತಲುಪ್ತಿದೆ. ಯಾಕಂದ್ರೆ ಕೆಪಿಎಲ್ ಪ್ರಕರಣದಲ್ಲಿ ಭಾಗಿಯಾಗಿದ್ದ ಅಂತರಾಷ್ಟ್ರೀಯ ಬುಕ್ಕಿಯನ್ನ ಇದೀಗ ಸಿಸಿಬಿ ಬಂಧಿಸಿದ್ದಾರೆ. ಬುಕ್ಕಿ ಸಯ್ಯಂ ಬಂಧಿತ ಆರೋಪಿ. ಈ ಅಂತರಾಷ್ಟ್ರೀಯ ಬುಕ್ಕಿ ಸಯ್ಯಂ ಹರ್ಯಾಣ ಮೂಲದವನಾಗಿದ್ದು. ಬೆಳಗಾವಿ ಪ್ಯಾಂಥರ್ಸ್ ಮಾಲೀಕ ಅಸ್ಪಕ್ ಆಲಿಯನ್ನ ಬಂಧಿಸ್ತಿದ್ದ ಹಾಗೆ ವೆಸ್ಟ್ ಇಂಡೀಸ್ ನಲ್ಲಿ ತಲೆಮರೆಸಿಕೊಂಡಿದ್ದ.

ಕೆಪಿ ಎಲ್ ಪ್ರಕರಣದಲ್ಲಿ ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಅವರು ತನಿಖೆಗೆ ಇಳಿದಾಗ ಬಹಳ ಅಂತರಾಷ್ಟ್ರೀಯ ಬುಕ್ಕಿಗಳು ಭಾಗಿಯಾಗಿದ್ದಾರೆ ಅನ್ನೋ‌ಮಾಹಿತಿ ಮೇರೆಗೆ ತನಿಖೆಗೆ ಇಳಿದಾಗ ಭಾಗಿಯಾದ ಕೆಳ ಬುಕ್ಕಿಗಳು ಹೊರದೇಶಕ್ಕೆ ಹಾರಟ ಮಾಡಿರುವ ವಿಚಾರ ಬಯಲಿಗೆ ಬಂದಿತ್ತು. ಹೀಗಾಗಿ ಸಿಸಿಬಿ ತಲೆಮರೆಸಿಕೊಂಡವರಿಗೆ ಲುಕ್ ಔಟ್ ನೊಟೀಸ್ ಹೊರಡಿಸಿತ್ತು.. ಹೀಗಾಗಿ ಬಂಧಿತ ಆರೋಪಿ ದೆಹಲಿಗೆ ವಾಪಸ್ ಆಗ್ತಿದ್ದಂತೆ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಸಯ್ಯಂ ನನ್ನ ವಶಕ್ಕೆ ಪಡೆದು ನಗರದ ಸಿಸಿಬಿ‌ಕಚೇರಿಗೆ ಕರೆ ತಂದು ನ್ಯಾಯಲಯಕ್ಕೆ ಹಾಜರು ಪಡಿಸಿ ಹೆಚ್ಚಿನ ಮಾಹಿತಿಯನ್ನ ಪಡೆಯಲಿದ್ದಾರೆ.

ಈಗ ಬಂಧಿತನಾದ ಆರೋಪಿ ಸಯ್ಯಂ ಈ ಹಿಂದೆ ಬಂಧಿತನಾದ
ಬುಕ್ಕಿ ಭವೀಶ್ ಭಫ್ನಾ ಜೊತೆ ಸೇರಿ ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ನಲ್ಲಿ ತೊಡಗಿದ್ದ. ಈ ಭವೀಶ್ ಭಫ್ನಾ ಹಾಗೂ ಈಗ ಬಂಧನವಾದ ಸಯ್ಯಂ ಬಳ್ಳಾರಿ‌ ಟಸ್ಕರ್ ಬೌಲರ್ ಒಬ್ಬನಿಗೆ ಹಣದ ಆಮಿಷ ಹೊಡ್ಡಿ ಒಂದು ಓವರ್ ನಲ್ಲಿ ‌ನಾವು ಹೇಳಿದಷ್ಟು ರನ್‌ಕೊಟ್ಟರೆ ಕೇಳಿದಷ್ಟು ಹಣ ಕೊಡುವುದಾಗಿ ಹೇಳಿ ಮ್ಯಾಚ್ ಫಿಕ್ಸಿಂಗ್ ಮಾಡಿದ್ದರು‌ .ಈ ಆರೋಪದ ಮೇರೆಗೆ ಬಂಧಿಸಲಾಗಿದೆ

ತನಿಖೆಯಿಂದ ಮತ್ತಷ್ಟು ಮಾಹಿತಿ ಬಯಲು ಸಾಧ್ಯತೆ.

ಕೆಪಿಎಲ್ ಹಗರಣ ಬಗೆದಷ್ಟು ಮಾಹಿತಿಗಳು ಹೊರ ಬೀಳ್ತಿದೆ.‌ಸದ್ಯ ಕೆಪಿಎಲ್ ನಲ್ಲಿ ಬುಕ್ಕಿ ಗಳ ಪಾತ್ರ ಬಹಳಷ್ಟು ಪ್ರಮುಖವಾಗಿದೆ. ಯಾಕಂದ್ರೆ ಈ ಬುಕ್ಕಿಗಳು ಪ್ರತಿಷ್ಟಿತ ಆಟಗಾರರನ್ನ ಟಾರ್ಗೇಟ್ ಮಾಡಿ ಮ್ಯಾಚ್ ಫಿಕ್ಸಿಂಗ್ ಮಾಡ್ತಿದ್ರು. ಸದ್ಯ ಬುಕ್ಕಿಗಳ ಮಾಹಿತಿ ಮೇರೆಗೆ ಈಗಾಗಲೇ ಪ್ರತಿಷ್ಟಿತ ಆಟಗಾರ ಬಂಧನವಾಗಿದೆ. ಹೀಗಾಗಿ ಇನ್ನು ಈ ಪ್ರಕರಣದಲ್ಲಿ ಹಲವಾರು ಆಟಗಾರರು ಭಾಗಿಯಾಗಿರುವ ಹಿನ್ನೆಲೆ ಈ ಬುಕ್ಕಿಗಳಿಂದ ಬಹಳಷ್ಟು ಮಾಹಿತಿ ಸಿಸಿಬಿ ಪಡೆಯಲಿದ್ದಾರೆ.

Body:KN_BNG_02_KPL_7204498Conclusion:KN_BNG_02_KPL_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.