ETV Bharat / state

ರಾಜ್ಯದಲ್ಲಿಂದು 1151 ಮಂದಿಗೆ COVID ದೃಢ: ಸಾವಿನ ಸಂಖ್ಯೆ ಗಣನೀಯ ಇಳಿಕೆ

ರಾಜ್ಯದಲ್ಲಿ ಹೊಸದಾಗಿ 1,151 ಜನರಿಗೆ ಕೋವಿಡ್ ದೃಢಪಟ್ಟಿದ್ದು, ಸಾವಿನ ಸಂಖ್ಯೆ ಗಣನೀಯವಾಗಿ ಇಳಿಕೆ ಕಂಡಿದೆ. ಅಲ್ಲದೆ, ಬೆಂಗಳೂರಿನಲ್ಲಿ ಮೃತರ ಸಂಖ್ಯೆ ಶೂನ್ಯಕ್ಕೆ ಇಳಿದಿರುವುದು ಖುಷಿಯ ವಿಚಾರ.

ಕೊರೊನಾ
ಕೊರೊನಾ
author img

By

Published : Aug 23, 2021, 7:51 PM IST

ಬೆಂಗಳೂರು: ರಾಜ್ಯದಲ್ಲಿಂದು 1,06,364 ಜನರಿಗೆ ಕೊರೊನಾ ತಪಾಸಣೆ ನಡೆಸಲಾಗಿದ್ದು, ಈ ಪೈಕಿ 1,151 ಜನರಿಗೆ ಮಾತ್ರ ಕೋವಿಡ್ ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 29,39,767 ಕ್ಕೆ ಏರಿದೆ.

ಇಂದು, 1442 ಜನರು ಕೊರೊನಾದಿಂದ ಗುಣಮುಖರಾಗಿದ್ದು, ಈವರೆಗೆ 28,82,331 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಪಾಸಿಟಿವಿಟಿ ದರ 1.08% ರಷ್ಟಿದೆ. 20,255 ಸಕ್ರಿಯ ಕೇಸ್​ಗಳಿದ್ದು, ದಿನದಿಂದ ದಿನಕ್ಕೆ ಸಾವಿನ ಪ್ರಮಾಣವೂ ಇಳಿಕೆಯಾಗುತ್ತಿದೆ. ಇಂದು 10 ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 37,155 ಕ್ಕೆ ಏರಿದೆ. ಸದ್ಯ ರಾಜ್ಯದಲ್ಲಿ ಸಾವಿನ ಪ್ರಮಾಣ 0.86 % ರಷ್ಟಿದೆ.

ವಿಮಾನ ನಿಲ್ದಾಣದಲ್ಲಿ 1,866 ಜನರನ್ನು ಕೋವಿಡ್ ತಪಾಸಣೆಗೆ ಒಳಪಡಿಸಲಾಗಿದೆ. ಇದರಲ್ಲಿ 434 ಪ್ರಯಾಣಿಕರು ಯುಕೆ ಮೂಲದವರೇ ಆಗಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ 270 ಮಂದಿಗೆ ಸೋಂಕು ದೃಢಪಟ್ಟಿದ್ದರೆ, 363 ಜನರು ಗುಣಮುಖರಾಗಿದ್ದಾರೆ. ಇಂದು ಬೆಂಗಳೂರಿನಲ್ಲಿ ಸಾವಿನ ಸಂಖ್ಯೆ ಶೂನ್ಯಕ್ಕೆ ಇಳಿದಿದೆ. ಸೋಂಕಿಗೆ ಯಾರೊಬ್ಬರೂ ಬಲಿಯಾಗಿಲ್ಲ. ನಗರದಲ್ಲಿ 7,669 ಆ್ಯಕ್ಟಿವ್ ಕೇಸ್​ಗಳಿವೆ.

ರೂಪಾಂತರಿ ವೈರಸ್ ಅಪಡೇಟ್ಸ್

1) ಡೆಲ್ಟಾ ( Delta/B.617.2) -1089
2)ಆಲ್ಪಾ(Alpha/B.1.1.7) - 155
3) ಕಪ್ಪಾ (Kappa/B.1.617) - 159
4) ಬೇಟಾ ವೈರಸ್ (BETA/B.1.351) -7
5) ಡೆಲ್ಟಾ ಪ್ಲಸ್ (Delta plus/B.1.617.2.1(AY.1) - 4 ಮಂದಿ
6) ಈಟಾ (ETA/B.1.525)- 1

ಇದನ್ನೂ ಓದಿ: 'ಅತ್ತ ದರಿ ಇತ್ತ ಪುಲಿ' ಎನ್ನುವಂತಿದೆ ಶಿಕ್ಷಕರ ಸ್ಥಿತಿ: ಶಾಲೆ ಶುರುವಾದ್ರೂ ಕೋವಿಡ್ ಕೆಲಸದಿಂದ ಸಿಕ್ಕಿಲ್ಲ ಮುಕ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.