ETV Bharat / state

ವರ್ತೂರ್​ ಪ್ರಕಾಶ್​ ಕಿಡ್ನಾಪ್​ ಪ್ರಕರಣ: ತನಿಖೆ ಚುರುಕುಗೊಳಿಸಿದ ಪೊಲೀಸರು - ಮಾಜಿ ಸಚಿವ ಅಪಹರಣ ಪ್ರಕರಣ

ವರ್ತೂರ್ ಪ್ರಕಾಶ್ ಅಪಹರಣ ಪ್ರಕರಣ ಬೆಂಗಳೂರಿನ ಬೆಳ್ಳಂದೂರು ಠಾಣೆಯಿಂದ ಕೋಲಾರಕ್ಕೆ ಶಿಫ್ಟ್ ಆದ ಕೂಡಲೇ ಕೋಲಾರ ಪೊಲೀಸರು ನಿನ್ನೆ ರಾತ್ರಿಯಿಂದಲೇ ತನಿಖೆ ಕೈಗೆತ್ತಿಕೊಂಡಿದ್ದಾರೆ. ಅಷ್ಟೇ ಅಲ್ಲ ನಿನ್ನೆ ರಾತ್ರಿ ವರ್ತೂರ್​ ಪ್ರಕಾಶ್​ ಹೇಳಿಕೆ ಪಡೆದು ಮೆಡಿಕಲ್​ ಟೆಸ್ಟ್​ ಮಾಡಿಸಿ ಇಂದು ವಿಚಾರಣೆ ಶುರು ಮಾಡಿಕೊಂಡಿದ್ದಾರೆ. ಹಾಗಿದ್ರೆ ಇವತ್ತು ಏನೆಲ್ಲಾ ಆಯ್ತು ಅನ್ನೋ ಸಂಪೂರ್ಣ ವರದಿ ಇಲ್ಲಿದೆ.

Varthur Prakash
ವರ್ತೂರ್​ ಪ್ರಕಾಶ್
author img

By

Published : Dec 3, 2020, 9:09 PM IST

ಬೆಂಗಳೂರು: ಮಾಜಿ ಸಚಿವ, ರಿಯಲ್​ ಎಸ್ಟೇಟ್​ ಉದ್ಯಮಿ ವರ್ತೂರ್ ಪ್ರಕಾಶ್ ಅಪಹರಣ ಪ್ರಕರಣ ದಿನದಿಂದ ದಿನಕ್ಕೆ ಸಾಕಷ್ಟು ಕುತೂಹಲ ಕೆರಳಿಸುತ್ತಿದೆ, ಇದು ನಿಜಕ್ಕೂ ಹಣಕ್ಕಾಗಿಯೇ ನಡೆದಿದ್ಯಾ ಇಲ್ಲ ಹೆಣ್ಣಿನ ವಿಚಾರಕ್ಕಾಗಿ ಏನಾದ್ರು ನಡೆದಿದ್ಯಾ ಅನ್ನೋ ಅನುಮಾನ ಎಲ್ಲರಲ್ಲೂ ಕಾಡುತ್ತಿದೆ.

ಬುಧವಾರ ಸಂಜೆ ಬೆಳ್ಳಂದೂರಿನಿಂದ ಬಂದ ಪ್ರಕರಣವನ್ನು ಕೋಲಾರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ನಿನ್ನೆ ರಾತ್ರಿಯೇ ಸ್ಥಳ ಮಹಜರು ಮಾಡಿದ್ದಾರೆ, ನಂತರ ವರ್ತೂರ್​ ಪ್ರಕಾಶ್​ ಹೇಳಿಕೆ ಪಡೆದು ಅವರನ್ನು ಮೆಡಿಕಲ್​ ಟೆಸ್ಟ್​ಗೂ ಒಳಪಡಿಸಿದ್ರು. ​ಇನ್ನು ಇಂದು ಬೆಳಗ್ಗೆ ಪ್ರಕರಣದಲ್ಲಿ ಕಿಡ್ನಾಪರ್ಸ್​ಗೆ ವರ್ತೂರ್​ ಪ್ರಕಾಶ್​ ಸೂಚನೆ ಮೇರೆಗೆ 48 ಲಕ್ಷ ರೂಪಾಯಿ ಹಣ ನೀಡಿದ್ದ ವರ್ತೂರ್​ ಆಪ್ತ ನಯಾಜ್​ನನ್ನು ವಿಚಾರಣೆ ನಡೆಸಿದ್ದಾರೆ.

ಇನ್ನು ಈ ಬಗ್ಗೆ ಹಣಕೊಟ್ಟ ನಯಾಜ್ ಸೋದರ ಸಿರಾಜ್​ ಪ್ರತಿಕ್ರಿಯಿಸಿದ್ದು, ಅವತ್ತು ವರ್ತೂರ್​ ಪ್ರಕಾಶ್​ ಫೋನ್​ ಮಾಡಿದ್ದಾಗ ನಾನು ಸಿರಾಜ್​ ಜೊತೆಗಯಲ್ಲೇ ಇದ್ದೆ, ಅವತ್ತು ನಮ್ಮ ಬಳಿ ಹಸು ಮಾರಿದ್ದ 48 ಲಕ್ಷ ಹಣವಿತ್ತು ಅದನ್ನು ವರ್ತೂರ್​ ಪ್ರಕಾಶ್​ ಪೋನ್​ ಮಾಡಿ ನರಸಾಪುರ ಕಾಫಿಡೇ ಬಳಿ ಒಬ್ಬರು ಬರ್ತಾರೆ ಅವರಿಗೆ ನೀಡಲು ತಿಳಿಸಿದ್ರು ಅದರಂತೆ ಅವರಿಗೆ ಹಣಕೊಟ್ಟಿದ್ದಾಗಿ ನಯಾಜ್​ ಸಹೋದರ ಸಿರಾಜ್​ ಹೇಳಿದ್ದಾನೆ.

ಸಿನಿಮೀಯ ಶೈಲಿಯಲ್ಲಿ ಅಪಹರಣ: ವರ್ತೂರು ಪ್ರಕಾಶ್ ನೀಡಿದ ದೂರಿನ ಸಂಪೂರ್ಣ ಮಾಹಿತಿ....

ಈ ಬಗ್ಗೆ ಎಸ್ಪಿ ಕಾರ್ತಿಕ್​ ರೆಡ್ಡಿ ಸಹ ಖುದ್ದು ತನಿಖೆ ಶುರುಮಾಡಿಕೊಂಡಿದ್ದಾರೆ. ಅದರಂತೆ ಇಡೀ ಪ್ರಕರಣದಲ್ಲಿ ವರ್ತೂರ್​ ಪ್ರಕಾಶ್​ ಜೊತೆಗಿದ್ದ ಡ್ರೈವರ್​ ಸುನೀಲ್​ನನ್ನು ಗುಪ್ತ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದ ಎಸ್ಪಿ ಹಾಗೂ ತನಿಖಾ ತಂಡ ಪಿನ್​ ಟು ಪಿನ್​ ತನಿಖೆ ನಡೆಸಿದೆ. ಇನ್ನು ಇಡೀ ಪ್ರಕಣದ ತನಿಖೆಗಾಗಿ ಎಎಸ್ಪಿ ಜಾಹ್ನವಿ ಹಾಗೂ ಸುಹೇಲ್​ ಬಾಗ್ಲಾ‌ ನೇತೃತ್ವದಲ್ಲಿ 2 ಸಿಪಿಐ ಮತ್ತು 5 ಪಿಎಸ್ಐ ಒಳಗೊಂಡ ತಂಡ ರಚನೆ ಮಾಡಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ.

ವರ್ತೂರ್​ ಪ್ರಕಾಶ್​ ಕಿಡ್ನಾಪ್​ ವಿಚಾರವಾಗಿ ಕೋಲಾರ ಶಾಸಕ ಕೆ.ಶ್ರೀನಿವಾಸಗೌಡ ಹಾಗೂ ಸಂಸದ ಎಸ್​.ಮುನಿಸ್ವಾಮಿ ಇಂದು ಪ್ರತಿಕ್ರಿಯಿಸಿ, ಈ ರೀತಿ ಯಾರಿಗೂ ಆಗಬಾರದು. ವಿಷಯ ತಿಳಿದು ಬಹಳ ನೋವಾಗಿದೆ ಇದನ್ನು ನಾವು ಖಂಡಿಸುತ್ತೇವೆ ಅವರು ನನಗೆ ರಾಜಕೀಯವಾಗಿ ಎದುರಾಳಿ ಅಷ್ಟೇ, ಆದ್ರೆ ಅವರಿಗೆ ಈ ರೀತಿ ಮಾಡಿದವರು ಎಷ್ಟೇ ದೊಡ್ಡವರಾಗಿರಲಿ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ಒಟ್ಟಾರೆ ವರ್ತೂರ್ ಪ್ರಕಾಶ್ ಅಪಹರಣ ಪ್ರಕರಣ ದಿನಕ್ಕೊಂದು ಟ್ವಿಸ್ಟ್​ ಪಡೆಯುತ್ತಿದ್ದು, ಇನ್ನೆರಡು ಮೂರು ದಿನಗಳಲ್ಲಿ ಪ್ರಕರಣದ ಅಸಲಿಯತ್ತು ಹೊರ ಬೀಳುವ ಸಾಧ್ಯತೆ ಇದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.