ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಉಷಾ ಶಿವಕುಮಾರ್ ಮಹಾಶಿವರಾತ್ರಿ ನಿಮಿತ್ತ ಬೆಂಗಳೂರಿನ ಗವಿ ಗಂಗಾಧರೇಶ್ವರ ದೇಗುಲಕ್ಕೆ ತೆರಳಿ ರಾತ್ರಿ ಪೂಜೆ ಸಲ್ಲಿಸಿದರು.
ಎಲ್ಲೆಡೆ ಶಿವರಾತ್ರಿ ಹಬ್ಬದ ಸಂಭ್ರಮ ಮನೆಮಾಡಿದ್ದು, ಸಿಲಿಕಾನ್ ಸಿಟಿಯಲ್ಲಂತೂ ಹಬ್ಬದ ವಾತಾವರಣ ಕಳೆಗಟ್ಟಿತ್ತು. ಮಾಘ ಮಾಸದ ಬಹುಳ ಚತುರ್ದಶಿಯಂದು ಶಿವರಾತ್ರಿ ಆಚರಿಸಲಾಗುತ್ತದೆ.
ಹಬ್ಬದ ಹಿನ್ನೆಲೆ ನಗರದ ಶಿವನ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆಡೆಯುತ್ತಿದ್ದು, ಕಾಡು ಮಲ್ಲೇಶ್ವರ, ಗವಿಗಂಗಾದರೇಶ್ವರ, ಮಲೈ ಮಗದೇಶ್ವರ ದೇಗುಲಗಳಲ್ಲಿ ಅದ್ಧೂರಿ ಆಚರಣೆ ಬೆಳಗಿನಿಂದ ನಡೆದಿದೆ.
ವಿವಿಧ ಶಿವನ ದೇಗುಲಗಳಿಗೆ ಸಿ. ಎಂ ಯಡಿಯೂರಪ್ಪ, ಮಾಜಿ ಸಿ.ಎಂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಜಲಾಭಿಷೇಕ, ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ಸೇರಿದಂತೆ ವಿವಿಧ ಪೂಜೆ ಸಲ್ಲಿಸಲಾಯಿತು. ಶಿವನ ದರ್ಶನಕ್ಕೆ ಸಾವಿರಾರು ಭಕ್ತರು ಆಗಮಿಸಿ ದರ್ಶನ ಪಡೆದಿದ್ದಾರೆ.
ಉಪವಾಸ ಹಾಗೂ ಜಾಗರಣೆ ಈ ಹಬ್ಬದ ವಿಶೇಷತೆಯಾಗಿದ್ದು, ನಿನ್ನೆ ಇಡೀ ರಾತ್ರಿ ನಡೆದಿದೆ.