ETV Bharat / state

ಕೆಎಂಎಫ್ ನಿರ್ದೇಶಕರ ಹೈಜಾಕ್​​​... ಬಾಲಚಂದ್ರ ಜಾರಕಿಹೊಳಿಗೆ ಸಿಗುವುದೇ ಅಧ್ಯಕ್ಷಗಾದಿ? - Balachandra Zaraki Holi

ಕೆಎಂಎಫ್ ಅಧ್ಯಕ್ಷಗಾದಿ ಮೇಲೆ ಕಣ್ಣಿಟ್ಟಿರುವ ಬಾಲಚಂದ್ರ ಜಾರಕಿಹೊಳಿ ಅವರನ್ನು ಕೆಎಂಎಫ್ ನಿರ್ದೇಶಕ ಸ್ಥಾನಕ್ಕೆ ನಾಮನಿರ್ದೇಶನ ಮಾಡುವ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇರವಾಗಿ ಅಖಾಡಕ್ಕೆ‌ ಇಳಿದಿದ್ದಾರೆ.

ಕೆಎಂಎಫ್ ನಿರ್ದೇಶಕರ ಹೈಜಾಕ್: ಬಾಲಚಂದ್ರ ಜಾರಕಿಹೊಳಿಗೆ ಅಧ್ಯಕ್ಷಗಾದಿ ಪಕ್ಕಾ
author img

By

Published : Aug 29, 2019, 9:21 PM IST

ಬೆಂಗಳೂರು: ಸಚಿವ ಸ್ಥಾನ ಸಿಗದೇ ಅಸಮಾಧಾನಗೊಂಡಿದ್ದ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿಗೆ ಕೆಎಂಎಫ್ ಅಧ್ಯಕ್ಷಗಾದಿ ಪಕ್ಕಾ‌ ಆಗಿದೆ.

ಕೆಎಂಎಫ್ ಅಧ್ಯಕ್ಷಗಾದಿಗೆ ನಿರ್ದೇಶಕರನ್ನು‌‌ ಹೈದರಾಬಾದ್​ಗೆ ಕರೆದೊಯ್ದಿದ್ದ ಮಾಜಿ‌ ಸಚಿವ ರೇವಣ್ಣ ವಿರುದ್ಧ ಅದೇ ರೀತಿಯ ತಂತ್ರವನ್ನು ಬಿಜೆಪಿ‌ ಹೆಣೆದಿದ್ದು, ನಿರ್ದೇಶಕರನ್ನು ಹೈಜಾಕ್ ಮಾಡಲಾಗಿದೆ ಎನ್ನಲಾಗುತ್ತಿದೆ. ಓರ್ವ ಜೆಡಿಎಸ್ ಮತ್ತು 6 ಕಾಂಗ್ರೆಸ್ ನಿರ್ದೇಶಕರನ್ನು ಮುಂಬೈಗೆ ಕರೆದೊಯ್ಯಲಾಗಿದ್ದು, ಚುನಾವಣಾ ದಿನ ಅವರೆಲ್ಲಾ ನೇರವಾಗಿ ಕೆಎಂಎಫ್ ಕಚೇರಿಗೆ ಆಗಮಿಸಿ ಮತ ಚಲಾಯಿಸಲಿದ್ದಾರೆ ಎನ್ನಲಾಗಿದೆ.

ಕೆಎಂಎಫ್ ಅಧ್ಯಕ್ಷಗಾದಿ ಮೇಲೆ ಕಣ್ಣಿಟ್ಟಿರುವ ಬಾಲಚಂದ್ರ ಜಾರಕಿಹೊಳಿ ಅವರನ್ನು ಕೆಎಂಎಫ್ ನಿರ್ದೇಶಕ ಸ್ಥಾನಕ್ಕೆ ನಾಮನಿರ್ದೇಶನ ಮಾಡುವ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇರವಾಗಿ ಅಖಾಡಕ್ಕೆ‌ ಇಳಿದಿದ್ದಾರೆ. ಇದೀಗ ಜಾರಕಿಹೊಳಿ ಬೆಂಬಲಿಗರು ನಿರ್ದೇಶಕರನ್ನು ಹೈಜಾಕ್ ಮಾಡಿ ಕೆಎಂಎಫ್ ಅಧ್ಯಕ್ಷ ಸ್ಥಾನ ಪಕ್ಕಾ ಮಾಡಿಕೊಳ್ಳುತ್ತಿದ್ದಾರೆ. ಹೈಜಾಕ್ ಆದ ನಿರ್ದೇಶಕರೆಲ್ಲಾ ಬಿಜೆಪಿ ಅಭ್ಯರ್ಥಿ ಬೆಂಬಲಿಸಲಿದ್ದಾರೆ ಎನ್ನಲಾಗಿದೆ.

ಒಟ್ಟು 14 ನಿರ್ದೇಶಕ ಸ್ಥಾನದ ಬಲವುಳ್ಳ ಕೆಎಂಎಫ್​ನಲ್ಲಿ ತುಮಕೂರು ಮತ್ತು ಮಂಡ್ಯ ಒಕ್ಕೂಟದ ನಿರ್ದೇಶಕ ಸ್ಥಾನಗಳು ಖಾಲಿ ಇದ್ದು, 12 ಸ್ಥಾನಗಳು ಮಾತ್ರ ಇವೆ. ಕಾಂಗ್ರೆಸ್ 8, ಜೆಡಿಎಸ್ 3 ನಿರ್ದೇಶಕರ ಬಲ ಹೊಂದಿದ್ದು, ಬಹುಮತಕ್ಕೆ 7 ನಿರ್ದೇಶಕರ ಬೆಂಬಲ ಬೇಕಿದೆ. ಬಹುಮತಕ್ಕೆ ಅಗತ್ಯವಿರುವ ಸಂಖ್ಯೆಯ ನಿರ್ದೇಶಕರನ್ನು ಬಿಜೆಪಿ ಹೈಜಾಕ್ ಮಾಡಿದೆ ಎನ್ನಲಾಗಿದೆ. ಕಾಂಗ್ರೆಸ್ ಬಹುಮತ‌ ಹೊಂದಿದ್ದರೂ ಹೆಚ್.ಡಿ.ರೇವಣ್ಣ ಕೆಎಂಎಫ್ ಅಧ್ಯಕ್ಷಗಾದಿ ಮೇಲೆ ಕಣ್ಣಿಟ್ಟು ನಿರ್ದೇಶಕರನ್ನು ಹೈಜಾಕ್ ಮಾಡಿದ್ದರು. ಇದರಿಂದಾಗಿ ಸೃಷ್ಟಿಯಾದ ಗೊಂದಲದಿಂದ‌ ರಾಜ್ಯ ಸರ್ಕಾರ ಚುನಾವಣೆ ಮುಂದೂಡಿಕೆ ಮಾಡಿತ್ತು. ಆಗಸ್ಟ್ 31ರಂದು ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ಜೆಡಿಎಸ್ ತಪ್ಪಿನಿಂದ ಕೆಎಂಎಫ್ ಕೈ ಜಾರಿ ಕಮಲ ತೆಕ್ಕೆಗೆ ಸೇರುತ್ತಿದೆ ಎನ್ನುವ ಮಾತುಗಳು ಕೇಳಿಬಂದಿವೆ.

ರೇವಣ್ಣ ತಂತ್ರಕ್ಕೆ ಪ್ರತಿಯಾಗಿ ಸರ್ಕಾರಕ್ಕೆ ದೂರು ನೀಡಿ ಚುನಾವಣೆ ಮುಂದೂಡಿಕೆಯಾಗಲು ಕಾರಣರಾಗಿದ್ದ ಕಾಂಗ್ರೆಸ್​​ನ ಭೀಮಾನಾಯ್ಕಗೂ ಕೆಎಂಎಫ್ ಹುದ್ದೆ ಕೈ ತಪ್ಪುತ್ತಿದೆ. ಚುನಾವಣೆ ಮುಂದೂಡಿಕೆಯಾಗುತ್ತಿದ್ದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿ ಬಿಜೆಪಿಯ ಬೆಂಬಲ ಕೋರಿದ್ದರು. ಭೀಮಾನಾಯ್ಕ್ ಹೆಸರು ಎರಡು ಮೂರು ದಿನ ಚಾಲ್ತಿಯಲ್ಲಿತ್ತು. ಆದರೆ ಬದಲಾದ ರಾಜಕೀಯ ವಿದ್ಯಮಾನದ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಬಾಲಚಂದ್ರ ಜಾರಕಿಹೊಳಿ ಎಂಟ್ರಿ ಕೊಟ್ಟಿದ್ದಾರೆ. ಹಾಗಾಗಿ ಭೀಮಾನಾಯ್ಕ್​ಗೆ ನಿರಾಸೆಯಾಗಿದೆ.

Intro:

ಬೆಂಗಳೂರು: ಸಚಿವ ಸ್ಥಾನ ಸಿಗದೇ ಅಸಮಧಾನಗೊಂಡಿದ್ದ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿಗೆ ಕೆಎಂಎಫ್ ಅಧ್ಯಕ್ಷಗಾದಿ ಪಕ್ಕಾ‌ ಆಗಿದೆ.

ಕೆಎಂಎಫ್ ಅಧ್ಯಕ್ಷಗಾದಿಗೆ ನಿರ್ದೇಶಕರನ್ನು‌‌ ಹೈದರಾಬಾದ್ ಗೆಕರೆದೊಯ್ದಿದ್ದ ಮಾಜಿ‌ ಸಚಿವ ರೇವಣ್ಣ ವಿರುದ್ಧ ಅದೇ ರೀತಿಯ ತಂತ್ರವನ್ನು ಬಿಜೆಪಿ‌ ಹೆಣೆದಿದ್ದು ನಿರ್ದೇಶಕರನ್ನು ಹೈಜಾಕ್ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಓರ್ವ ಜೆಡಿಎಸ್ ಮತ್ತು ಆರು ಕಾಂಗ್ರೆಸ್ ನಿರ್ದೇಶಕರನ್ನು ಮುಂಬೈಗೆ ಕರೆದೊಯ್ಯಲಾಗಿದ್ದು ಚುನಾವಣಾ ದಿನ ಅವರೆಲ್ಲಾ ನೇರವಾಗಿ ಕೆಎಂಎಫ್ ಕಚೇರಿಗೆ ಆಗಮಿಸಿ ಮತ ಚಲಾಯಿಸಲಿದ್ದಾರೆ.

ಕೆಎಂಎಫ್ ಅಧ್ಯಕ್ಷಗಾದಿ ಮೇಲೆ ಕಣ್ಣಿಟ್ಟಿರುವ ಬಾಲಚಂದ್ರ ಜಾರಕಿಹೊಳಿ ಅವರನ್ನು ಕೆಎಂಎಫ್ ನಿರ್ದೇಶಕ ಸ್ಥಾನಕ್ಕೆ ನಾಮನಿರ್ದೇಶನ ಮಾಡುವ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇರವಾಗಿ ಅಖಾಡಕ್ಕೆ‌ ಇಳಿದಿದ್ದು,ಇದೀಗ ಜಾರಕಿಹೊಳಿ ಬೆಂಬಲಿಗರು ನಿರ್ದೇಶಕರನ್ನು ಹೈಜಾಕ್ ಮಾಡಿ ಕೆಎಂಎಫ್ ಗಾದಿ ಪಕ್ಕಾ ಮಾಡಿಕೊಳ್ಳುತ್ತಿದ್ದಾರೆ.ಹೈಜಾಕ್ ಆದ ನಿರ್ದೇಶಕರೆಲ್ಲಾ ಬಿಜೆಪಿ ಅಭ್ಯರ್ಥಿ ಬೆಂಬಲಿಸಲಿದ್ದಾರೆ ಎನ್ನಲಾಗಿದೆ.

ಒಟ್ಟು 14 ನಿರ್ದೇಶಕ ಸ್ಥಾನದ ಬಲವುಳ್ಳ ಕೆಎಂಎಫ್ ನಲ್ಲಿ ತುಮಕೂರು ಮತ್ತು ಮಂಡ್ಯ ಒಕ್ಕೂಟದ ನಿರ್ದೇಶಕ ಸ್ಥಾನಗಳು ಖಾಲಿ ಇದ್ದು 12 ಸ್ಥಾನಗಳು ಮಾತ್ರ ಇವೆ. ಕಾಂಗ್ರೆಸ್ 8, ಜೆಡಿಎಸ್ 3 ನಿರ್ದೇಶಕರ ಬಲ ಹೊಂದಿದ್ದು ಬಹುಮತಕ್ಕೆ 7 ನಿರ್ದೇಶಕರ ಬೆಂಬಲ ಬೇಕಿದೆ.ಬಹುಮತಕ್ಕೆ ಅಗತ್ಯವಿರುವ ಸಂಖ್ಯೆಯ ನಿರ್ದೇಶಕರನ್ನು ಬಿಜೆಪಿ ಹೈಜಾಕ್ ಮಾಡಿದೆ ಎನ್ನಲಾಗಿದೆ.

ಕಾಂಗ್ರೆಸ್ ಬಹುಮತ‌ ಹೊಂದಿದ್ದರೂ ಹೆಚ್.ಡಿ ರೇವಣ್ಣ ಕೆಎಂಎಫ್ ಅಧ್ಯಕ್ಷಗಾದಿ ಮೇಲೆ ಕಣ್ಣಿಟ್ಟು ನಿರ್ದೇಶಕರನ್ನು ಹೈಜಾಕ್ ಮಾಡಿದ್ದರು ಇದರಿಂದಾಗಿ ಸೃಷ್ಟಿಯಾದ ಗೊಂದಲದಿಂದ‌ ರಾಜ್ಯ ಸರ್ಕಾರ ಚುನಾವಣೆ ಮುಂದೂಡಿಕೆ ಮಾಡಿತ್ತು. ಆಗಸ್ಟ್ 31 ರಂದು ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು ಜೆಡಿಎಸ್ ತಪ್ಪಿನಿಂದ ಕೆಎಂಎಫ್ ಕೈ ಜಾರಿ ಕಮಲ ತೆಕ್ಕೆತೆ ಸೇರುತ್ತಿದೆ ಎನ್ನುವ ಮಾತುಗಳು ಕೇಳಿಬಂದಿವೆ.

ಕೈ ಆಕಾಂಕ್ಷಿಗೆ ನಿರಾಸೆ:

ರೇವಣ್ಣ ತಂತ್ರಕ್ಕೆ ಪ್ರತಿಯಾಗಿ ಸರ್ಕಾರಕ್ಕೆ ದೂರು ನಿಕಡಿ ಚುನಾವಣೆ ಮುಂದೂಡಿಕೆಯಾಗಲ ಕಾರಣರಾಗಿದ್ದ ಕಾಂಗ್ರೆಸ್ ನ ಭೀಮಾನಾಯ್ಕ್ ಗೂ ಕೆಎಂಎಫ್ ಹುದ್ದೆ ಕೈ ತಪ್ಪುತ್ತಿದೆ. ಚುನಾವಣೆ ಮುಂದೂಡಿಕೆಯಾಗುತ್ತಿದ್ದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿ ಬಿಜೆಪಿಯ ಬೆಂಬಲ ಕೋರಿದ್ದರು.ಭೀಮಾನಾಯ್ಕ್ ಹೆಸರೂ ಎರಡು ಮೂರು ದಿನ ಚಾಲ್ತಿಯಲ್ಲಿತ್ತು ಆದರೆ ಬದಲಾದ ರಾಜಕೀಯ ವಿದ್ಯಮಾನದ ಹಿನ್ನಲೆಯಲ್ಲಿ ಬಿಜೆಪಿಯಿಂದ ಬಾಲಚಂದ್ರ ಜಾರಕಿಹೊಳಿ ಎಂಟ್ರಿ ಕೊಟ್ಟಿದ್ದಾರೆ ಹಾಗಾಗಿ ಭೀಮಾನಾಯ್ಕ್ ನಿರಾಸೆಯನುಭವಿಸಬೇಕಾಗಿದೆ.
Body:.Conclusion:null
ETV Bharat Logo

Copyright © 2025 Ushodaya Enterprises Pvt. Ltd., All Rights Reserved.