ಆನೇಕಲ್(ಬೆಂಗಳೂರು): ಬೆಂಗಳೂರು-ಹೊಸೂರು ಹೆದ್ದಾರಿಯ ಅತ್ತಿಬೆಲೆ ಆಕ್ಸ್ಫರ್ಡ್ ವೈದ್ಯಕೀಯ ಆಸ್ಪತ್ರೆಯ ಕೀಲು ಮತ್ತು ಮೂಳೆ ವಿಭಾಗದಿಂದ ವಯೋ ಬಾಧಿತ ಮೊಣಕಾಲಿನ ಕೀಲು ಬದಲಾವಣೆ ಶಸ್ತ್ರ ಚಿಕಿತ್ಸಾ ವಿಧಾನವನ್ನು ನೇರ ಪ್ರಸಾರ ಮಾಡಲಾಯಿತು. ಫೋರ್ಟೀಸ್ ಆಸ್ಪತ್ರೆಯ ನುರಿತ ಕೀಲು ತಜ್ಞವೈದ್ಯ ಡಾ ನಾರಾಯಣ್ ಹುಲ್ಸೆ ಶಸ್ತ್ರ ಚಿಕಿತ್ಸೆಯ ನೇರ ಪ್ರಸಾರವನ್ನು ಪ್ರಸ್ತುತಪಡಿಸಿದರು.
ಈ ಮೂಲಕ ಸರ್ವೇ ಸಾಮಾನ್ಯವಾಗಿ 60 ವರ್ಷದವರಿಗೆ ಸಹಜ ವಯೋ ಬಾಧಿತ ಮೊಣಕಾಲು ಕೀಲು ನೋವಿನ ಪರಿಹಾರದ ಶಸ್ತ್ರಚಿಕಿತ್ಸೆ ಕುರಿತು ಇರುವ ದುಗುಡವನ್ನು ದೂರ ಮಾಡವುದಕ್ಕಾಗಿ ನೇರ ಪ್ರಸಾರವನ್ನು ಮಾಡಲಾಗಿದೆ. ಈ ಚಿಕಿತ್ಸೆಯಿಂದ 25 ವರ್ಷಗಳ ಕಾಲ ನೋವಿಲ್ಲದೆ ನಡೆದಾಡುವ ದೃಢತೆಯನ್ನು ಹೆಚ್ಚಿಸಲು ಸಾಧ್ಯ ಎಂದು ಆಕ್ಸಫರ್ಡ್ ಚೇರ್ಮನ್ ನರಸಿಂಗರಾಜುಗಾರು ತಿಳಿಸಿದರು.
ಹೆಚ್ಒಡಿ ಡಾ ಸತೀಶ್ ಕುಮಾರ್ ಸಿ ಮಾತನಾಡಿ, ಈ ಚಿಕಿತ್ಸೆಗಾಗಿ ಹೆಚ್ಚು ವ್ಯಯಿಸದೆ ರಾಜ್ಯ ಸರ್ಕಾರದ ಆರೋಗ್ಯ ಯೋಜನೆಯಡಿ ಬಡವರೂ ಉಚಿತವಾಗಿ ಅತಿ ಕಡಿಮೆ ಖರ್ಚಿನಲ್ಲಿ ಚಿಕಿತ್ಸೆ ಪಡೆಯಬಹುದೆಂದರು.
ಡಾ ತೇಜಸ್ ಮಾತನಾಡಿ, ನಿರಾತಂಕವಾಗಿ ಸಹಜವಾದ ಕ್ರಮದಲ್ಲಿ ಚಿಕಿತ್ಸೆಯನ್ನು ನೇರ ಪ್ರಸಾರದಲ್ಲಿ ಕಂಡು ಧೈರ್ಯವಾಗಿ ಚಿಕಿತ್ಸೆಗೆ, ಮೊಣಕಾಲು ಕೀಲು ಬದಲಾವಣೆಗೆ ಬರುವಂತೆ ಕರೆ ನೀಡಿದರು.
ವೈದ್ಯಕೀಯ ಅಧೀಕ್ಷಕ ಡಾ ಮೋಹನ್ ಜಿ ಮಾತನಾಡಿ, ರಾಜ್ಯದ ಗಡಿಯಲ್ಲಿ ಆಸ್ಪತ್ರೆಯಿರುವುದರಿಂದ ತಮಿಳುನಾಡಿನ ಅಮ್ಮ ಕಾರ್ಡ್ ಚಿಕಿತ್ಸೆಗಾಗಿ ನೆರವಾಗುವುದು ಎಂದು ತಿಳಿಸಿದರು.
ಡಾ ಅಬ್ದುಲ್ ಮಾತನಾಡಿ ಆಕ್ಸಫರ್ಡ್ ಕ್ಯಾಂಪಸ್ಲ್ಲಿ ಆರೋಗ್ಯ ವಿಮಾ ಸೌಲಭ್ಯವಿರುವುದರಿಂದ ಬಾಧಿತರು ಆತಂಕಪಡುವ ಅಗತ್ಯವಿಲ್ಲ ಎಂದು ಧೈರ್ಯ ತುಂಬಿದರು.
ಇದನ್ನೂ ಓದಿ: ಏನಿದು ಆಯುಷ್ಮಾನ್ ಭಾರತ್ ಯೋಜನೆ? ; ಅರ್ಹರು ಯಾರು?