ETV Bharat / state

ಲಾಕ್​ಡೌನ್​ಗಿಂತ ಜನರ ಜೀವ, ಜೀವನ ಮುಖ್ಯ: ಡಿ.ಕೆ.ಶಿವಕುಮಾರ್

ಲಾಕ್​ಡೌನ್ ಮಾಡಬಾರದು ಅನ್ನೋದು ನನ್ನ ವೈಯಕ್ತಿಕ ಅಭಿಪ್ರಾಯ. ಮಹಾರಾಷ್ಟ್ರ ಮಾದರಿ ಬಗ್ಗೆ ನಾನು ಮಾತನಾಡಲ್ಲ. ಲಾಕ್​ಡೌನ್​ಗಿಂತ ಜೀವ ಹಾಗೂ ಜೀವನ ಮುಖ್ಯ ಎಂದು ಡಿಕೆಶಿ ಹೇಳಿದರು.

KPCC President DK Shivakumar on lockdown
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
author img

By

Published : Apr 14, 2021, 12:16 PM IST

ಬೆಂಗಳೂರು: ಸರ್ಕಾರ ಅವರದೇನೋ ಮುಚ್ಚಿಕೊಳ್ಳೋಕೆ ಲಾಕ್​ಡೌನ್, ಮತ್ತೊಂದು ಅನ್ನುತ್ತಿದ್ದಾರೆ. ನಮಗಿನ್ನೂ ಸರ್ವಪಕ್ಷಗಳ ಸಭೆಯ ನೋಟಿಸ್ ಬಂದಿಲ್ಲ, ಬಂದ ನಂತರ ಪಕ್ಷದ ನಾಯಕರುಗಳು ಕುಳಿತು ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಲಾಕ್​ಡೌನ್ ಮಾಡಬಾರದು ಅನ್ನೋದು ನನ್ನ ಅಭಿಪ್ರಾಯ. ಮಹಾರಾಷ್ಟ್ರ ಮಾದರಿ ಬಗ್ಗೆ ನಾನು ಮಾತನಾಡಲ್ಲ. ನಮ್ಮನ್ನು ಕರೆಸಿ ಮಾತನಾಡಿದ ಮೇಲೆ ನಮ್ಮ ಸಲಹೆ ಪರಿಗಣಿಸಬೇಕು. ಸುಮ್ಮನೆ ಸಭೆ ನಡೆಸಿ ಅವರಿಷ್ಟ ಬಂದಂತೆ ನಡೆದುಕೊಳ್ಳೋದಲ್ಲ ಎಂದರು.

ಇದನ್ನೂ ಓದಿ: ಎಚ್ಚರಿಕೆ ಕಡೆಗಣಿಸಿದ ಸರ್ಕಾರ ಯಾವ ಸಭೆ ನಡೆಸಿ ಏನು ಉಪಯೋಗ?: ಹೆಚ್​ಡಿಕೆ

ಕಾಂಗ್ರೆಸ್ ಕಚೇರಿಯಲ್ಲಿ ಅಂಬೇಡ್ಕರ್ ಜಯಂತಿ:

ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನದ ಅಂಗವಾಗಿ ಡಿ.ಕೆ.ಶಿವಕುಮಾರ್ ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕಾಂಗ್ರೆಸ್ ಕಚೇರಿಯಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಕೇಂದ್ರದ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ ಈ ವೇಳೆ ಉಪಸ್ಥಿತರಿದ್ದರು.

ಮಸ್ಕಿ ಚುನಾವಣೆ ಪ್ರಚಾರಕ್ಕೆ ತೆರಳುವ ಹಿನ್ನೆಲೆಯಲ್ಲಿ ನಿಗದಿತ ಸಮಯಕ್ಕಿಂತ ಮೊದಲೇ ಅವರು ಕಾಂಗ್ರೆಸ್ ಕಚೇರಿಗೆ ಆಗಮಿಸಿದ್ದರು.

ಅಂಬೇಡ್ಕರ್ ಕೊಟ್ಟ ಸಂವಿಧಾನವೇ ನಮ್ಮ ಪಾಲಿಗೆ ಭಗವದ್ಗೀತೆ, ಬೈಬಲ್ ಹಾಗೂ ಕುರಾನ್. ಅದನ್ನು ಬದಲಿಸಬೇಕು ಅಂತ ಕೆಲವರು ಪ್ರಯತ್ನಿಸುತ್ತಿದ್ದಾರೆ. ಆದರೆ ಅದು ಸಾಧ್ಯವಿಲ್ಲ. ನಾವೆಲ್ಲಾ ಅಂಬೇಡ್ಕರ್ ಅವರ ಸಂವಿಧಾನದ ಆಶಯದಂತೆ ಬದುಕಬೇಕು ಎಂದು ಡಿಕೆಶಿ ಹೇಳಿದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಬೆಡ್ ಅಭಾವ, ಸಾವು ಹೆಚ್ಚಳ, ಲಸಿಕೆ ಕೊರತೆ: ಕೈಗೊಂಡ ಕ್ರಮಗಳ ವಿವರ ಇಲ್ಲಿದೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.