ETV Bharat / state

ಚಾಮರಾಜನಗರದ 24 ಜನರ ಸಾವಿಗೆ ಯಾರು ಹೊಣೆ?.. ಸರ್ಕಾರದ ವಿರುದ್ಧ ಡಿಕೆಶಿ ಕಿಡಿ - ಡಿ.ಕೆ. ಶಿವಕುಮಾರ್ ಆಕ್ರೋಶ

ಆಕ್ಸಿಜನ್ ಕೊಡಿ ಎಂದು ಕೇಳಿದ್ರೆ ನೀಡಲು ಆಗುತ್ತಿಲ್ಲ. ಈ ಸಂದರ್ಭ ನೋಡಲು ನನಗೂ ಬೇಸರ ಆಗುತ್ತಿದೆ. ರೋಗಿಗಳ ಸಾವಿಗೆ ಕಾರಣರಾದವರ ಮೇಲೆ ಕ್ರಮ ಏನು? ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ..

dk shivakumar
ಡಿ.ಕೆ. ಶಿವಕುಮಾರ್
author img

By

Published : May 3, 2021, 12:34 PM IST

Updated : May 3, 2021, 12:54 PM IST

ಬೆಂಗಳೂರು : ಸರ್ಕಾರ ಕೇವಲ ಪ್ರಚಾರ ಪ್ರಿಯ. ಅಧಿಕಾರಿಗಳು, ಮಂತ್ರಿಗಳನ್ನು ಎಲ್ಲೂ ಕಳಿಸಿಲ್ಲ. ಆಕ್ಸಿಜನ್ ಕೂಡ ಕೊಡಲು ಸಾಧ್ಯವಿಲ್ಲ ಅಂದರೆ ಏನು? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡಿ.ಕೆ. ಶಿವಕುಮಾರ್

ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೆಲವರಿಗೆ ಇಂತಿತ ಆಸ್ಪತ್ರೆ, ಅಧಿಕಾರಿಗಳು ಇಂತಿಥವರು ಅಂತ ಹೇಳ್ತಾರೆ. ಆದರೆ, ಯಾರೂ ಕರೆ ಮಾಡುತ್ತಿಲ್ಲ. ಆಕ್ಸಿಜನ್ ವಿಚಾರದಲ್ಲೂ ಸರಿಯಾಗಿ ಏನು ಮಾಡ್ತಾ ಇಲ್ಲ.

ಹೀಗಾಗಿ, ನಮ್ಮ ಶಾಸಕರು ಸಿಎಂ ಭೇಟಿಯಾಗಲು ನಿರ್ಧರಿಸಿದ್ದೇವೆ. ನಮ್ಮ ಮರ್ಯಾದೆ ಹೋದರು ಕೂಡ ಪರವಾಗಿಲ್ಲ. ಸಿಎಂ ಭೇಟಿಯಾಗಿ ವಾಸ್ತವ ಕೇಳುತ್ತೇವೆ ಎಂದರು.

ತಜ್ಞರು ಅಂತ ಇದಾರಲ್ಲ ಅವರ ಬಗ್ಗೆ ಕೂಡ ನಂಬಿಕೆ ಕಳೆದುಕೊಂಡಿದ್ದಾರೆ. ಭೂಮಿಯಲ್ಲಿ ಹುಟ್ಟಿದ ತಕ್ಷಣ ಗಾಳಿ ಕೇಳ್ತಾರೆ. ಅಂತದ್ದನ್ನೇ ಸರ್ಕಾರದಿಂದ ಪೂರೈಸಲು ಸಾಧ್ಯವಾಗುತ್ತಿಲ್ಲ. ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಆರೋಗ್ಯ ಇಲಾಖೆ ಕಾರ್ಯದರ್ಶಿಯನ್ನು ನಾನೇ ಭೇಟಿಯಾಗ್ತಿನಿ.

ಚಾಮರಾಜನಗರದಲ್ಲಿ ಆಮ್ಲಜನಕ ಕೊರತೆಯಿಂದ ಆದ 24 ಜನರ ಸಾವಿಗೆ ಯಾರು ಜವಾಬ್ದಾರಿ? ಇದಕ್ಕೆ ಯಾರು ಹೊಣೆ ? ಮಾಧ್ಯಮದವರು ಸತ್ಯ ಹೇಳಿದ್ರೆ ತಪ್ಪಾ? ಎಂದು ಡಿಕೆಶಿ ಪ್ರಶ್ನಿಸಿದ್ದಾರೆ.

ಈ ಸರ್ಕಾರದಲ್ಲಿ ಏನಾಗ್ತಾ ಇದೆ ಎಂದು ಗೊತ್ತಾಗುತ್ತಿಲ್ಲ. ಜನ ಸರ್ಕಾರದ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ. 24 ಜನರನ್ನು ಕಳೆದುಕೊಂಡ ಕುಟುಂಬಗಳಿಗೆ ಏನು ಹೇಳಬೇಕು ಗೊತ್ತಿಲ್ಲ. ನಮ್ಮ ಕಾರ್ಯಕರ್ತರು ಧೈರ್ಯ ತುಂಬ ಬೇಕು. ಕೊರೊನಾ ನಿಯಂತ್ರಣ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ.

ಮೂವರು ಸಚಿವರು ಬಿಟ್ರೆ ಬೇರೆಯವರು ಜಿಲ್ಲೆಗೆ ಹೋಗಲಿಲ್ಲ. ಆಕ್ಸಿಜನ್ ವಿಚಾರದಲ್ಲಿ ಯಾರು ಮಾನಿಟರ್ ಮಾಡುತ್ತಿಲ್ಲ. ಮಂತ್ರಿಗಳು ಮತ್ತು ಸಿಎಂ ಲೋಕ ಮತ್ತು ವಿಚಾರ ಬೇರೆ ಇದೆ. ನಾನೇ ಸರ್ಕಾರದ ಮುಖ್ಯ ಕಾರ್ಯದರ್ಶಿ ಭೇಟಿ ಆಗ್ತೀನಿ. ವಾಸ್ತವಂಶ ಏನಿದೆ ತಿಳಿಸಿ ಎಂದು ಕೇಳುತ್ತೇನೆ.

ಆಕ್ಸಿಜನ್ ಕೊಡಿ ಎಂದು ಕೇಳಿದ್ರೆ ನೀಡಲು ಆಗುತ್ತಿಲ್ಲ. ಈ ಸಂದರ್ಭ ನೋಡಲು ನನಗೂ ಬೇಸರ ಆಗುತ್ತಿದೆ. ರೋಗಿಗಳ ಸಾವಿಗೆ ಕಾರಣರಾದವರ ಮೇಲೆ ಕ್ರಮ ಏನು? ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ.

ಈ ಸರ್ಕಾರದ ಜವಾಬ್ದಾರಿ ತೆಗೆದುಕೊಂಡ ಸಚಿವರ ಮೇಲೆ ನಂಬಿಕೆ ಇಲ್ಲ. ತಾಂತ್ರಿಕ ಸಲಹಾ ತಜ್ಞರು ಒಳ್ಳೆಯವರು ಇರಬಹುದು. ಆದ್ರೆ, ಅವರು ನಂಬಿಕೆ ಕಳೆದುಕೊಂಡಿದ್ದಾರೆ ಎಂದು ಹೇಳಿದರು.

ಓದಿ: ಚಾಮರಾಜನಗರದಲ್ಲಿ ಭೀಕರ ದುರಂತ: 24 ಸಾವು, ಆಕ್ಸಿಜನ್‌ ಸಿಗದೆ 12 ಮಂದಿ ಕೊನೆಯುಸಿರು

Last Updated : May 3, 2021, 12:54 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.