ಬೆಂಗಳೂರು: ನಿಯಮದಂತೆ ಆಸ್ತಿ ಘೋಷಣೆ ಮಾಡಿಕೊಳ್ಳದ 34 ಸದಸ್ಯರನ್ನ ಅನರ್ಹಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ಸದಸ್ಯರ ಮಾಹಿತಿ ನೀಡಲು ಬಿಬಿಎಂಪಿ ಎರಡು ವಾರ ಕಾಲಾವಕಾಶ ಕೇಳಿದೆ.
ಈ ಕುರಿತು ಸಾಮಾಜಿಕ ಹೋರಾಟಗಾರ ಕೆ.ಅನಿಲ್‌ಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯು ನ್ಯಾಯಮೂರ್ತಿ ಜಿ.ನರೇಂದರ್ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ನಡೆಯಿತು.
ಬಿಬಿಎಂಪಿ ಪರ ವಾದಿಸಿದ ವಕೀಲರು, ನಿಯಮದ ಪ್ರಕಾರ ಆಸ್ತಿ ಘೋಷಣೆ ಮಾಡಿಕೊಳ್ಳದ ಬಿಬಿಎಂಪಿ ಸದಸ್ಯರ ಕುರಿತು ಮಾಹಿತಿ ನೀಡಲು ಎರಡು ವಾರ ಕಾಲಾವಕಾಶ ಬೇಕೆಂದು ಪೀಠಕ್ಕೆ ಮನವಿ ಮಾಡಿದರು.
ಕಳೆದ ವಿಚಾರಣೆ ವೇಳೆ ಸದಸ್ಯರ ಕುರಿತು ವರದಿ ಸಲ್ಲಿಸಲು ಬಿಬಿಎಂಪಿಗೆ ನ್ಯಾಯ ಪೀಠ ಸೂಚಿಸಿತ್ತು. ಬಿಬಿಎಂಪಿ ವಕೀಲರು ಕಾಲಾವಕಾಶ ಕೇಳಿದ ಹಿನ್ನೆಲೆ ಹೈಕೋರ್ಟ್ ಜುಲೈ 25ಕ್ಕೆ ವಿಚಾರಣೆ ಮುಂದೂಡಿದೆ.