ದೇವನಹಳ್ಳಿ(ಬೆಂಗಳೂರು): ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಭಾರತದ ಮೂರನೇ ಅತ್ಯಂತ ಚಟುವಟಿಕೆಯ ವಿಮಾನ ನಿಲ್ದಾಣ. ಇದೀಗ ದಕ್ಷಿಣ ಭಾರತದ ವರ್ಗಾವಣೆ ಕೇಂದ್ರ (ಟ್ರಾನ್ಸ್ಫರ್ ಹಬ್)ವಾಗಿ ಹೊರಹೊಮ್ಮಿದೆ.
ಭಾರತದ ವೈಮಾನಿಕ ವಲಯವು ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಇದರ ಜತೆಗೆ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಎಲ್) ಸಹ ವೇಗವಾಗಿ ಬೆಳೆಯುತ್ತಿದೆ. ಕೆಐಎಎಲ್ನಲ್ಲಿ 75 ನಿಮಿಷಗಳ ಹಾರಾಟದ ವ್ಯಾಪ್ತಿಯಲ್ಲಿ 23 ಪ್ರಮುಖ ನಗರಗಳಿಗೆ ಸಂಪರ್ಕಿಸುವ ಸಾಧನೆ ಮಾಡಿದೆ. ಇದರಿಂದ ಕೆಐಎಎಲ್ ದಕ್ಷಿಣ ಭಾರತದ ಟ್ರಾನ್ಸ್ಫರ್ ಹಬ್ ಆಗಿ ಹೊರ ಹೊಮ್ಮಿದೆ.
ಪ್ರಸ್ತುತ ಬೆಂಗಳೂರು ವಿಮಾನ ನಿಲ್ದಾಣ 74 ಸ್ಥಳೀಯ ತಾಣಗಳಿಗೆ ವಿಮಾನ ಸೇವೆ ಒದಗಿಸುತ್ತಿದೆ. ಕೋವಿಡ್ ಪೂರ್ವದಲ್ಲಿ ಇದೇ ವಿಮಾನ ನಿಲ್ದಾಣದಿಂದ ಕೇವಲ 54 ತಾಣಗಳಿಗೆ ವಿಮಾನಯಾನ ಸೇವೆ ಇತ್ತು. ಬೆಂಗಳೂರಿನಿಂದ ಮಹಾನಗರಗಳಲ್ಲದ ನಗರಗಳಿಗೂ ಇಲ್ಲಿಂದ ವಿಮಾನ ಸೇವೆ ಇದೆ. 25.6 ಕೋಟಿ ಜನರಿಗೆ ವಿಮಾನಯಾನ ಸೇವೆ ನೀಡಿದ್ದು, ಇದು ಭಾರತದಲ್ಲಿ ಶೇಕಡಾ 20ರಷ್ಟಿದೆ. ಕೆಐಎಎಲ್ನ ವಿಮಾನಯಾನ ಪ್ರಗತಿಯಿಂದ ಬೆಂಗಳೂರು ಸುತ್ತಮುತ್ತಲಿನ ಪ್ರದೇಶದ ಆರ್ಥಿಕ ಪ್ರಗತಿಯೂ ಆಗುತ್ತಿದೆ.
ಇದನ್ನೂ ಓದಿ: ಅಂತಾರಾಜ್ಯ ಜಲ ವ್ಯಾಜ್ಯಗಳ ಕುರಿತು ಕಾನೂನು ತಜ್ಞರೊಂದಿಗೆ ಸಿಎಂ ಸಭೆ..!