ETV Bharat / state

ಇಂದು ಕೆಎಂಎಫ್​​ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ: ಹಾಜರಾಗುವರೇ ರೇವಣ್ಣ?

ಕೆಎಂಎಫ್ ಅಧ್ಯಕ್ಷ ಸ್ಥಾನ ಸಿಗುವುದು ದುಸ್ತರವಾದ ಹಿನ್ನೆಲೆಯಲ್ಲಿ ರೇವಣ್ಣ ಚುನಾವಣೆಗೆ ಗೈರಾಗುವ ಸಂಭವವೇ ಹೆಚ್ಚಾಗಿದೆ. ಒಂದು ವೇಳೆ ಹಾಜರಾದರೂ ನಾಮಪತ್ರ ವಾಪಸ್ ಪಡೆಯಲು ನಿರ್ಧರಿಸಬಹುದು ಎನ್ನಲಾಗಿದೆ.

ರೇವಣ್ಣ
author img

By

Published : Aug 31, 2019, 9:58 AM IST

ಬೆಂಗಳೂರು: ಕರ್ನಾಟಕ ಹಾಲು ಒಕ್ಕೂಟಕ್ಕೆ (ಕೆಎಂಎಫ್) ಇಂದು ಚುನಾವಣೆ ನಡೆಯಲಿದ್ದು, ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರು ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸುವರೇ ಎಂಬ ಪ್ರಶ್ನೆ ಮೂಡಿದೆ.

ಕೆಎಂಎಫ್​ನಲ್ಲಿ ಈ ಬಾರಿ ಹೆಚ್ಚು ನಿರ್ದೇಶಕರು ಕಾಂಗ್ರೆಸ್ ಬೆಂಬಲಿತರೇ ಆಯ್ಕೆಯಾಗಿದ್ದರೂ ರೇವಣ್ಣರಿಗೆ ಕಾಂಗ್ರೆಸ್ ಶಾಸಕ ಭೀಮಾ ನಾಯ್ಕ್​ ಬೆಂಬಲ ಇಲ್ಲದಂತಾಗಿದೆ. ಜೆಡಿಎಸ್ ಪರ ಮೂವರು ನಿರ್ದೇಶಕರಿದ್ದು, ಅವರಲ್ಲಿ ಮೈಸೂರು ನಿರ್ದೇಶಕ ಜಾರಕಿಹೊಳಿ ತಂಡದ ಜತೆ ಗುರುತಿಸಿಕೊಂಡಿದ್ದಾರೆ. ಜೆಡಿಎಸ್​ನಲ್ಲಿ ಮಾರುತಿ ಕಾಶೆಂಪುರ ಮತ್ತು ರೇವಣ್ಣ ಮಾತ್ರ ಉಳಿದಿದ್ದಾರೆ. ಹಾಗಾಗಿ, ಕೆಎಂಎಫ್ ಚುನಾವಣೆಗೆ ಬಾಲಚಂದ್ರ ಜಾರಕಿಹೊಳಿ ಎಂಟ್ರಿ ಕೊಟ್ಟ ನಂತರ ರಾಜಕೀಯ ವಾತಾವರಣವೇ ಅದಲು ಬದಲಾಗಿದೆ. ರೇವಣ್ಣ ಪರವಾಗಿದ್ದ ನಿರ್ದೇಶಕರೆಲ್ಲರೂ ಜಾರಕಿಹೊಳಿ ತಂಡಕ್ಕೆ ಸೇರಿದ್ದರಿಂದ ಅವರ ಸಂಖ್ಯಾ ಬಲ 11 ದಾಟಿದೆ. ಹೀಗಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅಧ್ಯಕ್ಷಪಟ್ಟ ಸಿಗುವುದು ಬಹುತೇಕ ಖಚಿತವಾಗಿದೆ.

ಚುನಾವಣೆ ಪ್ರಕ್ರಿಯೆ ಹೇಗೆ?: ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಕೆಎಂಎಫ್ ಸಭಾಂಗಣದಲ್ಲಿ ಇಂದು ಬೆಳಗ್ಗೆ 10.10ಕ್ಕೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಲಿದ್ದು, ಮಧ್ಯಾಹ್ನ 1 ಗಂಟೆವರೆಗೂ ಅವಕಾಶ ನೀಡಲಾಗಿದೆ. ಈಗಾಗಲೇ ಹೆಚ್.ಡಿ.ರೇವಣ್ಣ ನಾಮಪತ್ರ ಸಲ್ಲಿಸಿರುವುದರಿಂದ ಮತ್ತೆ ಸಲ್ಲಿಸುವ ಅಗತ್ಯವಿಲ್ಲ ಎಂದು ಮೂಲಗಳು ತಿಳಿಸಿವೆ. ಮಧ್ಯಾಹ್ನ 1 ಗಂಟೆಗೆ ಚುನಾವಣಾಧಿಕಾರಿ ನಾಮಪತ್ರ ಪರಿಶೀಲನೆ ನಡೆಸಲಿದ್ದು, ನಂತರ 20 ನಿಮಿಷ ನಾಮಪತ್ರ ವಾಪಸ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಅಗತ್ಯವಾದರೆ ಮಾತ್ರ ಚುನಾವಣೆ ಪ್ರಕ್ರಿಯೆ ನಡೆಯಲಿದೆ.

ಸಿದ್ದತೆ: ಹೆಚ್.ಡಿ.ರೇವಣ್ಣ ನಾಮಪತ್ರದ ಬಗ್ಗೆ ಚುನಾವಣಾಧಿಕಾರಿ, ಕಾನೂನು ಸಲಹೆ ಪಡೆದು ಹೆಜ್ಜೆ ಇಡಲು ಮುಂದಾಗಿದ್ದಾರೆ. ಚುನಾವಣೆ ಪ್ರಕ್ರಿಯೆ ನಿಂತಲ್ಲಿಂದ ಮುಂದಕ್ಕೆ ಮುಂದುವರಿಸುವಂತೆ ಕೋರ್ಟ್ ತಿಳಿಸಿರುವ ಹಿನ್ನೆಲೆಯಲ್ಲಿ ರೇವಣ್ಣ ನಾಮಪತ್ರವೂ ಪರಿಗಣನೆಯಲ್ಲಿ ಇರಲಿದೆ ಎಂದು ಮೂಲಗಳು ತಿಳಿಸಿವೆ.

ರೇವಣ್ಣ ಜುಲೈ 29 ರಂದು ಸಲ್ಲಿಸಿದ್ದ ನಾಮಪತ್ರಕ್ಕೆ ಸೂಚಕರಾಗಿ ಶಿವನಗೌಡ ಬಿ.ಪಾಟೀಲ್, ಅನುಮೋದಕರಾಗಿ ಎಚ್.ಜಿ.ಹಿರೇಗೌಡರ್ ಸಹಿ ಮಾಡಿದ್ದರು. ರೇವಣ್ಣ ನಾಮಪತ್ರಕ್ಕೆ ಸೂಚಕರು, ಅನುಮೋದಕರಾಗಿರುವವರು ಮತ್ತೊಬ್ಬರ ನಾಮಪತ್ರಕ್ಕೂ ಸಹಿ ಮಾಡಿದರೆ ಅವರ ನಾಮಪತ್ರ ತಿರಸ್ಕೃತವಾಗಲಿದೆ. ಈ ಹಿನ್ನೆಲೆಯಲ್ಲಿ ಈ ಇಬ್ಬರನ್ನು ಹೊರತುಪಡಿಸಿ ಇನ್ನುಳಿದವರಲ್ಲಿ ಒಬ್ಬರು ಸೂಚಕರು, ಅನುಮೋದಕರನ್ನಾಗಿಸಿ ನಾಮಪತ್ರ ಸಲ್ಲಿಸಲು ಜಾರಕಿಹೊಳಿ ತಂಡ ಸಿದ್ಧತೆ ನಡೆಸಿದೆ ಎನ್ನಲಾಗಿದೆ.

ಮಂಡ್ಯ ಹಾಲು ಒಕ್ಕೂಟಕ್ಕೆ ಚುನಾವಣೆ ನಡೆದಿಲ್ಲ. ಆದ್ದರಿಂದ ಮಂಡ್ಯ ಹೊರತುಪಡಿಸಿ ಇನ್ನುಳಿದ ಎಲ್ಲ ಹಾಲು ಒಕ್ಕೂಟಗಳಿಂದ ಕೆಎಂಎಫ್​ಗೆ ಆಯ್ಕೆಯಾಗಿರುವ ನಿರ್ದೇಶಕರ ಜತೆಗೆ ಸರ್ಕಾರದ ಪರವಾಗಿ ಪಶುಸಂಗೋಪನಾ ಇಲಾಖೆ ಪ್ರಧಾನ ಕಾರ್ಯದರ್ಶಿ, ಸಹಕಾರ ಸಂಘಗಳ ಉಪನಿಬಂಧಕರು, ಎನ್​ಡಿಡಿಬಿ ಪ್ರಾಂತೀಯ ಮುಖ್ಯಸ್ಥರು ಮತದಾನದ ಹಕ್ಕು ಹೊಂದಿದ್ದಾರೆ.

ಗೈರಾಗುವರೇ ರೇವಣ್ಣ? : ಕೆಎಂಎಫ್ ಅಧ್ಯಕ್ಷ ಸ್ಥಾನ ಸಿಗುವುದು ದುಸ್ತರವಾದ ಹಿನ್ನೆಲೆಯಲ್ಲಿ ರೇವಣ್ಣ ಚುನಾವಣೆಗೆ ಗೈರಾಗುವ ಸಂಭವವೇ ಹೆಚ್ಚಾಗಿದೆ. ಒಂದು ವೇಳೆ ಹಾಜರಾದರೂ ನಾಮಪತ್ರ ವಾಪಸ್ ಪಡೆಯಲು ನಿರ್ಧರಿಸಬಹುದು ಎನ್ನಲಾಗಿದೆ. ಶಾಸಕ ಭೀಮಾನಾಯ್ಕ ಸ್ಪರ್ಧೆ ಮಾಡುವುದಾದರೆ ಜೆಡಿಎಸ್​ನ ರೇವಣ್ಣ ಮತ್ತು ಮಾರುತಿ ಕಾಶೆಂಪುರ ಬೆಂಬಲ ನೀಡಲು ಮುಂದಾಗಿದ್ದಾರೆ. ಒಟ್ಟಾರೆ, ಇಂದು ನಡೆಯುವ ಕೆಎಂಎಫ್ ಚುನಾವಣೆ ಭಾರಿ ಕುತೂಹಲ ಕೆರಳಿಸಿದೆ.

Intro:ಬೆಂಗಳೂರು : ಕರ್ನಾಟಕ ಹಾಲು ಒಕ್ಕೂಟಕ್ಕೆ (ಕೆಎಂಎಫ್) ಇಂದು ಚುನಾವಣೆ ನಡೆಯಲಿದ್ದು, ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರು ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸುವರೇ ? ಎಂಬ ಪ್ರಶ್ನೆ ಮೂಡಿದೆ.Body:ಕೆಎಂಎಫ್​ನಲ್ಲಿ ಈ ಬಾರಿ ಹೆಚ್ಚು ನಿರ್ದೇಶಕರು ಕಾಂಗ್ರೆಸ್ ಬೆಂಬಲಿತರೇ ಆಯ್ಕೆಯಾಗಿದ್ದರೂ, ರೇವಣ್ಣರಿಗೆ ಕಾಂಗ್ರೆಸ್ ಶಾಸಕ ಭೀಮಾ ನಾಯ್ಕ ಬೆಂಬಲ ಇಲ್ಲದಂತಾಗಿದೆ. ಜೆಡಿಎಸ್ ಪರ ಮೂವರು ನಿರ್ದೇಶಕರಿದ್ದು, ಅವರಲ್ಲಿ ಮೈಸೂರು ನಿರ್ದೇಶಕ ಜಾರಕಿಹೊಳಿ ತಂಡದ ಜತೆ ಗುರುತಿಸಿಕೊಂಡಿದ್ದಾರೆ. ಜೆಡಿಎಸ್​ನಲ್ಲಿ ಮಾರುತಿ ಖಾಶೆಂಪುರ ಮತ್ತು ರೇವಣ್ಣ ಮಾತ್ರ ಉಳಿದಿದ್ದಾರೆ. ಹಾಗಾಗಿ, ಕೆಎಂಎಫ್ ಚುನಾವಣೆಗೆ ಬಾಲಚಂದ್ರ ಜಾರಕಿಹೊಳಿ ಎಂಟ್ರಿ ಕೊಟ್ಟ ನಂತರ ರಾಜಕೀಯ ವಾತಾವರಣವೇ ಅದಲು ಬದಲಾಗಿದೆ. ರೇವಣ್ಣ ಪರವಾಗಿದ್ದ ನಿರ್ದೇಶಕರೆಲ್ಲರೂ ಜಾರಕಿಹೊಳಿ ತಂಡಕ್ಕೆ ಸೇರಿದ್ದರಿಂದ ಅವರ ಸಂಖ್ಯಾ ಬಲ 11 ದಾಟಿದೆ. ಹೀಗಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅಧ್ಯಕ್ಷಪಟ್ಟ ಸಿಗುವುದು ಬಹುತೇಕ ಖಚಿತವಾಗಿದೆ.
ಚುನಾವಣೆ ಪ್ರಕ್ರಿಯೆ ಹೇಗೆ? : ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಕೆಎಂಎಫ್ ಸಭಾಂಗಣದಲ್ಲಿ ಇಂದು ಬೆಳಗ್ಗೆ 10.10ಕ್ಕೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಲಿದ್ದು, ಮಧ್ಯಾಹ್ನ 1 ಗಂಟೆವರೆಗೂ ಅವಕಾಶ ನೀಡಲಾಗಿದೆ. ಈಗಾಗಲೇ ಹೆಚ್.ಡಿ.ರೇವಣ್ಣ ನಾಮಪತ್ರ ಸಲ್ಲಿಸಿರುವುದರಿಂದ ಮತ್ತೆ ಸಲ್ಲಿಸುವ ಅಗತ್ಯವಿಲ್ಲ ಎಂದು ಮೂಲಗಳು ತಿಳಿಸಿವೆ. ಮಧ್ಯಾಹ್ನ 1 ಗಂಟೆಗೆ ಚುನಾವಣಾಧಿಕಾರಿ ನಾಮಪತ್ರ ಪರಿಶೀಲನೆ ನಡೆಸಲಿದ್ದು, ನಂತರ 20 ನಿಮಿಷ ನಾಮಪತ್ರ ವಾಪಸ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಅಗತ್ಯವಾದರೆ ಮಾತ್ರ ಚುನಾವಣೆ ಪ್ರಕ್ರಿಯೆ ನಡೆಯಲಿದೆ.
ಸಿದ್ದತೆ : ಹೆಚ್.ಡಿ.ರೇವಣ್ಣ ನಾಮಪತ್ರ ಬಗ್ಗೆ ಚುನಾವಣಾಧಿಕಾರಿ, ಕಾನೂನು ಸಲಹೆ ಪಡೆದು ಹೆಜ್ಜೆ ಇಡಲು ಮುಂದಾಗಿದ್ದಾರೆ. ಚುನಾವಣೆ ಪ್ರಕ್ರಿಯೆ ನಿಂತಲ್ಲಿಂದ ಮುಂದಕ್ಕೆ ಮುಂದುವರಿಸುವಂತೆ ಕೋರ್ಟ್ ತಿಳಿಸಿರುವ ಹಿನ್ನೆಲೆಯಲ್ಲಿ ರೇವಣ್ಣ ನಾಮಪತ್ರವೂ ಪರಿಗಣನೆಯಲ್ಲಿ ಇರಲಿದೆ ಎಂದು ಮೂಲಗಳು ತಿಳಿಸಿವೆ.
ರೇವಣ್ಣ ಜುಲೈ 29 ರಂದು ಸಲ್ಲಿಸಿದ್ದ ನಾಮಪತ್ರಕ್ಕೆ ಸೂಚಕರಾಗಿ ಶಿವನಗೌಡ ಬಿ. ಪಾಟೀಲ್, ಅನುಮೋದಕರಾಗಿ ಎಚ್.ಜಿ.ಹಿರೇಗೌಡರ್ ಸಹಿ ಮಾಡಿದ್ದರು. ರೇವಣ್ಣ ನಾಮಪತ್ರಕ್ಕೆ ಸೂಚಕರು, ಅನುಮೋದಕರಾಗಿರುವವರು ಮತ್ತೊಬ್ಬರ ನಾಮಪತ್ರಕ್ಕೂ ಸಹಿ ಮಾಡಿದರೆ ಅವರ ನಾಮಪತ್ರ ತಿರಸ್ಕೃತವಾಗಲಿದೆ. ಈ ಹಿನ್ನೆಲೆಯಲ್ಲಿ ಈ ಇಬ್ಬರನ್ನು ಹೊರತುಪಡಿಸಿ ಇನ್ನುಳಿದವರಲ್ಲಿ ಒಬ್ಬರು ಸೂಚಕರು, ಅನುಮೋದಕರನ್ನಾಗಿಸಿ ನಾಮಪತ್ರ ಸಲ್ಲಿಸಲು ಜಾರಕಿಹೊಳಿ ತಂಡ ಸಿದ್ದತೆ ನಡೆಸಿದೆ ಎನ್ನಲಾಗಿದೆ.
ಮಂಡ್ಯ ಹಾಲು ಒಕ್ಕೂಟಕ್ಕೆ ಚುನಾವಣೆ ನಡೆದಿಲ್ಲ. ಆದ್ದರಿಂದ ಮಂಡ್ಯ ಹೊರತುಪಡಿಸಿ ಇನ್ನುಳಿದ ಎಲ್ಲ ಹಾಲು ಒಕ್ಕೂಟಗಳಿಂದ ಕೆಎಂಎಫ್​ಗೆ ಆಯ್ಕೆಯಾಗಿರುವ ನಿರ್ದೇಶಕರ ಜತೆಗೆ ಸರ್ಕಾರದ ಪರವಾಗಿ ಪಶುಸಂಗೋಪನಾ ಇಲಾಖೆ ಪ್ರಧಾನ ಕಾರ್ಯದರ್ಶಿ, ಸಹಕಾರ ಸಂಘಗಳ ಉಪನಿಬಂಧಕರು, ಎನ್​ಡಿಡಿಬಿ ಪ್ರಾಂತೀಯ ಮುಖ್ಯಸ್ಥರು ಮತದಾನದ ಹಕ್ಕು ಹೊಂದಿದ್ದಾರೆ.
ಗೈರಾಗುವರೇ ರೇವಣ್ಣ? : ಕೆಎಂಎಫ್ ಅಧ್ಯಕ್ಷ ಸ್ಥಾನ ಸಿಗುವುದು ದುಸ್ತರವಾದ ಹಿನ್ನೆಲೆಯಲ್ಲಿ ರೇವಣ್ಣ ಚುನಾವಣೆಗೆ ಗೈರಾಗುವ ಸಂಭವವೇ ಹೆಚ್ಚಾಗಿದೆ. ಒಂದು ವೇಳೆ ಹಾಜರಾದರೂ ನಾಮಪತ್ರ ವಾಪಸ್ ಪಡೆಯಲು ನಿರ್ಧರಿಸಬಹುದು ಎನ್ನಲಾಗಿದೆ.
ಶಾಸಕ ಭೀಮಾನಾಯ್ಕ ಸ್ಪರ್ಧೆ ಮಾಡುವುದಾದರೆ ಜೆಡಿಎಸ್​ನ ರೇವಣ್ಣ ಮತ್ತು ಮಾರುತಿ ಖಾಶೆಂಪುರ ಬೆಂಬಲ ನೀಡಲು ಮುಂದಾಗಿದ್ದಾರೆ. ಒಟ್ಟಾರೆ, ಇಂದು ನಡೆಯುವ ಕೆಎಂಎಫ್ ಚುನಾವಣೆ ಭಾರಿ ಕುತೂಹಲ ಕೆರಳಿಸಿದೆ.
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.