ETV Bharat / state

ತಮ್ಮ ನಿವಾಸದಲ್ಲಿಯೇ ವಿವಿಧ ಮುಖಂಡರೊಂದಿಗೆ ಸುದೀರ್ಘ ಚರ್ಚೆ ನಡೆಸಿದ ಡಿಕೆಶಿ - ವಿವಿಧ ಮುಖಂಡರೊಂದಿಗೆ ಡಿಕೆಶಿ ಸುದೀರ್ಘ ಚರ್ಚೆ

ಬೆಂಗಳೂರಿನ ಸದಾಶಿವ ನಗರದ ನಿವಾಸದಲ್ಲಿಯೇ ಇರುವ ಡಿಕೆಶಿ ಜಯ ಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ಜಗದೀಶ್ ಅವರ ಜತೆ ಸಮಾಲೋಚನೆ ನಡೆಸಿದರು. ರಾಜ್ಯದ ವಿವಿಧ ಆಗು ಹೋಗುಗಳ ಕುರಿತು ಉಭಯ ನಾಯಕರು ಇದೇ ಸಂದರ್ಭ ಸುದೀರ್ಘ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

DK Shivakumar meeting with congress leaders at his residence
ವಿವಿಧ ಮುಖಂಡರೊಂದಿಗೆ ಡಿಕೆಶಿ ಸುದೀರ್ಘ ಚರ್ಚೆ
author img

By

Published : Jan 25, 2022, 7:20 AM IST

Updated : Jan 25, 2022, 7:26 AM IST

ಬೆಂಗಳೂರು: ತಮ್ಮ ನಿವಾಸದಲ್ಲಿಯೇ ವಿಶ್ರಾಂತಿ ಪಡೆಯುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರನ್ನು ವಿವಿಧ ಮುಖಂಡರು ಭೇಟಿ ಮಾಡಿ, ಹಲವು ವಿಚಾರಗಳ ಬಗ್ಗೆ ಚರ್ಚಿಸಿದರು ಎಂದು ತಿಳಿದುಬಂದಿದೆ.

ಸೋಮವಾರ ಬೆಳಗ್ಗೆಯಿಂದಲೂ ಬೆಂಗಳೂರಿನ ಸದಾಶಿವ ನಗರದ ನಿವಾಸದಲ್ಲಿಯೇ ಇರುವ ಡಿಕೆಶಿ ಜಯ ಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ಜಗದೀಶ್ ಅವರ ಜತೆ ಸಮಾಲೋಚನೆ ನಡೆಸಿದರು. ರಾಜ್ಯದ ವಿವಿಧ ಆಗು-ಹೋಗುಗಳ ಕುರಿತು ಉಭಯ ನಾಯಕರು ಇದೇ ಸಂದರ್ಭ ಸುದೀರ್ಘ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಇದಾದ ಬಳಿಕ ರಾಜ್ಯ ಒಕ್ಕಲಿಗರ ಸಂಘದ ನೂತನ ಅಧ್ಯಕ್ಷ ಹಾಗೂ ಶಾಸಕ ಸಿ.ಎನ್. ಬಾಲಕೃಷ್ಣ, ನಿರ್ದೇಶಕ ಡಾ. ಅಂಜನಪ್ಪ, ಉಮಾಪತಿ, ದೇವರಾಜು, ಎನ್. ಬಾಲಕೃಷ್ಣ, ಹನುಮಂತರಾಯಪ್ಪ, ಲೋಕೇಶ್, ಕಾರ್ಯದರ್ಶಿ ಕೋನಪ್ಪರೆಡ್ಡಿ ಅವರು ಡಿಕೆಶಿಯನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ರಾಜ್ಯ ಒಕ್ಕಲಿಗರ ಸಂಘಕ್ಕೆ ನೂತನ ಅಧ್ಯಕ್ಷರು ಪದಾಧಿಕಾರಿಗಳ ನೇಮಕ ಆಗಿದ್ದು, ಮುಂಬರುವ ದಿನಗಳಲ್ಲಿ ಕೈಗೊಳ್ಳಬಹುದಾದ ಕಾರ್ಯಕ್ರಮಗಳು ಹಾಗೂ ಇತರೆ ವಿಚಾರಗಳ ಕುರಿತು ಇದೇ ಸಂದರ್ಭ ಮುಖಂಡರು ಚರ್ಚಿಸಿದರು.

KPCC President DK Shivakumar meeting with congress leaders
ಡಿಕೆಶಿ ನಿವಾಸಕ್ಕೆ ವಿವಿಧ ಮುಖಂಡರ ಭೇಟಿ

ಹಿರಿಯ ಮುಖಂಡ, ಮಾಜಿ ಸಚಿವ ಆರ್.ವಿ. ದೇಶಪಾಂಡೆ ಹಾಗೂ ಅವರ ಪುತ್ರ ಪ್ರಶಾಂತ್ ದೇಶಪಾಂಡೆ ಅವರು ಕೂಡ ಡಿಕೆಶಿ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಆರ್.ವಿ ದೇಶಪಾಂಡೆ ಸ್ಪರ್ಧಿಸುವ ವಿಚಾರದಲ್ಲಿ ಹಿಂದೇಟು ಹಾಕುತ್ತಿದ್ದಾರೆ. ವಯಸ್ಸು ಹಾಗೂ ಅನಾರೋಗ್ಯದ ಕಾರಣ ನೀಡಿ ಅವರು ಕಣದಿಂದ ಹಿಂದೆ ಸರಿಯುವ ನಿರ್ಧಾರ ಮಾಡಿದ್ದಾರೆ ಎಂಬ ಮಾಹಿತಿ ಇದೆ.

ಈ ಹಿನ್ನೆಲೆ ಉತ್ತರ ಕನ್ನಡ ಜಿಲ್ಲೆಯ ಕಾಂಗ್ರೆಸ್ ಪ್ರಾಬಲ್ಯ ಕಡಿಮೆ ಆಗದಿರಲಿ ಎಂಬ ಉದ್ದೇಶದಿಂದ ಕಾಂಗ್ರೆಸ್ ವಿವಿಧ ಹಂತದ ಪ್ರಯತ್ನ ನಡೆಸಿದ್ದು, ದೇಶಪಾಂಡೆ ಬದಲಿಗೆ ಪ್ರಶಾಂತ್ ದೇಶಪಾಂಡೆಯನ್ನು ರಾಜಕೀಯದಲ್ಲಿ ಮುಂದೆ ತರುವ ಪ್ರಯತ್ನ ನಡೆದಿದೆ. ಈ ನಿಟ್ಟಿನಲ್ಲಿ ಇಂದು ಉಭಯ ನಾಯಕರು ಮಹತ್ವದ ಮಾತುಕತೆ ನಡೆಸಿದ್ದಾರೆ ಎನ್ನಲಾಗ್ತಿದೆ.

ಇದನ್ನೂ ಓದಿ: ಬಸವಣ್ಣನವರ ಅನುಭವ ಮಂಟಪವನ್ನೇ ಮರುಸೃಷ್ಟಿಸಿ: ಸಿಎಂ ಬೊಮ್ಮಾಯಿ ಸೂಚನೆ

Last Updated : Jan 25, 2022, 7:26 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.