ETV Bharat / state

ಕೆಇಆರ್‌ಸಿ ಮತ್ತು ಎಸ್‌ಎಲ್‌ಡಿಸಿಗಳಿಗೆ ಅಂತಾರಾಜ್ಯ ವಿದ್ಯುತ್ ಪ್ರಸರಣ ನಿಯಂತ್ರಣ ಅಧಿಕಾರವಿಲ್ಲ: ಹೈಕೋರ್ಟ್

author img

By

Published : Jun 21, 2023, 6:39 AM IST

ಅಂತಾರಾಜ್ಯ ವಿದ್ಯುತ್ ಪ್ರಸರಣ ಮತ್ತು ನಿಯಂತ್ರಿಸುವ ಅಧಿಕಾರವನ್ನು ಕೆಇಆರ್‌ಸಿ ಮತ್ತು ಎಸ್‌ಎಲ್‌ಡಿಸಿ ಹೊಂದಿಲ್ಲ ಎಂದು ನ್ಯಾಯಾಲಯ ಆದೇಶ ಮಾಡಿದೆ.

ಹೈಕೋರ್ಟ್​
ಹೈಕೋರ್ಟ್​

ಬೆಂಗಳೂರು: ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗ(ಕೆಇಆರ್‌ಸಿ) ಮತ್ತು ರಾಜ್ಯ ವಿದ್ಯುತ್ ರವಾನೆ ಕೇಂದ್ರ(ಎಸ್‌ಎಲ್‌ಡಿಸಿ)ಗಳು ಅಂತಾರಾಜ್ಯ ವಿದ್ಯುತ್ ಪ್ರಸರಣ ಮತ್ತು ನಿಯಂತ್ರಿಸುವ ಅಧಿಕಾರವನ್ನು ಹೊಂದಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ(ಕೆಪಿಟಿಸಿಎಲ್) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದ್ದು, ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.

ವಿದ್ಯುತ್ ಕಾಯ್ದೆ ಸೆಕ್ಷನ್79(1)(ಏಫ್) ಪ್ರಕಾರ ಅಂತಾರಾಜ್ಯ ಪ್ರಸರಣ ಮತ್ತು ವಿತರಣಗೆ ಸಂಬಂಧಿಸಿದಂತೆ ಕೇಂದ್ರೀಯ ವಿದ್ಯುತ್ ನಿಯಂತ್ರಣಾ ಆಯೋಗ(ಸಿಇಆರ್‌ಸಿ) ಈ ಸಂಬಂಧ ನಿರ್ಧಾರವನ್ನು ತೆಗೆದುಕೊಳ್ಳುವ ಅಧಿಕಾರವನ್ನು ಹೊಂದಿದೆ. ಆದರೆ, ಕೆಇಆರ್‌ಸಿ ಮತ್ತು ಎಸ್‌ಎಲ್‌ಡಿಸಿಗೆ ಈ ಅಧಿಕಾರ ಇಲ್ಲ ಎಂದು ಪೀಠ ತಿಳಿಸಿದೆ. ವಿದ್ಯುತ್ ಕಾಯಿದೆ ಸೆಕ್ಷನ್ 32ರಲ್ಲಿ ಎಸ್‌ಎಲ್‌ಡಿಸಿಯ ಕಾರ್ಯಗಳನ್ನು ವಿವರಿಸಲಾಗಿದೆ. ಸೆಕ್ಷನ್ 33ರ ಪ್ರಕಾರ ಈ ಸಂಸ್ಥೆಗೆ ರಾಜ್ಯದ ಆಂತರಿಕ ವಿಚಾರದಲ್ಲಿ ಮಾತ್ರ ವಿದ್ಯುತ್ ಪ್ರಸರಣ ನಿಯಂತ್ರಿಸಬಹುದಾಗಿದೆ. ಆದರೆ, ಅದು ಅಂತಾರಾಜ್ಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಪೀಠ ತಿಳಿಸಿದೆ.

ಅಲ್ಲದೆ, ಎಸ್‌ಎಲ್‌ಡಿಯನ್ನು ಕೆಪಿಟಿಸಿಎಲ್ ಅಧೀನದಲ್ಲಿ ಸ್ಥಾಪಿಸಿರುವುದರಿಂದ ಇವೆರಡರ ನಡುವೆ ಕೆಲ ಗೊಂದಲಗಳಿಗೆ ಕಾರಣವಾಗುತ್ತಿದೆ. ಆದ್ದರಿಂದ ಆದೇಶದ ಪ್ರತಿ ಸಿಕ್ಕ ಆರು ವಾರಗಳಲ್ಲಿ ಪ್ರತ್ಯೇಕ ಕಂಪನಿಯೊಂದನ್ನು ರಚನೆ ಮಾಡಬೇಕಾದ ಅಗತ್ಯವಿದೆ ಎಂದು ಪೀಠ ತಿಳಿಸಿದೆ.

ಇದನ್ನೂ ಓದಿ: ವಿಚ್ಛೇದನ ಪ್ರಕರಣದಲ್ಲಿ ಪತಿ ಪಾಟಿ ಸವಾಲಿನ ವೆಚ್ಚ ಭರಿಸಲು ನಿರ್ದೇಶಿಸಿದ್ದ ಆದೇಶ ರದ್ದು

ಪ್ರಕರಣದ ಹಿನ್ನೆಲೆ: ಶ್ಯಾಮನೂರು ಶುಗರ್ಸ್​ ತನ್ನ ಸಕ್ಕರೆ ಕಾರ್ಖಾನೆಯಲ್ಲಿ 20 ಮೆಗಾವ್ಯಾಟ್ ಸಾಮರ್ಥ್ಯದ ಸಹ-ಉತ್ಪಾದನಾ ಘಟಕವನ್ನು ಸ್ಥಾಪನೆ ಮಾಡಿತ್ತು. ಕಂಪನಿ 1998ರಲ್ಲಿ ತನ್ನ ಹೆಚ್ಚುವರಿ 10ರಿಂದ 15 ಮೆಗಾವ್ಯಾಟ್ ವಿದ್ಯುತ್ ಅನ್ನು ಖರೀದಿ ಮಾಡಲು ಒಪ್ಪಂದವನ್ನು ಮಾಡಿಕೊಂಡಿತ್ತು. ಆ ಒಪ್ಪಂದ 10 ವರ್ಷಗಳ ಅವಧಿಯದ್ದಾಗಿತ್ತು. ಆ ಅವಧಿ 2011ಕ್ಕೆ ಮುಕ್ತಾಯವಾಗಿತ್ತು. ಆನಂತರ ಒಪ್ಪಂದ ಮಾಡಿಕೊಂಡಿದ್ದ ಕಂಪನಿ, ವಿದ್ಯುತ್ ಖರೀದಿಗೆ ಅನುಮೋದನೆ ಮತ್ತು ಎನ್‌ಒಸಿ ಕೋರಿ ಮನವಿ ಸಲ್ಲಿಸಿತ್ತು. ಅದಕ್ಕೆ ಅನುಮತಿ ನೀಡಿದ್ದ ಎಸ್‌ಎಲ್‌ಡಿಸಿ, ಹೆಚ್ಚುವರಿ ವಿದ್ಯುತ್‌ಗೆ ಕೆಇಆರ್‌ಸಿ ನಿಗದಿ ಪಡಿಸಿರುವ ದರವೇ ಅನ್ವಯವಾಗುತ್ತದೆ ಎಂಬ ಷರತ್ತು ವಿಧಿಸಿತ್ತು.

ಆ ಆದೇಶವನ್ನು ಕಂಪನಿ ಸಿಇಆರ್‌ಸಿ ಮುಂದೆ ಪ್ರಶ್ನಿಸಿತ್ತು. ಸಿಇಆರ್‌ಸಿ, ಎಸ್‌ಎಲ್​ಡಿಸಿಗೆ ಅಂತಾರಾಜ್ಯ ವಿದ್ಯುತ್ ಪ್ರಸರಣಾ ಮತ್ತು ವಿತರಣೆ ಕುರಿತು ಆದೇಶ ನೀಡುವ ಅಧಿಕಾರವಿಲ್ಲವೆಂದು ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಕೆಪಿಟಿಸಿಎಲ್ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಅರ್ಜಿಯನ್ನು ಹೈಕೋರ್ಟ್ ಇದೀಗ ರದ್ದ ಪಡಿಸಿ ಆದೇಶಿಸಿದ್ದು, ಸಿಇಆರ್‌ಸಿ ಆದೇಶವನ್ನು ಎತ್ತಿ ಹಿಡಿದಿದೆ.

ಇದನ್ನೂ ಓದಿ: ಅಪ್ರಾಪ್ತನ ಕೈಗೆ ಬೈಕ್​ ಕೊಟ್ಟ ಮಾಲೀಕನಿಗೆ ₹20 ಸಾವಿರ ದಂಡ ವಿಧಿಸಿದ ತೀರ್ಥಹಳ್ಳಿ ಕೋರ್ಟ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.