ETV Bharat / state

ಬಿಜೆಪಿ ಸಿದ್ಧಾಂತ, ಕಾಂಗ್ರೆಸ್, ಬಿಜೆಪಿ ಬಂಡುಕೋರರ ಸಿದ್ಧಾಂತದ ನಡುವೆ ಪರಿಷತ್ ಚುನಾವಣೆ: ಡಿಕೆಶಿ - ಡಿಕೆಶಿ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ

ಸಾಮಾಜಿಕ ನ್ಯಾಯದ ಬಗ್ಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮಾತಾಡ್ತಾರೆ. ನಾವು ಎಲ್ಲ ಜನಾಂಗದವರಿಗೂ ಸಹ ಟಿಕೇಟ್ ನೀಡಿದ್ದೇವೆ. ಯಾರೊ ಒಬ್ಬರು ಸಾಮಾಜಿಕ ನ್ಯಾಯದ ಬಗ್ಗೆ ಮಾತಾಡ್ತಾರೆ ಎಂದು ರಮೇಶ್ ಜಾರಕಿಹೊಳಿ ವಿರುದ್ಧ ಡಿ.ಕೆ.ಶಿವಕುಮಾರ್ ಹರಿಹಾಯ್ದರು.

ಬಿಜೆಪಿ ಸರ್ಕಾರದ ವಿರುದ್ಧ ಡಿಕೆಶಿ ವಾಗ್ದಾಳಿ
ಬಿಜೆಪಿ ಸರ್ಕಾರದ ವಿರುದ್ಧ ಡಿಕೆಶಿ ವಾಗ್ದಾಳಿ
author img

By

Published : Dec 5, 2021, 8:24 PM IST

ಚಿಕ್ಕೋಡಿ: ಬಿಜೆಪಿ ಸಿದ್ಧಾಂತ, ಕಾಂಗ್ರೆಸ್​​ ಸಿದ್ಧಾಂತ, ಬಿಜೆಪಿ ಬಂಡುಕೋರರ ಸಿದ್ಧಾಂತದ ನಡುವೆ ಈ ವಿಧಾನ ಪರಿಷತ್​ ಚುನಾವಣೆ ನಡೆಯುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ಬಿಜೆಪಿ ಸರ್ಕಾರದ ವಿರುದ್ಧ ಡಿಕೆಶಿ ವಾಗ್ದಾಳಿ

ರಾಯಬಾಗದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಕಳೆದ 30 ವರ್ಷಗಳಿಂದ ಬೆಳಗಾವಿಯನ್ನು ನಾನು ಹತ್ತಿರದಿಂದ ಬಲ್ಲೆ. ಆದ್ರೆ ಇಷ್ಟು ಒಗ್ಗಟ್ಟನ್ನು ನಾನು ಕಂಡಿರಲಿಲ್ಲ. ಇಲ್ಲಿನ ಜನ ನನಗೆ ನೆರೆ ಪರಿಹಾರ ಕೊಡಿ ಅಂತ ಮನವಿ ಮಾಡುತ್ತಿದ್ದಾರೆ. ಸಾಮೂಹಿಕ ಆತ್ಮಹತ್ಯೆಗೆ ಅನುಮತಿ ನೀಡಿ ಅಂತ ಹೇಳುತ್ತಿದ್ದಾರೆ. ನೆರೆ ಪರಿಹಾರದ ಪರವಾಗಿ ನಾನು, ಸಿದ್ದರಾಮಯ್ಯ ನಿಂತು ಹೋರಾಟ ಮಾಡುತ್ತೇವೆ ಎಂದು ಡಿಕೆಶಿ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ನಮ್ಮಿಂದ ಆ ಕೊಳೆ ದೂರ ಹೋಯ್ತಲ್ಲ, ಅದು ನಮ್ಮ ಭಾಗ್ಯ ಎಂದು ಪರೋಕ್ಷವಾಗಿ ಬಹಿರಂಗ ವೇದಿಕೆಯಲ್ಲೇ ರಮೇಶ್ ಜಾರಕಿಹೊಳಿಗೆ ಡಿಕೆಶಿ ಟಾಂಗ್‌ ಕೊಟ್ಟರು.‌ ಸಾಮಾಜಿಕ ನ್ಯಾಯದ ಬಗ್ಗೆ ರಮೇಶ್ ಜಾರಕಿಹೊಳಿ ಮಾತಾಡ್ತಾರೆ. ನಾವು ಎಲ್ಲ ಜನಾಂಗದವರಿಗೂ ಸಹ ಟಿಕೇಟ್ ನೀಡಿದ್ದೇವೆ. ಯಾರೊ ಒಬ್ಬರು ಸಾಮಾಜಿಕ ನ್ಯಾಯದ ಬಗ್ಗೆ ಮಾತಾಡ್ತಾರೆ ಎಂದು ರಮೇಶ್​ ವಿರುದ್ಧ ಹರಿಹಾಯ್ದರು. ಈಗಾಗಲೇ ಎಲೆಕ್ಷನ್ ಕಮಿಷನ್ ನಿರ್ಧಾರ ಮಾಡಿದೆ. ಯಾರೂ ಸಹ ಬೇರೆಯವರ ಪರವಾಗಿ ವೋಟ್ ಹಾಕಲು ಆಗುವುದಿಲ್ಲ. ಎಲ್ಲವೂ ಸಹ ಕ್ಯಾಮರಾದಲ್ಲಿ ರೆಕಾರ್ಡ್ ಆಗಲಿದ್ದು, ಚನ್ನರಾಜ್ ಹಟ್ಟಿಹೊಳಿ ಅವರಿಗೆ ಮತ ನೀಡಿ, ಗೆಲ್ಲಿಸುವಂತೆ ಮನವಿ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.