ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಆರೋಪ ಪ್ರಕರಣ ಸಂಬಂಧ ಇಂದು ಸಿಬಿಐ ಮುಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಜರಾಗಿದ್ದಾರೆ.
ಸಿಬಿಐ ನೋಟಿಸ್ ನೀಡಿದ ಹಿನ್ನೆಲೆ ಇಂದು ಮಧ್ನಾಹ್ಯ 12.45ಕ್ಕೆ ಸಿಬಿಐ ಕಚೇರಿಗೆ ವಕೀಲರ ಜೊತೆ ಡಿ.ಕೆ.ಶಿವಕುಮಾರ್ ಆಗಮಿಸಿದ್ದಾರೆ. ಕಳೆದ ಒಂದು ಗಂಟೆಯಿಂದ ತನಿಖಾಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
2020 ನವೆಂಬರ್ 25ರಂದು ವಿಚಾರಣೆ ಎದುರಿಸಿದ್ದ ಡಿ.ಕೆ. ಶಿವಕುಮಾರ್ ಅವರಿಗೆ ಪುನಃ ವಿಚಾರಣೆಗೆ ಹಾಕರಾಗುವಂತೆ ಸಿಬಿಐ ನೋಟಿಸ್ ನೀಡಿತ್ತು. ಈ ಹಿನ್ನೆಲೆ ಇಂದು ವಿಚಾರಣೆಗೆ ಹಾಜರಾಗಿದ್ದಾರೆ.
ಇದನ್ನೂ ಓದಿ: ನಾಳೆ ಸಚಿವ ಸಂಪುಟ ವಿಸ್ತರಣೆ ಇದೆ.. ಸದ್ಯ ಚರ್ಚೆ ಅನಗತ್ಯ ಎಂದ ಡಿಸಿಎಂ ಸವದಿ