ETV Bharat / state

ಕೇರಳ ವಿಮಾನ ದುರಂತ: ರಾಜ್ಯ ಕಾಂಗ್ರೆಸ್ ನಾಯಕರಿಂದ ಸಂತಾಪ - ಬೆಂಗಳೂರು

ಕೇರಳದ ಕೋಯಿಕ್ಕೋಡ್​ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ವಿಮಾನ ದುರಂತಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸೇರಿದಂತೆ ಹಲವು ನಾಯಕರು ಆತಂಕ ವ್ಯಕ್ತಪಡಿಸಿದ್ದಾರೆ.

Condolences from State Congress leader
ಕೇರಳ ವಿಮಾನ ದುರಂತ: ರಾಜ್ಯ ಕಾಂಗ್ರೆಸ್ ನಾಯಕರಿಂದ ಸಂತಾಪ..
author img

By

Published : Aug 8, 2020, 10:33 AM IST

ಬೆಂಗಳೂರು: ಕೇರಳ ರಾಜ್ಯದ ಕೋಯಿಕ್ಕೋಡ್​ ವಿಮಾನ ದುರಂತಕ್ಕೆ ರಾಜ್ಯ ಕಾಂಗ್ರೆಸ್ ನಾಯಕರು ಆತಂಕ ವ್ಯಕ್ತಪಡಿಸಿದ್ದು, ಸಂತಾಪ ಸೂಚಿಸಿದ್ದಾರೆ.

ನಿನ್ನೆ ರಾತ್ರಿ ಸಂಭವಿಸಿದ ದುರಂತದಲ್ಲಿ ಈಗಾಗಲೇ 18 ಮಂದಿ ಸಾವನ್ನಪ್ಪಿದ್ದು, 127 ಮಂದಿಗೆ ಗಾಯಗೊಂಡಿದ್ದಾರೆ. ಅದರಲ್ಲಿ 40ಕ್ಕೂ ಹೆಚ್ಚು ಮಂದಿಯ ಸ್ಥಿತಿ ಗಂಭೀರವಾಗಿದೆ. ಇಂತಹದ್ದೊಂದು ದುರಂತರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸೇರಿದಂತೆ ಹಲವು ನಾಯಕರು ಆತಂಕ ವ್ಯಕ್ತಪಡಿಸಿದ್ದಾರೆ.

  • Deeply saddened by the tragic air accident in Kozhikode. I extend my condolences to the bereaved families in this hour of grief and pray for the speedy recovery of the injured.

    — DK Shivakumar (@DKShivakumar) August 7, 2020 " class="align-text-top noRightClick twitterSection" data=" ">

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಟ್ವೀಟ್ ಮಾಡಿದ್ದು, ಕೋಯಿಕ್ಕೋಡ್​ ನಲ್ಲಿ ಸಂಭವಿಸಿದ ವಿಮಾನ ದುರಂತದ ವಿಷಯ ಕೇಳಿ ತೀವ್ರ ದುಃಖವಾಗಿದೆ. ನೋವಿನ ಈ ಸಂದರ್ಭದಲ್ಲಿ ಮೃತರ ಕುಟುಂಬಗಳಿಗೆ ನನ್ನ ಸಂತಾಪ ಸಲ್ಲಿಸುತ್ತೇನೆ ಮತ್ತು ಗಾಯಗೊಂಡವರ ಶೀಘ್ರ ಚೇತರಿಕೆಗಾಗಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

  • Saddened by the news of plane crash in Kerala. I wish for speedy recovery of all the injured.

    My condolences to the families of those who died.

    — Siddaramaiah (@siddaramaiah) August 7, 2020 " class="align-text-top noRightClick twitterSection" data=" ">

ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ಕೇರಳದಲ್ಲಿ ವಿಮಾನ ಅಪಘಾತದ ಸುದ್ದಿ ಕೇಳಿ ತುಂಬಾ ನೋವಾಗಿದೆ. ಎಲ್ಲಾ ಗಾಯಾಳುಗಳನ್ನು ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ನಾನು ಬಯಸುತ್ತೇನೆ. ಮೃತಪಟ್ಟವರ ಕುಟುಂಬಗಳಿಗೆ ನನ್ನ ಸಂತಾಪಗಳು ಎಂದಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಟ್ವೀಟ್​ನಲ್ಲಿ, ಕೇರಳದ ಕೋಯಿಕ್ಕೋಡ್​​​​ ನಲ್ಲಿ ವಿಮಾನಾಪಘಾತ ಸಂಭವಿಸಿದೆ. ವಂದೇಭಾರತ್ ಅಭಿಯಾನದ 5ನೇ ಹಂತದಲ್ಲಿ ದುಬೈನಿಂದ ದೇಶಕ್ಕೆ ಮರಳುತ್ತಿದ್ದ ಕೆಲವು ಪ್ರಯಾಣಿಕರು ಮೃತಪಟ್ಟಿರುವ ಮತ್ತು ಹಲವರು ಗಾಯಗೊಂಡಿರುವ ವಿಷಯ ತಿಳಿದು ತುಂಬಾ ನೋವಾಗಿದೆ ಎಂದಿದ್ದಾರೆ.

  • ಕೇರಳದ ಕೋಯಿಕೋಡ್ ನಲ್ಲಿ ಇಂದು ಸಂಜೆ ವಿಮಾನಾಪಘಾತ ಸಂಭವಿಸಿ, ವಂದೇಭಾರತ್ ಅಭಿಯಾನದ 5ನೇ ಹಂತದಲ್ಲಿ ದುಬೈನಿಂದ ದೇಶಕ್ಕೆ ಮರಳುತ್ತಿದ್ದ ಕೆಲವು ಪ್ರಯಾಣಿಕರು ಮೃತಪಟ್ಟಿರುವ ಮತ್ತು ಹಲವರು ಗಾಯಗೊಂಡಿರುವ ವಿಷಯ ತಿಳಿದು ತುಂಬಾ ನೋವಾಗಿದೆ. #flightaccident #Kerala #Kozhikode pic.twitter.com/M6xq7tld3b

    — Eshwar Khandre (@eshwar_khandre) August 7, 2020 " class="align-text-top noRightClick twitterSection" data=" ">

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಟ್ವೀಟ್​ನಲ್ಲಿ, ಕೇರಳದ ಕೋಯಿಕ್ಕೋಡ್​ನಲ್ಲಿ ಏರ್ ಇಂಡಿಯಾ ವಿಮಾನವು ಲ್ಯಾಂಡಿಂಗ್ ವೇಳೆ ಅಪಘಾತಕ್ಕೊಳಪಟ್ಟ ಸುದ್ದಿ ನಿಜಕ್ಕೂ ಆಘಾತಕಾರಿಯಾಗಿದೆ. ಅಪಘಾತದಲ್ಲಿ ಮೃತರಾದವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಗಾಯಾಳುಗಳು ಶೀಘ್ರವಾಗಿ ಗುಣಮುಖರಾಗಲಿ ಎಂದು ಸೃಷ್ಟಿಕರ್ತನಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವೀಟ್​ನ ಲ್ಲಿ, ಕೇರಳದ ಕೋಯಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿ ಪೈಲಟ್ ಸೇರಿದಂತೆ 18 ಜನ ದುರಂತ ಸಾವಿಗೀಡಾಗಿರೋದು ಅತ್ಯಂತ ದುಃಖದ ವಿಚಾರ. ಘಟನೆಯಲ್ಲಿ ಮೃತಪಟ್ಟವರ ಆತ್ಮಕ್ಕೆ ಚಿರಶಾಂತಿ ದೊರಕಲಿ. ಗಾಯಾಳುಗಳು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಬೇಡಿಕೊಳ್ಳುತ್ತೇನೆ ಎಂದಿದ್ದಾರೆ.

  • ಕೇರಳದ ಕೋಯಿಕೋಡ್ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿ ಪೈಲಟ್ ಸೇರಿದಂತೆ 17 ಜನ ದುರಂತ ಸಾವಿಗೀಡಾಗಿರೋದು ಅತ್ಯಂತ ದುಃಖದ ವಿಚಾರ.
    ಘಟನೆಯಲ್ಲಿ ಮೃತಪಟ್ಟವರ ಆತ್ಮಕ್ಕೆ ಚಿರಶಾಂತಿ ದೊರಕಲಿ.
    ಗಾಯಾಳುಗಳು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಬೇಡಿಕೊಳ್ಳುತ್ತೇನೆ..

    — Dinesh Gundu Rao/ದಿನೇಶ್ ಗುಂಡೂರಾವ್ (@dineshgrao) August 8, 2020 " class="align-text-top noRightClick twitterSection" data=" ">

ರಾಜ್ಯಸಭೆ ಸದಸ್ಯ ಜಿ.ಸಿ. ಚಂದ್ರಶೇಖರ್ ಟ್ವೀಟ್​ನಲ್ಲಿ, ಕೋಯಿಕ್ಕೋಡ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದುಬೈನಿಂದ ಕೋಯಿಕ್ಕೋಡ್​​​​ಗೆ ಬಂದಿಳಿದ ಏರ್-ಇಂಡಿಯಾ ವಿಮಾನ ರನ್​ ವೇಯಲ್ಲಿ ಪತನವಾಗಿರುವುದು ಅತಿ ದುಃಖಕರ ವಿಷಯ ಎಂದಿದ್ದಾರೆ.

  • ಕೇರಳದ ಕೋಯಿಕ್ಕೋಡ್ ನಲ್ಲಿ ಲ್ಯಾಂಡಿಂಗ್ ವೇಳೆ ವಂದೇ ಭಾರತ್ ಮಿಷನ್'ನ ಏರ್ ಇಂಡಿಯಾ ವಿಮಾನ ಅಪಘಾತಕ್ಕೊಳಪಟ್ಟದ್ದು ತೀವ್ರ ಆಘಾತಕಾರಿಯಾಗಿದೆ,

    ಅಪಘಾತದಲ್ಲಿ ಮೃತರಾದವರಿಗೆ ಸಂತಾಪಗಳು,

    ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳುವಂತಾಗಲಿ ಎಂದು ಹಾರೈಸುತ್ತೇವೆ.

    — Karnataka Congress (@INCKarnataka) August 7, 2020 " class="align-text-top noRightClick twitterSection" data=" ">

ರಾಜ್ಯ ಕಾಂಗ್ರೆಸ್ ಪಕ್ಷ ತನ್ನ ಟ್ವೀಟ್​ನಲ್ಲಿ, ಕೇರಳದ ಕೋಯಿಕ್ಕೋಡ್​ನಲ್ಲಿ ಲ್ಯಾಂಡಿಂಗ್ ವೇಳೆ ವಂದೇ ಭಾರತ್ ಮಿಷನ್'ನ ಏರ್ ಇಂಡಿಯಾ ವಿಮಾನ ಅಪಘಾತಕ್ಕೊಳಪಟ್ಟದ್ದು ತೀವ್ರ ಆಘಾತಕಾರಿಯಾಗಿದೆ. ಅಪಘಾತದಲ್ಲಿ ಮೃತರಾದವರಿಗೆ ಸಂತಾಪಗಳು. ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳುವಂತಾಗಲಿ ಎಂದು ಹಾರೈಸುತ್ತೇವೆ ಎಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.