ETV Bharat / state

ಥಾವರ್ ಚಂದ್ ಗೆಹ್ಲೋಟ್​ರನ್ನು ಭೇಟಿ ಮಾಡಿದ ಕೇರಳ ರಾಜ್ಯಪಾಲ - ಬೆಂಗಳೂರಿಗೆ ಭೇಟಿ ನೀಡಿದ ಕೇರಳ ರಾಜ್ಯಪಾಲ

ರಾಜ್ಯದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್​ರನ್ನು ಕೇರಳ ರಾಜ್ಯಪಾಲ ಆರಿಫ್​ ಮೊಹಮ್ಮದ್​ ಖಾನ್​ ಭೇಟಿ ಮಾಡಿ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿದರು.

Kerala Governor Arif Mohammed Khan, Kerala Governor Arif Mohammed Khan visit to Bengluru, Kerala Governor meet to Thavar Chand Gehlot, ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್  ಖಾನ್, ಬೆಂಗಳೂರಿಗೆ ಭೇಟಿ ನೀಡಿದ ಕೇರಳ ರಾಜ್ಯಪಾಲ, ಥಾವರ್ ಚಂದ್ ಗೆಹ್ಲೋಟ್​ರನ್ನು ಭೇಟಿ ಮಾಡಿದ ಕೇರಳ ರಾಜ್ಯಪಾಲ,
ಬೆಂಗಳೂರಿಗೆ ಕೇರಳ ರಾಜ್ಯಪಾಲರ ಭೇಟಿ
author img

By

Published : Dec 25, 2021, 4:39 AM IST

ಬೆಂಗಳೂರು: ರಾಜ್ಯಕ್ಕೆ ಆಗಮಿಸಿರುವ ಕೇರಳ ರಾಜ್ಯದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್​ರನ್ನು ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ರಾಜಭವನದಲ್ಲಿ ಆತ್ಮೀಯವಾಗಿ ಸ್ವಾಗತಿಸಿದರು.

Kerala Governor Arif Mohammed Khan, Kerala Governor Arif Mohammed Khan visit to Bengluru, Kerala Governor meet to Thavar Chand Gehlot, ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್  ಖಾನ್, ಬೆಂಗಳೂರಿಗೆ ಭೇಟಿ ನೀಡಿದ ಕೇರಳ ರಾಜ್ಯಪಾಲ, ಥಾವರ್ ಚಂದ್ ಗೆಹ್ಲೋಟ್​ರನ್ನು ಭೇಟಿ ಮಾಡಿದ ಕೇರಳ ರಾಜ್ಯಪಾಲ,
ಬೆಂಗಳೂರಿಗೆ ಕೇರಳ ರಾಜ್ಯಪಾಲರ ಭೇಟಿ

ಕೇರಳದಲ್ಲಿ ಜನಸಾಮಾನ್ಯರ ರಾಜ್ಯಪಾಲ ಎಂದೇ ಖ್ಯಾತಿಗಳಿಸಿರುವ ಆರಿಫ್ ಮೊಹಮ್ಮದ್ ಖಾನ್ ಬೆಂಗಳೂರಿಗೆ ಆಗಮಿಸಿದ್ದು, ರಾಜಭವನದಲ್ಲಿ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು. ಆತ್ಮೀಯವಾಗಿ ಕೇರಳ ರಾಜ್ಯಪಾಲರನ್ನು ಬರಮಾಡಿಕೊಂಡ ಕರ್ನಾಟಕ ರಾಜ್ಯಪಾಲ ಗೆಹ್ಲೋಟ್ ರಾಜ್ಯದ ಆತಿಥ್ಯ ನೀಡಿ ಗೌರವಿಸಿದರು. ಈ ವೇಳೆ ಕೆಲ ಕಾಲ ಉಭಯ ರಾಜ್ಯಪಾಲರು ಅನೌಪಚಾರಿಕವಾಗಿ ಮಾತುಕತೆ ನಡೆಸಿದರು.

ಓದಿ: ಪೊಲೀಸ್ ಇನ್ಸ್​ಪೆಕ್ಟರ್ ಸೈಮನ್ ಪತ್ನಿ ಬ್ಯಾಂಕ್ ಖಾತೆಗಳನ್ನು ಬಿಡುಗಡೆ ಮಾಡಿದ ಕೋರ್ಟ್

ಕೇರಳ ರಾಜ್ಯದ ವಿಶ್ವವಿದ್ಯಾಲಯಗಳ ಉಪ-ಕುಲಪತಿ ಹುದ್ದೆಯಲ್ಲಿ ರಾಜಕೀಯ ಹಸ್ತಕ್ಷೇಪ ನಡೆಯುತ್ತಿರುವ ಬಗ್ಗೆ ಅಲ್ಲಿನ ರಾಜ್ಯಪಾಲ, ಯೂನಿವರ್ಸಿಟಿಗಳ ಕುಲಪತಿಯೂ ಆಗಿರುವ ಆರಿಫ್​ ಮೊಹಮ್ಮದ್​ ಖಾನ್​ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಹೀಗೆ ಮುಂದುವರಿಯುತ್ತದೆ ಅಂತಾದರೆ ನಾನು ಕುಲಪತಿ ಹುದ್ದೆಗೆ ರಾಜೀನಾಮೆ ನೀಡುತ್ತೇನೆ. ಆ ಸ್ಥಾನವನ್ನು ನೀವೇ ವಹಿಸಿಕೊಳ್ಳಿ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ಗೆ ಪತ್ರ ಬರೆದು ಭಾರಿ ಸದ್ದು ಮಾಡಿದ್ದರು.ಹೀಗಾಗಿ ಕರ್ನಾಟಕದಲ್ಲಿ ಪರಿಸ್ಥಿತಿ ಹೇಗಿದೆ ಎನ್ನುವ ಕುರಿತು ಅನೌಪಚಾರಿಕ ಮಾತುಕತೆ ನಡೆಸಿರಬಹುದು ಎನ್ನಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.