ETV Bharat / state

ರೈತ ವಿರೋಧಿ ಕಾಯ್ದೆ ವಾಪಸ್ ಪಡೆಯದಿದ್ದಲ್ಲಿ ದೆಹಲಿ ಮಾದರಿಯಲ್ಲಿ ಬೆಂಗಳೂರು ಮುತ್ತಿಗೆ: ಕೋಡಿಹಳ್ಳಿ‌ ಎಚ್ಚರಿಕೆ - ಲಕ್ಷಾಂತರ ಸಂಖ್ಯೆಯಲ್ಲಿ ಟ್ರಾಕ್ಟರ್ ಮೂಲ‌ಕ ದೆಹಲಿ ಪ್ರವೇಶ

ರೈತರ ಜೊತೆ ಹುಡುಗಾಟಿಕೆಯಾಡಲು ಹೋಗಬೇಡಿ. ತಕ್ಷಣವೇ ಕಾಯ್ದೆಗಳನ್ನು ವಾಪಸ್ ಪಡೆಯುವ ತೀರ್ಮಾನ ಘೋಷಣೆ ಮಾಡಿ, ಕಾಯ್ದೆ ವಾಪಸ್ ಹೇಳಿಕೆ ನೀಡಿ. ನಾವು ನಮ್ಮ ಹಳ್ಳಿ ಕಡೆ ಹೋಗುತ್ತೇವೆ. ಇಲ್ಲದೇ ಇದ್ದಲ್ಲಿ ನಾವು ಕೂಡ ಕರ್ನಾಟಕ ರಾಜ್ಯದ ರಾಜಧಾನಿ ಮುತ್ತಿಗೆ ಹಾಕುವ ಹೋರಾಟ ನಡೆಸುತ್ತೇವೆ ಎಂದು ಕೋಡಿಹಳ್ಳಿ ಚಂದ್ರಶೇಖರ್​, ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

kodihalli-chandrashekar-talk
ಕೋಡಿಹಳ್ಳಿ‌ ಎಚ್ಚರಿಕೆ
author img

By

Published : Jan 26, 2021, 7:58 PM IST

ಬೆಂಗಳೂರು: ರೈತ ವಿರೋಧಿಯಾದ ಮೂರು ಕಾಯ್ದೆಗಳನ್ನು ವಾಪಸ್ ಪಡೆಯದೇ ಇದ್ದಲ್ಲಿ ದೆಹಲಿ ಮಾದರಿಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರು ಮುತ್ತಿಗೆಗೆ ಮುಂದಾಗಬೇಕಾಗಲಿದೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಕೆ ನೀಡಿದರು.

ಕೋಡಿಹಳ್ಳಿ ಚಂದ್ರಶೇಖರ್​​‌ ಎಚ್ಚರಿಕೆ

ಓದಿ: ಕೋಡಿಹಳ್ಳಿ ನೇತೃತ್ವದಲ್ಲಿ ಸ್ವಾತಂತ್ರ್ಯಉದ್ಯಾನದ ಕಡೆ ಹೊರಟ ರೈತರು

ಫ್ರೀಡಂ ಪಾರ್ಕ್​ನಲ್ಲಿ ರೈತರನ್ನುದ್ದೇಶಿಸಿ ಮಾತನಾಡಿದ ಅವರು, ದೆಹಲಿಯಲ್ಲಿ ರೈತರು ಜಗತ್ತಿನ ಇತಿಹಾಸದಲ್ಲಿ ನಡೆಯದೇ ಇರುವ ದಾಖಲೆಯನ್ನು ಮಾಡಿದ್ದಾರೆ. ಲಕ್ಷಾಂತರ ಸಂಖ್ಯೆಯಲ್ಲಿ ಟ್ರ್ಯಾಕ್ಟರ್ ಮೂಲ‌ಕ ದೆಹಲಿ ಪ್ರವೇಶ ಮಾಡಿದ್ದಾರೆ.

ಇಷ್ಟೊಂದು ಜನ ದೇಶದ ಇತಿಹಾಸದ ಚಳವಳಿಯಲ್ಲಿ ಭಾಗಿಯಾಗಿರಲಿಲ್ಲ. ಈ ಬಾರಿ ಒಂದಷ್ಟು ಅಹಿತಕರ ಘಟನೆ ನಡೆದಿದೆ. ಆದರೆ ಇದಕ್ಕೆ ಕಾರಣವೂ ಇದೆ. ರೈತರ ತಾಳ್ಮೆಗೆ ಇತಿಮಿರಿ ಇರಲಿದೆ. ಆ ತಾಳ್ಮೆಯ ಕಟ್ಟೆ ಒಡೆದ ಮೇಲೆ ಈ ರೀತಿ ಅನಿವಾರ್ಯ ಸನ್ನಿವೇಶವನ್ನು ಕಾಲವೇ ನಿರ್ಧರಿಸಲಿದೆ ಎನ್ನುವುದಕ್ಕೆ ಇಂದಿನ ರೈತರ ಹೋರಾಟ ಸಾಕ್ಷಿಯಾಗಿದೆ ಎಂದರು.

ರೈತರ ಜೊತೆ 10ನೇ ಸುತ್ತಿನ ಮಾತುಕತೆ ಮುಕ್ತಾಯವಾಗುವ ವೇಳೆ ಕಾಯ್ದೆ ವಾಪಸ್ ಬಿಟ್ಟು ಉಳಿದ ಬಗ್ಗೆ ಮಾತನಾಡೋಣ ಎಂದು ಕೇಂದ್ರ ಸರ್ಕಾರದ ಸಚಿವರು ಹೇಳುತ್ತಾರೆ. ಆದರೆ ನಮ್ಮ ಬೇಡಿಕೆ ಕೂಡ ಅಷ್ಟೇ, ಆ ಮೂರು ಕಾಯ್ದೆ ವಾಪಸ್ ಪಡೆಯಬೇಕು. ನಂತರವೇ ಮಾತುಕತೆ ಎಂದಿದ್ದೆವು. ನಂತರ ಪ್ರಕರಣ ಸಂಬಂಧ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಕೋರ್ಟ್ ಕಾಯ್ದೆಗಳನ್ನು ತಾತ್ಕಾಲಿಕ ವಾಪಸ್ ಪಡೆಯಲು ಸೂಚನೆ ನೀಡಿದೆ. ಆದರೆ ಶಾಶ್ವತವಾಗಿ ಕಾನೂನು ವಾಪಸ್ ಒಡೆಯಲು ಭಾರತ ಸರ್ಕಾರಕ್ಕೆ ಮಾತ್ರ ಅಧಿಕಾರವಿದೆ. ಹಾಗಾಗಿ ನಾವು ಚಳುವಳಿ ವಾಪಸ್ ಪಡೆಯಲ್ಲ. ಕಾಯ್ದೆ ವಾಪಸ್ ಪಡೆದಲ್ಲಿ ಮಾತ್ರ ಚಳವಳಿ ವಾಪಸ್ ಪಡೆಯಲಿದ್ದೇವೆ.

13ನೇ ಸುತ್ತಿನ ಮಾತುಕತೆ ವೇಳೆ ಕೇಂದ್ರ ಸರ್ಕಾರ ಎರಡು ವರ್ಷ ಕಾಯ್ದೆ ಜಾರಿಯಾಗಲ್ಲ. ಹೋರಾಟ ವಾಪಸ್ ಪಡೆಯಿರಿ ಎಂದಿತು. ಆದರೆ ಇದಕ್ಕೆ ನಾವು ಒಪ್ಪಿಲ್ಲ. ಧ್ವಜಾರೋಹಣ ನಂತರ ನಮ್ಮ ರೈತ ಗಣರಾಜ್ಯೋತ್ಸವ ಪರೇಡ್ ಆರಂಭದ ಹೇಳಿಕೆ ನೀಡಿದ್ದೆವು. ಅದರಂತೆ ಪರೇಡ್ ಆರಂಭವಾಯಿತು. ಆದರೆ ದೆಹಲಿ ಪರೇಡ್​​ನಲ್ಲಿ ನಡೆದ ಅಹಿತಕರ ಘಟನೆಗೆ ಪಾಕಿಸ್ತಾನದ ಕುಮ್ಮಕ್ಕಿದೆ. ಯಾವುದೋ ಉಗ್ರಗಾಮಿ ಸಂಘಟನೆ ಕೈವಾಡವಿದೆ ಎನ್ನುತ್ತಾರೆ. ಇದು ಅನ್ನ ತಿನ್ನುವವರು ಹೇಳುವ ಮಾತಾ..? ರೈತರ ಜೀವನ ಹಾಳು ಮಾಡುವ ಕಾನೂನು ತಂದಿದ್ದಾರೆ. ಅದನ್ನು ತೆಗೆಯಿರಿ ಎಂದರೆ ಉಗ್ರಗಾಮಿ, ನಕ್ಸಲ್, ಯಾವುದೋ ರಾಜಕೀಯ ಪಕ್ಷದ ಕುಮ್ಮಕ್ಕಿದೆ ಎನ್ನುತ್ತಾರೆ. ಎಚ್ಚರಿಕೆಯಿಂದ ಮಾತನಾಡಿ, ಗಂಭೀರತೆಯಿಂದ ಮಾತನಾಡಿ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಇದಕ್ಕೆಲ್ಲಾ ಕಾರಣ ನಾವೇ, ನಿಮಗೆ ಭಾರೀ ಬಹುಮತ ಕೊಟ್ಟಿದ್ದರಿಂದ ಈ ರೀತಿ ವರ್ತನೆ ಮಾಡುತ್ತಿದ್ದೀರಿ. ಇಂದಿರಾ ಗಾಂಧಿಗೂ ಭಾರಿ ಬಹುಮತ ಕೊಟ್ಟಾಗ ತುರ್ತು ಪರಿಸ್ಥಿತಿ ಜಾರಿಗೆ ತಂದಿದ್ದರು. ಈಗ ಮೋದಿ ಅವರ ನಿಲುವು, ಅಹಂಕಾರ, ಪೊಗರು ಅದೇ ರೀತಿ ಆಗಿದೆ. ಆ ಕಾರಣಕ್ಕೆ ಎಚ್ಚರಿಕೆಯ ಮಾತನ್ನು ಹೇಳುತ್ತಿದ್ದೇವೆ ಎಂದರು.

ಮನ್ ಕಿ ಬಾತ್​​ನಲ್ಲಿ ರೈತರ ಕಷ್ಟದ ಬಗ್ಗೆ, ರೈತ ಸತ್ಯಾಗ್ರಹ ಮಾಡುತ್ತಿರುವ ಬಗ್ಗೆ, ಚಳಿ, ಮಳೆ, ಗಾಳಿಗೆ ಜೀವ ಬಿಟ್ಟಿದ್ದಾರೆ ಅದರ ಬಗ್ಗೆ ಮಾತನಾಡಿದ್ದೀರಾ? ಇದೆಲ್ಲಾ ನಡೆಯಲ್ಲ. ಇನ್ಮುಂದೆ ಈ ಸರ್ವಾಧಿಕಾರ, ಅಹಂಕಾರ ಬಹಳ ದಿನ ನಡೆಯಲ್ಲ. ಸ್ವಲ್ಪ ಹದ್ದುಬಸ್ತಲ್ಲಿ ಇರೋದು ಒಳ್ಳೆಯದು ಎಂದರು.

ಓದಿ: ರೈತರ ಪರೇಡ್​​ಗೆ ಮಂಗಳಮುಖಿಯರ ಸಾಥ್​: 300ಕ್ಕೂ ಹೆಚ್ಚು ರೈತರಿಗೆ ತಿಂಡಿ ವ್ಯವಸ್ಥೆ

ಈಸ್ಟ್ ಇಂಡಿಯಾ ಕಂಪನಿಯಿಂದ ದೇಶವನ್ನು ವಾಪಸ್ ಪಡೆಯಲು ಎಷ್ಟು ಹೋರಾಟ ಮಾಡಬೇಕಾಯಿತು. ಈಗ ನೀವು ಸ್ವಾತಂತ್ರ್ಯ ಸಾಕು, ಈಸ್ಟ್ ಇಂಡಿಯಾ ಬದಲು ಕಾರ್ಪೊರೇಟ್ ಕಂಪನಿ, ಬಹುರಾಷ್ಟ್ರೀಯ ಕಂಪನಿ ಬೇಕು ಅಂತಾ ಹೊರಟಿದ್ದೀರಿ. ನಿಮ್ಮ ಅಪ್ಪಂದಿರ ದೇಶವಲ್ಲ ಇದು, ನಮ್ಮ ಅಪ್ಪಂದಿರ ದೇಶ, ನಮ್ಮ ‌ರಕ್ತ ಬಸಿದು ಕಟ್ಟಿರುವ ದೇಶ. ನಮ್ಮ ಅನ್ನ ತಿಂದು ದೇಶವನ್ನು ಕಾರ್ಪೊರೇಟ್ ಕಂಪನಿಗೆ ಕೊಡಲು ಹೊರಟಿದ್ದೀರಾ, ಇದು ನಡೆಯಲ್ಲ. ಕೃಷಿ ಭೂಮಿ, ಹೈನುಗಾರಿಕೆ, ಎಪಿಎಂಸಿ ಎಲ್ಲವನ್ನು ಕಂಪನಿಗಳಿಗೆ ಕೊಡಲು ಹೊರಟಿದ್ದೀರಿ. ಇದಕ್ಕೆ ಅವಕಾಶ ನೀಡಲ್ಲ ಎಂದರು.

ಗೋಹತ್ಯೆ ಕಾಯ್ದೆ ಜಾರಿ ಮಾಡಿದ್ದೀರಿ, ನಮಗೆ ನೀವು ಗೋಮಾತೆ ಎಂದು ಹೇಳಿಕೊಡಬೇಕಿಲ್ಲ. ಹೇಗೆ ಪೂಜೆ ಮಾಡಬೇಕು, ಸಾಕಬೇಕು ಎಂದು ನಮಗೆ ಗೊತ್ತು. ಸಗಣಿ ತೆಗೆಯೋದು, ಹಾಲು ಕರೆಯೋದು ನಾವು, ಜಾನುವಾರು ಕಾಯ್ದೆ ಬೇಕೋ ಬೇಡವೋ ಎಂದು ನಿರ್ಧಾರ ನಾವು ಮಾಡಬೇಕು. ವಿಧಾನಸೌಧದಲ್ಲಿ ಕುಳಿತು ನೀವು ಮಾಡೋದಲ್ಲ. ಇದೆಲ್ಲಾ ಬಹಳ ದೊಡ್ಡ ಸಮಸ್ಯೆಯಾಗಿದೆ. ಅರ್ಥ ಮಾಡಿಕೊಳ್ಳಿ, ರೈತರ ಜೀವನದ ಜೊತೆ ಚೆಲ್ಲಾಟವಾಡಬೇಡಿ ಎಂದರು.

ರೈತರ ಜೊತೆ ಹುಡುಗಾಟಿಕೆಯಾಡಲು ಹೋಗಬೇಡಿ. ತಕ್ಷಣವೇ ಕಾಯ್ದೆಗಳನ್ನು ವಾಪಸ್ ಪಡೆಯುವ ತೀರ್ಮಾನ ಘೋಷಣೆ ಮಾಡಿ, ಕಾಯ್ದೆ ವಾಪಸ್ ಹೇಳಿಕೆ ನೀಡಿ. ನಾವು ನಮ್ಮ ಹಳ್ಳಿ ಕಡೆ ಹೋಗುತ್ತೇವೆ. ಇಲ್ಲದೇ ಇದ್ದಲ್ಲಿ ನಾವು ಕೂಡ ಕರ್ನಾಟಕ ರಾಜ್ಯದ ರಾಜಧಾನಿ ಮುತ್ತಿಗೆ ಹಾಕುವ ಹೋರಾಟ ನಡೆಸುತ್ತೇವೆ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.