ETV Bharat / state

ಸಮಾಜದ ಎಲ್ಲಾ ವರ್ಗದ ಜನರ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗಿರುವ ಪ್ರವೀಣ್ ಪೀಟರ್ ಗೆಲ್ಲಿಸಿ: ಸಲೀಂ ಅಹ್ಮದ್ - KPCC Salim Ahmed made campaign

ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಪ್ರವೀಣ್ ಪೀಟರ್ ಅವರ ಪರವಾಗಿ ಇಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಇಂದು ಪ್ರಚಾರ ನಡೆಸಿದರು.

Congress
Congress
author img

By

Published : Oct 18, 2020, 8:14 PM IST

ಬೆಂಗಳೂರು: ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿ ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಪರವಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಇಂದು ಪ್ರಚಾರ ನಡೆಸಿದರು.

ಚುನಾವಣೆ ಪ್ರಚಾರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ದೇಶದ ಜಾತ್ಯಾತೀತತೆ ಹಾಗೂ ವಿವಿಧತೆಯಲ್ಲಿ ಏಕತೆ ಹೊಂದಿರುವ ಗುಣದಿಂದಾಗಿ ಭಾರತವು ಜಗತ್ತಿನಾದ್ಯಂತ ಹೆಸರುವಾಸಿಯಾಗಿದೆ. ಆದರೆ ಪ್ರಸ್ತುತ ಸಂದರ್ಭದಲ್ಲಿ ಪ್ರಜಾಪ್ರಭುತ್ವವೇ ಅಪಾಯದಲ್ಲಿದೆ. ಭಾರತದ ಕಟ್ಟಕಡೆಯ ಪ್ರಜೆಯೂ ನಿರ್ಭೀತಿಯಿಂದ ಬದುಕು ಸಾಗಿಸಬೇಕಾದರೆ ಈ ಕೆಟ್ಟ ಪರಿಸ್ಥಿತಿಯಿಂದ ನಾವು ಹೊರಬರಬೇಕು. ಇದಕ್ಕಾಗಿ ವಿದ್ಯಾವಂತರು ಸಂಘಟಿತರಾಗಬೇಕು. ವಿವೇಕದಿಂದ ತಾವೆಲ್ಲರೂ ಚಿಂತಿಸಿ ಭಾರತದ ಭವಿಷ್ಯದ ದೃಷ್ಟಿಯಿಂದ ಉತ್ತಮ ಅಭ್ಯರ್ಥಿಯನ್ನು ಬೆಂಬಲಿಸಬೇಕಿದೆ. ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿರುವ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.

ಬಳಿಕ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಮಾತನಾಡಿ, ಭಾರತದ ಸಾರ್ವಭೌಮತ್ವ ಹಾಗೂ ಪ್ರಜಾಪ್ರಭುತ್ವ ಈಗ ಅಪಾಯದಲ್ಲಿವೆ. ಇದು ಭಾರತದ ಐಕ್ಯತೆಗೆ ದೊಡ್ಡ ಸವಾಲಿನ ಸಂದರ್ಭವಾಗಿದೆ. ಈಗ ವಿದ್ಯಾವಂತರಾದವರು ಭಾರತದ ಭವಿಷ್ಯದ ಕುರಿತು ಚಿಂತಿಸಬೇಕಿದೆ. ನಮ್ಮ ಮುಂದಿನ ಪೀಳಿಗೆಗೆ ನಾವು ಇದೇ ಭಾರತವನ್ನು ಕೊಡುಗೆಯಾಗಿ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಈಗ ಬರುವ ಚುನಾವಣೆ ಬಹಳ ಮುಖ್ಯದ್ದಾಗಿದೆ. ವಿದ್ಯಾವಂತರು ಸಂಘಟಿತರಾಗಿ ದೇಶದ ಭವಿಷ್ಯಕ್ಕಾಗಿ ನಮ್ಮ ಅಭ್ಯರ್ಥಿಯನ್ನು ಬೆಂಬಲಿಸಬೇಕಿದೆ ಎಂದು ಹೇಳಿದರು.

ನಂತರ ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪ್ರವೀಣ್ ಪೀಟರ್ ಮಾತನಾಡಿ, ಶಿಕ್ಷಕರು ಈ ದೇಶದ ಭವಿಷ್ಯವನ್ನು ರೂಪಿಸುವ ಜವಾಬ್ದಾರಿ ಇರುವವರು. ಅವರು ನಿಶ್ಚಿತತೆಯಿಂದ ಭವಿಷ್ಯದ ಬಗ್ಗೆ ಚಿಂತಿಸಬೇಕಾದರೆ, ವಿದ್ಯಾರ್ಥಿಗಳ ಭವಿಷ್ಯ ರೂಪಿಸಬೇಕಾದರೆ ಶಿಕ್ಷಕರಿಗೆ ಅವರು ಕೇಳುವ ಸವಲತ್ತುಗಳನ್ನು ನೀಡಬೇಕಿದೆ. ಮೂಲಭೂತ ಸೌಕರ್ಯಗಳನ್ನು ನೀಡಬೇಕಿದೆ. ಶಿಕ್ಷಕರ ಕಾರ್ಯ ಒತ್ತಡವನ್ನು ಸರ್ಕಾರಗಳು ಅರಿತುಕೊಳ್ಳಬೇಕಿದೆ. ಹೀಗಾಗಿ ಶಿಕ್ಷಕರ ಆಗುಹೋಗುಗಳನ್ನು ಅರಿತು ನಾನು ಅವರ ಸೇವೆ ಮಾಡಲು ಇದು ಉತ್ತಮ ಅವಕಾಶ ಎಂದು ಈ ಚುನಾವಣೆಗೆ ಸ್ಪರ್ಧಿಸಿದ್ದೇನೆ. ನನ್ನ ಪಕ್ಷದ ವರಿಷ್ಠರು ನನಗೆ ಈ ಅವಕಾಶ ಕೊಟ್ಟಿದ್ದಾರೆ. ನಾನು ಅತ್ಯಂತ ಪ್ರಮಾಣಿಕವಾಗಿ ಶಿಕ್ಷಕರ ಪರವಾಗಿ ಪರಿಷತ್ ನಲ್ಲಿ ದನಿ ಎತ್ತುತ್ತೇನೆ. ಶಿಕ್ಷಕರ ಎಲ್ಲಾ ಅವಶ್ಯಕತೆಗಳ ಕುರಿತು ಸರ್ಕಾರಕ್ಕೆ ಮನವರಿಕೆ ಮಾಡಿಕೊಡುತ್ತೇನೆ‌. ಹೀಗಾಗಿ ದಯವಿಟ್ಟು ನನಗೆ ಇದೊಂದು ಅವಕಾಶ ಮಾಡಿಕೊಡಿ ಎಂದರು.

ಸಭೆಯಲ್ಲಿ ಬಸವನಗುಡಿ ಮಾಜಿ ಶಾಸಕ ಕೆ ಚಂದ್ರಶೇಖರ್, ಡಿಸಿಸಿ ಅಧ್ಯಕ್ಷ ಕೃಷ್ಣಪ್ಪ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.