ಕೆಪಿಸಿಸಿ ಸೋಷಿಯಲ್ ಮೀಡಿಯಾ ಘಟಕದ ಸಭೆ ಮುಂದೂಡಿಕೆ - ಕೆಪಿಸಿಸಿ ಸೋಷಿಯಲ್ ಮೀಡಿಯಾ ಘಟಕದ ಸಭೆ ಮುಂದೂಡಿಕೆ
ಕೊರೊನಾ ನಿಯಂತ್ರಣ ಮುಂಜಾಗರೂಕತೆ ಕ್ರಮವಾಗಿ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಕೆಪಿಸಿಸಿ ಸೋಷಿಯಲ್ ಮೀಡಿಯಾ ವಿಭಾಗದ ಸಭೆಯನ್ನು ಮುಂದೂಡಲಾಗಿದೆ.
ಬೆಂಗಳೂರು: ನಗರದ ಕ್ವೀನ್ಸ್ ರಸ್ತೆಯ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಬೆಳಗ್ಗೆ 11 ಗಂಟೆಗೆ ಏರ್ಪಡಿಸಿದ್ದ ಕೆಪಿಸಿಸಿ ಸೋಷಿಯಲ್ ಮೀಡಿಯಾ ವಿಭಾಗದ ಸಭೆಯನ್ನು ಮುಂದೂಡಲಾಗಿದೆ.
ಕೊರೊನಾ ನಿಯಂತ್ರಣ ಮುಂಜಾಗರೂಕತೆ ಕ್ರಮವಾಗಿ ಈ ಸಭೆ ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ನಂತರ ತಿಳಿಸಲಾಗುವುದು ಎಂದು ಕೆಪಿಸಿಸಿ ಹೇಳಿಕೆಯಲ್ಲಿ ತಿಳಿಸಿದೆ. ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ನೇತೃತ್ವದಲ್ಲಿ ಸಭೆ ನಡೆಯಬೇಕಿತ್ತು. ಮೂವರು ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ ಹಾಗೂ ಸಲಿ ಮಹಮ್ಮದ್ ಕೂಡ ಪಾಲ್ಗೊಳ್ಳಬೇಕಿತ್ತು.
ರಾಜ್ಯದ 9 ಜಿಲ್ಲೆಯನ್ನು ಲಾಕ್ಡೌನ್ ಮಾಡಿರುವ ಹಿನ್ನೆಲೆ ಹಾಗೂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಸಂಚಾರವನ್ನು ನಿಲ್ಲಿಸಿರುವ ಹಿನ್ನೆಲೆ ಸಾಮಾಜಿಕ ಜಾಲತಾಣ ವಿಭಾಗದ ಸದಸ್ಯರು ಬೆಂಗಳೂರು ತಲುಪುವುದು ಸಮಸ್ಯೆಯಾಗಲಿದೆ. ಜೊತೆಗೆ ನಗರದಲ್ಲಿ ಇರುವ ಸದಸ್ಯರಿಗೂ ಕೂಡ ಸಭೆಗೆ ಆಗಮಿಸುವುದು ಸಮಸ್ಯೆಯಾಗಲಿದೆ ಎಂದು ಸಭೆಯನ್ನು ಮುಂದೂಡಲು ಕಾಂಗ್ರೆಸ್ ಪಕ್ಷ ತೀರ್ಮಾನಿಸಿದೆ.