ETV Bharat / state

ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಸ್ಟಾಫ್​ ನರ್ಸ್ ಹುದ್ದೆಗಳು;​ ನೇಮಕಾತಿಗೆ ಕೆಇಎ ಅಧಿಸೂಚನೆ

ಬೆಂಗಳೂರಿನ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಒಟ್ಟು 100 ಸ್ಟಾಫ್​ ನರ್ಸ್​​ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

KEA Notification For Staff Nurse recruitment in jayadeva hospital bangalore

author img

By ETV Bharat Karnataka Team

Published : Oct 11, 2023, 4:46 PM IST

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಸ್ಟಾಫ್​ ನರ್ಸ್​​ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. ರಾಜ್ಯ ಸರ್ಕಾರದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗಳಲ್ಲಿ ಖಾಲಿ ಇರುವ ಒಟ್ಟು ಹುದ್ದೆಗಳನ್ನು ತುಂಬಲು ಅರ್ಜಿ ಆಹ್ವಾನಿಸಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.

ಅಧಿಸೂಚನೆ
ಅಧಿಸೂಚನೆ

ಹುದ್ದೆಗಳ ವಿವರ: 100 ಸ್ಟಾಫ್​ ನರ್ಸ್​​ ಹುದ್ದೆಗಳ ಭರ್ತಿ. ಇದರಲ್ಲಿ 92 ಉಳಿಕೆ ಮೂಲ ವೃಂದವಿದ್ದು, 8 ಹುದ್ದೆಗಳು ಕಲ್ಯಾಣ ಕರ್ನಾಟಕಕ್ಕೆ ಮೀಸಲಾಗಿವೆ.

ವಿದ್ಯಾರ್ಹತೆ: ಅಭ್ಯರ್ಥಿಗಳು ಅಧಿಕೃತ ನರ್ಸಿಂಗ್ ಮಂಡಳಿಗಳಿಂದ ನರ್ಸಿಂಗ್​​ ಸರ್ಟಿಫಿಕೇಟ್​ ಪಡೆದಿದ್ದು ನರ್ಸ್​ ಎಂದು ದಾಖಲಾತಿ ಹೊಂದಿರಬೇಕು.

ವೇತನ: 33,450 ರೂ ನಿಂದ 62,600 ರೂವರೆಗೆ ಮಾಸಿಕ ವೇತನ.

ವಯೋಮಿತಿ: ಕನಿಷ್ಟ 18 ವರ್ಷ, ಗರಿಷ್ಠ 35 ವಯೋಮಿತಿ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ 1 ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಪ್ರವರ್ಗ 2ಎ, 2ಬಿ, 2ಎ, 3ಬಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ.

ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಆನ್​ಲೈನ್​​ ಮೂಲಕ ಅರ್ಜಿ ಸಲ್ಲಿಸಬಹುದು​. ಸಾಮಾನ್ಯ ಮತ್ತು ಇತರೆ ವರ್ಗಗಳ ಅಭ್ಯರ್ಥಿಗಳಿಗೆ 750 ರೂ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ 1 ಅಭ್ಯರ್ಥಿಗಳಿಗೆ 500 ರೂ ಅರ್ಜಿ ಶುಲ್ಕ ನಿಗದಿಸಲಾಗಿದೆ.

ಆಯ್ಕೆ ಪ್ರಕ್ರಿಯೆ: ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆ.

ಅಕ್ಟೋಬರ್​ 4ರಿಂದ ಅರ್ಜಿ ಸಲ್ಲಿಕೆ ಮಾಡಬಹುದಾಗಿದ್ದು, ನವೆಂಬರ್​ 2 ಕೊನೆಯ ದಿನ. ಅರ್ಜಿ ಶುಲ್ಕ ಪಾವತಿಗೆ ಕಡೆಯ ದಿನಾಂಕ ನವೆಂಬರ್​ 4. ಅಧಿಕೃತ ಅಧಿಸೂಚನೆ ಹಾಗೂ ಅರ್ಜಿ ಸಲ್ಲಿಕೆಗೆ kea.kar.nic.in ಭೇಟಿ ನೀಡಿ.

ಇದನ್ನೂ ಓದಿ: ಚಿತ್ರದುರ್ಗ ಡಿಸಿಸಿ ಬ್ಯಾಂಕ್​ನಲ್ಲಿ ನೇಮಕಾತಿ; 68 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.