ETV Bharat / state

ಎರಡು ಸಮಾನಾಂತರ ರನ್ ವೇ ಹೊಂದಿರುವ ದಕ್ಷಿಣ ಭಾರತದ ಮೊದಲ ವಿಮಾನ ನಿಲ್ದಾಣ ಕೆಐಎ - KIA is the first airport in South India with 2 parallel runways

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಉತ್ತರ ರನ್‍ವೇ ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶನಾಲಯ (ಡಿಜಿಸಿಎ) ದಿಂದ ಒಪ್ಪಿಗೆ ಪಡೆದುಕೊಳ್ಳುವುದರೊಂದಿಗೆ ಇಂದು ಕಾರ್ಯಚರಣೆ  ಆರಂಭಿಸಿದೆ. ಎರಡು ಸಮಾನಾಂತರ  ರನ್ ವೇ ಹೊಂದಿರುವ ದಕ್ಷಿಣ ಭಾರತದ ಮೊದಲ ವಿಮಾನ ನಿಲ್ದಾಣ ಇದಾಗಿದೆ.

KIA airport
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
author img

By

Published : Mar 25, 2021, 11:39 PM IST

ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ( ಕೆಐಎ) ನಿಲ್ದಾಣದ ಉತ್ತರ ಭಾಗದ ರನ್ ವೇ ಮೇಲ್ದರ್ಜೆಗೇರಿಸುವ ಕಾಮಗಾರಿ ಕಳೆದ 10 ತಿಂಗಳಿಂದ ನಡೆಯುತ್ತಿದ್ದು, ಮೇಲ್ದರ್ಜೆಗೇರಿದ ರನ್ ವೇಯಲ್ಲಿ ವಿಮಾನಗಳ ಕಾರ್ಯಾಚರಣೆ ಆರಂಭವಾಗಿದೆ. ಈ ಮೂಲಕ ಎರಡು ಸಮಾನಾಂತರ ರನ್ ವೇ ಹೊಂದಿರುವ ದಕ್ಷಿಣ ಭಾರತದ ಮೊದಲ ವಿಮಾನ ನಿಲ್ದಾಣವಾಗಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಉತ್ತರ ರನ್‍ವೇ ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶನಾಲಯ (ಡಿಜಿಸಿಎ) ದಿಂದ ಒಪ್ಪಿಗೆ ಪಡೆದುಕೊಳ್ಳುವುದರೊಂದಿಗೆ ಇಂದು ಕಾರ್ಯಚರಣೆ ಆರಂಭಿಸಿದೆ. ಉತ್ತರ ರನ್ ವೇಯನ್ನು ಮೇಲ್ದರ್ಜೆಗೇರಿಸುವ ಕಾರಣದಿಂದ ಜೂನ್ 2020ರಿಂದ ಕಾರ್ಯಾಚರಣೆಗಳನ್ನು ನಿಲ್ಲಿಸಲಾಗಿತ್ತು. ಉತ್ತರ ರನ್‍ವೇ ನವೀಕರಣ ಕಾಮಗಾರಿಯಲ್ಲಿ ಮೇಲ್ಮೈಯನ್ನು ಹೊಸ ಆಸ್‍ಫಾಲ್ಟ್ ಪದರಗಳೊಂದಿಗೆ ಭದ್ರಪಡಿಸುವುದು, ಎರಡು ನೂತನ ಟ್ಯಾಕ್ಸಿ ಮಾರ್ಗಗಳ ಸೇರ್ಪಡೆ ಮಾಡಲಾಗಿದೆ.

ಕ್ಯಾಟ್ ಒನ್(CAT-I) ಎಂಬ ಮಾದರಿ ಮುಂದುವರಿಸಲಾಗಿದೆ. CAT-IIIB ಸೌಲಭ್ಯವಿರುವುವಂತೆ ದಕ್ಷಿಣ ರನ್‍ವೇ 2019ರ ಡಿಸೆಂಬರ್ 06 ರಿಂದ ಕಾರ್ಯಾಚರಣೆ ಆರಂಭಿಸಿದೆ. ಇದರಿಂದ ಕಡಿಮೆ ಬೆಳಕು ಮತ್ತು ಹವಾಮಾನ ವೈಪರೀತ್ಯ ಇದ್ದರೂ 2 ರನ್ ವೇಗಳಲ್ಲಿ ವಿಮಾನಗಳ ಹಾರಾಟ ನಡೆಯಲಿದೆ.

ಓದಿ: ಏರೋ ಇಂಡಿಯಾ 2021: ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹೋಗಲು ಬದಲಿ ಮಾರ್ಗ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.