ETV Bharat / state

ಗಲಭೆಗೆ ಖಂಡನೆ ವ್ಯಕ್ತಪಡಿಸಿದ ದಿನೇಶ್ ಗುಂಡೂರಾವ್​-ರಿಜ್ವಾನ್ ಅರ್ಷದ್

ನಿನ್ನೆ ನಡೆದ ಘಟನೆ ಬಗ್ಗೆ ನಾವೆಲ್ಲರೂ ಖಂಡಿಸುತ್ತೇವೆ. ಯಾರೇ ತಪ್ಪು ಮಾಡಿದ್ರೂ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಕಿಡಿಗೇಡಿಗಳ ಕೃತ್ಯ ಖಂಡನೀಯ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಆಗಬೇಕು. ಎಲ್ಲಾ ಸಂಘಟನೆಗಳನ್ನು ಬ್ಯಾನ್ ಮಾಡಲಿ ಎಂದು ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಹೇಳಿದ್ದಾರೆ.

dinesh gundurao
dinesh gundurao
author img

By

Published : Aug 12, 2020, 3:38 PM IST

ಬೆಂಗಳೂರು: ಶವದ ಮೇಲೆ ರಾಜಕಾರಣ ಮಾಡುವುದು ಬಿಜೆಪಿ ಚಾಳಿ. ಫೇಸ್​ಬುಕ್​ಗೆ ಹಾಕಿರುವ ಫೋಸ್ಟ್ ಖಂಡಿನೀಯ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಯಾವುದೇ ಧರ್ಮದವರ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಮಾಡಬಾರದು. ಪೊಲೀಸರು ದೂರು ಮೊದಲೇ ತೆಗೆದುಕೊಂಡಿದ್ರೆ ಪ್ರಕರಣ ಈ ರೀತಿ ತಿರುವು ಪಡೆದುಕೊಳ್ಳುತ್ತಿರಲಿಲ್ಲ. ಕಾನೂನು ಕೈಗೆತ್ತಿಕೊಂಡಿರುವುದು ಸರಿಯಲ್ಲ. ಗಲಭೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಬಿಜೆಪಿಯವರು ಶವದ ಮೇಲೆ ರಾಜಕಾರಣ ಮಾಡ್ತಾರೆ. ಬಜರಂಗದಳ ಮತ್ತು ಆರ್​ಎಸ್​​ಎಸ್​ನವರು ಎಷ್ಟು ಇಂತಹ ಘಟನೆ ಮಾಡಿಲ್ಲ. ಸಿಎಂ ಒಂದು ರೀತಿ ಹೇಳಿಕೆ ಕೊಡ್ತಾರೆ, ಸಂತೋಷ್ ಜೀ ಇನ್ನೊಂದು ಹೇಳಿಕೆ ಕೊಡ್ತಾರೆ ಎಂದರು.

ಪ್ರಚೋದನೆ ಮಾಡುವ ಕೆಲಸ ಬೇಡ. ಬೆಂಕಿ ಹಚ್ಚುವುದು ಸುಲಭ. ಶಮನ ಮಾಡುವುದು ಕಷ್ಟ. ಯಾವುದೇ ಸಂಘಟನೆ ತಪ್ಪು ಮಾಡಿದ್ರೂ ಕ್ರಮ ಕೈಗೊಳ್ಳಲಿ. ಹಿಂದು, ಮುಸ್ಲಿಂ ಅನ್ನೋ ಭೇದ ಭಾವ ಬೇಡ. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಮೇಲೆ ನನಗೆ ನಂಬಿಕೆ ಇದೆ ಎಂದು ಹೇಳಿದರು.

ಘಟನೆ ಖಂಡನೀಯ

ನಿನ್ನೆ ನಡೆದ ಘಟನೆಯನ್ನು ನಾವೆಲ್ಲರೂ ಖಂಡಿಸುತ್ತೇವೆ. ಯಾರೇ ತಪ್ಪು ಮಾಡಿದ್ರೂ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ನಿನ್ನೆ ಠಾಣೆಯ ಅಧಿಕಾರಿಗಳು ದೂರು ತೆಗದುಕೊಂಡಿದ್ರೆ ಈ ಘಟನೆ ಆಗ್ತಿರಲಿಲ್ಲ ಅನಿಸುತ್ತೆ. ಇದರ ಹಿಂದೆ ಯಾರು ಇದ್ದಾರೆ ಅನ್ನೋದು ತನಿಖೆಯಾಗಬೇಕು. ಕಾನೂನು ಅಡಿಯಲ್ಲಿ ಕ್ರಮ ತೆಗದುಕೊಳ್ಳಬೇಕು. ಬಿಜೆಪಿಯವರು ಇದನ್ನ ರಾಜಕೀಯ ಮಾಡೋದಕ್ಕೆ ಹೋಗಿದ್ದಾರೆ ಎಂದರು.

ಪ್ರತಿಕ್ರಿಯೆ ನೀಡದ ಜಮೀರ್ ಅಹ್ಮದ್ ಖಾನ್

ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದ ಜಮೀರ್ ಅಹ್ಮದ್ ಖಾನ್ ಹಾಗೆಯೇ ಸಭೆಗೆ ತೆರಳಿದರು. ಘಟನೆ ಬಗ್ಗೆ ಟ್ವೀಟ್ ಮಾಡಿ ಸುಮ್ಮನಾಗಿರುವ ಜಮೀರ್ ಅಹ್ಮದ್ ಖಾನ್ ಕೆಪಿಸಿಸಿ ಕಚೇರಿಯಲ್ಲಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಮಾತನಾಡಿ, ಘಟನೆ ನಡೆದ ಸ್ಥಳಕ್ಕೆ ನಾನು ಮತ್ತು ಜಮೀರ್ ಅಹಮದ್ ಅವರು ಹೋಗಿದ್ವಿ. ಸ್ಥಳದಲ್ಲಿ ಜನ ಜಾಸ್ತಿ‌ ಇದ್ರು, ಪೊಲೀಸರು ಕಮ್ಮಿ ಇದ್ರು. ನಿನ್ನೆ ಸಂಜೆ 4 ಗಂಟೆಗೆ ಫೇಸ್​ಬುಕ್​ನಲ್ಲಿ‌ ಕಿಡಿಗೇಡಿಯಿಂದ ಪೋಸ್ಟ್ ಪ್ರಕಟ ಆಯ್ತು. ಬಳಿಕ ಆ ಪೋಸ್ಟ್ ವೈರಲ್ ಆಯ್ತು. ಸಂಜೆಯಿಂದ ರಾತ್ರಿವರೆಗೆ ಪೊಲೀಸರ ಬಳಿ ಸಮಯ ಇತ್ತು. ಯಾಕೆ ಆ ಸಮಯದಲ್ಲಿ ಪೊಲೀಸರು ಕ್ರಮ ಕೈಗೊಳ್ಳಲಿಲ್ಲ. ಘಟನೆಗೆ ಇಂಟಲಿಜೆನ್ಸ್ ವಿಫಲ ಆಗಿರೋದೇ ಕಾರಣ ಎಂದರು.

ಸಿಕ್ಕಿದ್ದ ಸಮಯದಲ್ಲಿ ಕ್ರಮ ಕೈಗೊಳ್ಳದೇ ಗಲಭೆ ನಡೆಯಲು ಅವಕಾಶ ಕೊಡಲಾಗಿದೆ. ಕಿಡಿಗೇಡಿಗಳ ಕೃತ್ಯ ಖಂಡನೀಯ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಆಗಬೇಕು. ಎಲ್ಲಾ ಸಂಘಟನೆಗಳನ್ನು ಬ್ಯಾನ್ ಮಾಡಲಿ. ಸಂಘಟನೆಗಳ ಬ್ಯಾನ್ ವಿಚಾರದಲ್ಲಿ ರಾಜಕೀಯ ಲಾಭ ನೋಡೋದು ಸರಿಯಲ್ಲ. ಬಲಪಂಥೀಯ ಮತ್ತು ಎಡಪಂಥೀಯ ಎರಡೂ ಸಂಘಟನೆಗಳಿವೆ. ನಿಮ್ಮ ರಾಜಕೀಯ ಲಾಭಕ್ಕೆ, ರಾಜಕಾರಣಕ್ಕೆ ಮಾತ್ರ ಒಂದೆರಡು ಸಂಘಟನೆ ಬ್ಯಾನ್ ಮಾಡೋದಲ್ಲ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.