ETV Bharat / state

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಳೆಯಿಂದ ಅದ್ದೂರಿ ದಸರಾ ಉತ್ಸವ.. - ಬೃಹತ್ ಆನೆಯ ಬೊಂಬೆ

ಇಡೀ ರಾಜ್ಯದ ಜನರು ದಸರಾ ಹಬ್ಬದ ಸಂಭ್ರಮದಲ್ಲಿದ್ದಾರೆ. ಇದಕ್ಕೆ ಸ್ಫೂರ್ತಿ ಎಂಬಂತೆ  ಮೈಸೂರಿನಲ್ಲಿ ನಡೆಯುವಂತೆಯೇ ಇತ್ತ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅದ್ದೂರಿಯಾಗಿ ದಸರಾ ಹಬ್ಬವನ್ನು ಆಚರಿಸಲಾಗುತ್ತಿದೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಳೆಯಿಂದ ಅದ್ದೂರಿ ದಸರಾ ಉತ್ಸವ
author img

By

Published : Sep 30, 2019, 8:38 PM IST

Updated : Sep 30, 2019, 11:59 PM IST

ಬೆಂಗಳೂರು: ಇಡೀ ರಾಜ್ಯದ ಜನರು ದಸರಾ ಹಬ್ಬದ ಸಂಭ್ರಮದಲ್ಲಿದ್ದಾರೆ. ಇದಕ್ಕೆ ಸ್ಫೂರ್ತಿ ಎಂಬಂತೆ ಮೈಸೂರಿನಲ್ಲಿ ನಡೆಯುವಂತೆಯೇ ಇತ್ತ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅದ್ದೂರಿಯಾಗಿ ದಸರಾ ಹಬ್ಬ ಆಚರಿಸಲಾಗುತ್ತಿದೆ.

ಅಕ್ಟೋಬರ್ 01ರಿಂದ 03, 2019ರವರೆಗೆ ಪ್ರತಿದಿನ ಸಂಜೆ 6 ಗಂಟೆಯಿಂದ ರಾತ್ರಿ 8.30ರವರೆಗೆ ದಸರಾ ಉತ್ಸವ ಆಚರಣೆ ಮಾಡಲಾಗುತ್ತದೆ. ಪ್ರತಿ ವರ್ಷ ದಸರಾವನ್ನು ಅದ್ದೂರಿಯಾಗಿ ಆಚರಿಸುತ್ತಾ ಬಂದಿರುವ ಕೆಐಎಎಲ್ ನಾಳೆಯಿಂದ 5ನೇ ಆವೃತ್ತಿಗೆ ಆತಿಥ್ಯ ವಹಿಸಲು ಸಜ್ಜಾಗಿದೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಳೆಯಿಂದ ಅದ್ದೂರಿ ದಸರಾ ಉತ್ಸವ

ಮೂರು ದಿನಗಳ ಈ ಸಂಭ್ರಮ ಬೆಂಗಳೂರು ವಿಮಾನ ನಿಲ್ದಾಣದ ಆವರಣದಲ್ಲಿ ನಡೆಯಲಿದ್ದು, ಪ್ರಯಾಣಿಕರು ಮತ್ತು ವಿಮಾನ ನಿಲ್ದಾಣಕ್ಕೆ ಆಗಮಿಸುವ ಜನರಿಗೆ ಕರ್ನಾಟಕದ ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸಲಿದೆ. ಕರ್ನಾಟಕದ ಎಲ್ಲೆಡೆಯ ಖ್ಯಾತ ಕಲಾವಿದರು ತಮ್ಮ ಸಂಗೀತ, ನೃತ್ಯ, ವಾದ್ಯ ಸಂಗೀತದಿಂದ ಮನರಂಜನೆ ನೀಡಿದ್ರೆ, ವಿಮಾನ ನಿಲ್ದಾಣದ ಮುಂದೆ ಯುದ್ಧ ಕಲೆಗಳ ಪ್ರದರ್ಶನ ಏರ್ಪಡಿಸಲಾಗಿದೆ. ಇದರ ಜೊತೆಯಲ್ಲಿ ಬೊಂಬೆ ಹಬ್ಬ ಎನ್ನಲಾಗುವ ಸಾಂಪ್ರದಾಯಿಕ ಜಾನಪದ ಶೈಲಿಯ ಬೊಂಬೆಗಳ ಪ್ರದರ್ಶನವನ್ನು ವಿಮಾನ ನಿಲ್ದಾಣದ ರಸ್ತೆಗಳ ಪಕ್ಕದ ಹುಲ್ಲು ಹಾಸಿನ ಮೇಲೆ ಆಯೋಜಿಸಲಾಗುತ್ತಿದೆ.

ದಸರಾ ಉತ್ಸವದ ಭಾಗವಾಗಿರುವ ಬೃಹತ್ ಆನೆಯ ಬೊಂಬೆಯನ್ನು ಕೂಡ ಪ್ರದರ್ಶಿಸಲಾಗುತ್ತಿದೆ. ದಸರಾ ತಿರುಳಿನ ವರ್ಚುವಲ್ ರಿಯಾಲಿಟಿ ಗೇಮ್‌ನ ಕೂಡ ಗ್ರಾಹಕರು ಅನುಭವಿಸಬಹುದಾಗಿದ್ದು, ಈ ಹೊಳಪಿಗೆ ಮತ್ತೊಂದು ಸೇರ್ಪಡೆಯಾಗಿ ವಿಮಾನ ನಿಲ್ದಾಣದ ಟರ್ಮಿನಲ್‌ನ ಹೊಳಪಿನ ಬೆಳಕಿನೊಂದಿಗೆ ಅಲಂಕರಿಸಲಾಗುತ್ತಿದೆ.

ಬಿಐಎಎಲ್ ದತ್ತು ಪಡೆದಿರುವ ಅರದೇಶನಹಳ್ಳಿಯ ಸರ್ಕಾರಿ ಶಾಲೆಯಲ್ಲಿ‌ ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳು ಸಂಭ್ರಮದಲ್ಲಿ ತೊಡಗಿಸಿಕೊಳ್ಳಲು ಶಾಲೆಯಲ್ಲಿ ಗ್ರಾಮೋತ್ಸವವನ್ನು ಆಯೋಜಿಸಿದ್ದು, ಈ ಮೂಲಕ ಡೊಳ್ಳುಕುಣಿತ, ಸೂತ್ರದ ಬೊಂಬೆಯಾಟ ಪ್ರದರ್ಶನ ಮತ್ತು ಗಾರುಡಿ ಗೊಂಬೆ ನೃತ್ಯಗಾರರಿಂದ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ.

Intro:KN_BNG_02_30_airport_dhasara_ Ambarish_7203301

Slug: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಳೆಯಿಂದ ಅದ್ದೂರಿ ದಸರಾ ಉತ್ಸವ

ಬೆಂಗಳೂರು: ಇಡೀ ರಾಜ್ಯಾದ ಜನರು ದಸರ ಹಬ್ಬದ ಸಂಭ್ರಮದಲ್ಲಿದ್ದಾರೆ.. ಮೈಸೂರಿನಲ್ಲಿ ಅದ್ದೂರಿಯಾಗಿ ದಸರ ಹಬ್ಬವನ್ನು ಆಚರಿಸಿದ್ರೆ, ಇತ್ತ ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅದ್ದೂರಿಯಾಗಿ ದಸರ ಹಬ್ಬವನ್ನು ಆಚರಿಸುತ್ತಿದ್ದಾರೆ..‌

ಹೌದು.. ಅಕ್ಟೋಬರ್ 01ರಿಂದ 03, 2019ರವರೆಗೆ ಪ್ರತಿದಿನ ಸಂಜೆ 6 ಗಂಟೆಯಿಂದ ರಾತ್ರಿ 8.30ರವರೆಗೆ ದಸರಾ ಉತ್ಸವ ಆಚರಣೆ ಮಾಡಲಾಗುತ್ತಿದೆ.. ಪ್ರತಿ ವರ್ಷ ದಸರವನ್ನು ಅದ್ದೂರಿಯಾಗಿ ಆಚರಿಸುತ್ತಾ ಬಂದಿರುವ ಕೆಐಎಎಲ್ ನಾಳೆಯಿಂದ 5ನೇ ಆವೃತ್ತಿಗೆ ಆತಿಥ್ಯ ವಹಿಸಲು ಸಜ್ಜಾಗಿದೆ.

ಮೂರು ದಿನಗಳ ಈ ಸಂಭ್ರಮ ಬೆಂಗಳೂರು ವಿಮಾನ ನಿಲ್ದಾಣದ ಆವರಣದಲ್ಲಿ ನಡೆಯಲಿದ್ದು, ಪ್ರಯಾಣಿಕರು ಮತ್ತು ವಿಮಾನ ನಿಲ್ದಾಣಕ್ಕೆ ಆಗಮಿಸುವ ಜನರಿಗೆ ಕರ್ನಾಟಕದ ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸಲಿದೆ. ಕರ್ನಾಟಕದ ಎಲ್ಲೆಡೆಯ ಖ್ಯಾತ
ಕಲಾವಿದರು ತಮ್ಮ ಸಂಗೀತ, ನೃತ್ಯ, ವಾದ್ಯ ಸಂಗೀತದಿಂದ ಮನರಂಜನೆ ನೀಡಿದ್ರೆ, ವಿಮಾನ ನಿಲ್ದಾಣದ ಮುಂದೆ ಯುದ್ಧ ಕಲೆಗಳ ಪ್ರದರ್ಶನ ಏರ್ಪಡಿಸಲಾಗಿದೆ.. ಇದರ ಜೊತೆಯಲ್ಲಿ ಬೊಂಬೆ ಹಬ್ಬ ಎನ್ನಲಾಗುವ ಸಾಂಪ್ರದಾಯಿಕ ಜಾನಪದ ಶೈಲಿಯ ಬೊಂಬೆಗಳ ಪ್ರದರ್ಶನವನ್ನು ವಿಮಾನ ನಿಲ್ದಾಣದ
ರಸ್ತೆಗಳ ಪಕ್ಕದ ಕಲ್ಲುಹಾಸಿನ ಮೇಲೆ ಆಯೋಜಿಸಲಾಗುತ್ತಿದೆ.

ದಸರಾ ಉತ್ಸವದ ಭಾಗವಾಗಿರುವ ಆನೆಗಳ ರೀತಿಯಲ್ಲಿ ಬೃಹತ್ ಆನೆಯ ಬೊಂಬೆಯನ್ನು ಕೂಡ ಪ್ರದರ್ಶಿಸಲಾಗುತ್ತಿದೆ. ದಸರಾ ತಿರುಳಿನ ವರ್ಚುವಲ್ ರಿಯಾಲಿಟಿ ಗೇಮ್ ಅನ್ನು ಕೂಡ ಗ್ರಾಹಕರು ಅನುಭವಿಸಬಹುದಾಗಿದ್ದು, ಈ ಹೊಳಪಿಗೆ ಮತ್ತೊಂದು ಸೇರ್ಪಡೆಯಾಗಿ ವಿಮಾನ ನಿಲ್ದಾಣದ ಟರ್ಮಿನಲ್ ಅನ್ನು ಹೊಳಪಿನ ಬೆಳಕಿನೊಂದಿಗೆ ಅಲಂಕರಿಸಲಾಗುತ್ತಿದೆ..

ಬಿಐಎಎಲ್ ದತ್ತು ಪಡೆದಿರುವ ಅರದೇಶನಹಳ್ಳಿಯ ಸರ್ಕಾರಿ ಶಾಲೆಯಲ್ಲಿ‌ ದಸರ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ..ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳು ಸಂಭ್ರಮದಲ್ಲಿ ತೊಡಗಿಸಿಕೊಳ್ಳಲು ಶಾಲೆಯಲ್ಲಿ ಗ್ರಾಮೋತ್ಸವವನ್ನು ಆಯೋಜಿಸಿದ್ದು, ಈ ಮೂಲಕ ಡೊಳ್ಳುಕುಣಿತ, ಸೂತ್ರದ ಬೊಂಬೆಯಾಟ ಪ್ರದರ್ಶನ ಮತ್ತು ಗಾರುಡಿ ಗೊಂಬೆ ನೃತ್ಯಗಾರರಿಂದ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ.Body:NoConclusion:No
Last Updated : Sep 30, 2019, 11:59 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.