ದೇವನಹಳ್ಳಿ: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಕೋರಿಯರ್ ವಿಭಾಗದಲ್ಲಿ ತಪಾಸಣೆ ನಡೆಸುವ ವೇಳೆ ಭಾರಿ ಮೊತ್ತ ಮಾದಕ ದ್ರವ್ಯ ಪತ್ತೆಯಾಗಿದೆ.
![Kempegowda International Airport Detection of drug methaglone](https://etvbharatimages.akamaized.net/etvbharat/prod-images/kn-bng-01-kial-av-7208821_30092020092837_3009f_1601438317_937.jpg)
ಪಾರ್ಸಲ್ ನಲ್ಲಿ ಬಂದಿದ್ದ ಲೆದರ್ ಬ್ಯಾಗ್ ಪರಿಶೀಲನೆ ವೇಳೆ 20 ಲಕ್ಷ ರೂ. ಮೌಲ್ಯದ ಮಾದಕ ದ್ರವ್ಯ ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನೈಜೀರಿಯನ್ ಪ್ರಜೆ ಬಂಧನವಾಗಿದ್ದು, ಈ ಹಿಂದೆ ಈತ 1.988 ಕೆಜಿ ಮಾದಕ ಪಾತ್ರೆಗಳನ್ನು ಆಮದು ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಎನ್ ಡಿಪಿಎಸ್ 1985ರ ಪ್ರಕರಣದಡಿ ಪ್ರಕರಣ ದಾಖಲಾಗಿದೆ.