ಬೆಂಗಳೂರು: ದೋಸ್ತಿ ಶಾಸಕರ ರಾಜೀನಾಮೆ ಬೆನ್ನಲ್ಲೇ ಸಂಜೆ 5 ಗಂಟೆಗೆ ಕೆ.ಸಿ ವೇಣುಗೋಪಾಲ್ ಬೆಂಗಳೂರಿಗೆ ಆಗಮಿಸಲಿದ್ದಾರೆ.
ಪ್ರಸಕ್ತ ರಾಜಕೀಯ ಬೆಳವಣಿಗೆ, ಸಚಿವ ಸಂಪುಟ ಪುನರ್ ರಚನೆ, ಆಪರೇಷನ್ ಕಮಲ ತಡೆಯಲು ಪ್ಲಾನ್ ರೂಪಿಸುವುದರ ಜೊತೆಗೆ ರಾಜೀನಾಮೆ ಸಲ್ಲಿಸಿರುವ ಶಾಸಕರ ಮನವೊಲಿಸುವ ಯತ್ನ ಮಾಡಲಿದ್ದಾರೆ..
ಇಂದು ಸಂಜೆಯೆ ಕಾಂಗ್ರೆಸ್ ಸಚಿವರು ಶಾಸಕರ ಜೊತೆ ವೇಣುಗೋಪಾಲ್ ಸಭೆ ನಡೆಸಲಿದ್ದಾರೆ. ಕಾಂಗ್ರೆಸ್ ಸಚಿವರಿಂದ ರಾಜೀನಾಮೆ ಪಡೆದು ಸಚಿವ ಸಂಪುಟ ಪುನಾರಚನೆ ಮಾಡುವ ಬಗ್ಗೆ ತೀರ್ಮಾನ ಸಾಧ್ಯತೆ ಇದೆ.
8 ಶಾಸಕರು ರಾಜೀನಾಮೆ ಸಲ್ಲಿಸಿದ್ದು, ಕಾಂಗ್ರೆಸ್ ಶಾಸಕರು ಹಾಗೂ ಸಚಿವ ಡಿ.ಕೆ. ಶಿವಕುಮಾರ್ ಮನವೊಲಿಸಲು ನಡೆಸಿದ ಯತ್ನ ವಿಫಲವಾಗಿದೆ. ಇನ್ನು ವೇಣುಗೋಪಾಲ್ ಆಗಮಿಸಿ ಏನು ಮಾಡಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.
ಕಳೆದ ಕೆಲ ತಿಂಗಳಿಂದ ಮೈತ್ರಿ ಸರ್ಕಾರ ಸಮಸ್ಯೆ ಉದ್ಭವಿಸುವವರೆಗೂ ಸುಮ್ಮನಿದ್ದು, ಸಮಸ್ಯೆ ಎದುರಾದಾಗ ಪರಿಹಾರ ಹುಡುಕುವ ಯತ್ನ ಮಾಡುತ್ತಿದ್ದು, ಇಂದು ಕೂಡ ಅದೇ ಸ್ಥಿತಿ ಎದುರಾಗಿದೆ.