ETV Bharat / state

ಕರ್ನಾಟಕ ಪತ್ರಕರ್ತೆಯರ ಸಂಘದ ಉದ್ಘಾಟನೆ: ಮಹಿಳೆಯರ ಧ್ವನಿಗೆ ಹೆಚ್ಚಿನ ಒತ್ತು ನೀಡಲು ನಿರ್ಧಾರ - journalist

ಶನಿವಾರ ಕರ್ನಾಟಕ ಪತ್ರಕರ್ತೆಯರ ಸಂಘ ಉದ್ಘಾಟನೆ. ಮಹಿಳೆಯರ ಧ್ವನಿಗೆ ಒತ್ತು ನೀಡಲು ನಿರ್ಧಾರ. ಹಿರಿಯ, ಕಿರಿಯ ಪತ್ರಕರ್ತೆಯರು, ಪ್ರಮುಖ ಪತ್ರಿಕೆಗಳ ಸಂಪಾದಕರು ಕಾರ್ಯಕ್ರಮದಲ್ಲಿ ಭಾಗಿ.

ಕರ್ನಾಟಕ ಪತ್ರಕರ್ತೆಯರ ಸಂಘದ ಉದ್ಘಾಟನೆ
author img

By

Published : Mar 24, 2019, 11:25 AM IST

ಬೆಂಗಳೂರು: ಕರ್ನಾಟಕ ಪತ್ರಕರ್ತೆಯರ ಸಂಘ ಶನಿವಾರ ಉದ್ಘಾಟನೆಗೊಂಡಿದೆ. ಹಲವಾರು ವರ್ಷಗಳ ಕನಸಾಗಿದ್ದ ಮಹಿಳಾ ಪತ್ರಕರ್ತರ ಧ್ವನಿಗೆ ವೇದಿಕೆಯಾಗುವ ಈ ಸಂಘಟನೆಯನ್ನು ಶನಿವಾರ ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಿರಿಯ ಪತ್ರಕರ್ತೆ ಕಲ್ಪನಾ ಶರ್ಮಾ ಉದ್ಘಾಟಿಸಿದರು.

ಕರ್ನಾಟಕ ಪತ್ರಕರ್ತೆಯರ ಸಂಘದ ಉದ್ಘಾಟನೆ

ಬಳಿಕ ಮಾತನಾಡಿದ ಅವರು, ದೇಶದ ಅರ್ಧದಷ್ಟು ಜನಸಂಖ್ಯೆ ಮಹಿಳೆಯರೇ ಇರುವಾಗ ಅವರ ಕುರಿತು ಮಾಧ್ಯಮಗಳು ಮಾತನಾಡದಿದ್ದರೆ ಹೇಗೆ?, ಕೇವಲ ಅತ್ಯಾಚಾರ, ಕೊಲೆಯಾದಾಗ ಮಾತ್ರ ಮಹಿಳೆಯರ ಸುದ್ದಿಗಳು ಪ್ರಕಟವಾಗುತ್ತವೆ. ಇದು ಬದಲಾಗಬೇಕು ಎಂದರು.

ಅಷ್ಟೇ ಅಲ್ಲದೇ, ಇಂಗ್ಲಿಷ್​ ಭಾಷೆಯ ಪತ್ರಕರ್ತರು ಹಾಗೂ ಭಾರತೀಯ ಭಾಷೆಗಳ ಪತ್ರಕರ್ತರಿಗೆ ಸಿಗುವ ಗೌರವ, ವೇತನದಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಮಾಧ್ಯಮದಲ್ಲೂ ಮಹಿಳಾ ಪತ್ರಕರ್ತರಿಗೆ ಪುರುಷರಷ್ಟು ಸ್ಥಾನಮಾನ ಸಿಗುತ್ತಿಲ್ಲ. ಇವೆಲ್ಲವನ್ನು ತಿದ್ದಲು ಮಹಿಳೆಯರು ಒಟ್ಟಾಗಿರಲು ಸಂಘಟನೆ ಅಗತ್ಯ ಎಂದು ಕಲ್ಪನಾ ಶರ್ಮಾ ಪ್ರತಿಪಾದಿಸಿದರು.

ಇನ್ನು ಇದೇ ವೇಳೆ ಹಿರಿಯ ಪತ್ರಕರ್ತೆ ವಿಜಯಮ್ಮ ಮಾತನಾಡಿ, ಎಲ್ಲೇ ಅನ್ಯಾಯವಾದರೂ ಅದರ ವಿರುದ್ಧ ಕರ್ನಾಟಕ ಪತ್ರಕರ್ತೆಯರ ಸಂಘದ ಧ್ವನಿ ಸಂಚಲನ ಮೂಡಿಸುವಂತಾಗಬೇಕು. ವೈಯಕ್ತಿಕವಾದ ತಾತ್ವಿಕ ನಿಲುವುಗಳನ್ನು ಸಂಘದ ಮೇಲೆ ಹೇರದೆ, ಎಲ್ಲಾ ವರ್ಗದ ಮಹಿಳೆಯರು ಒಗ್ಗಟ್ಟಾಗಿ ಕೆಲಸ ಮಾಡಬೇಕು. ವೃತ್ತಿ ಸಂಬಂಧವಾಗಿ ಬರುವ ತೊಡಕುಗಳನ್ನು ನಿವಾರಿಸಲು ಹಾಗೂ ಮಹಿಳಾ ಪರವಾದ ಸುದ್ದಿಗಳಿಗೆ ಪ್ರಾಮುಖ್ಯತೆ ನೀಡಲು ಈ ಸಂಘ ಕೆಲಸ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ವಾರ್ತಾ ಇಲಾಖೆ ನಿರ್ದೇಶಕರಾದ ಎನ್. ಭೃಂಗೇಶ್ ಮಾತನಾಡಿ, ಪತ್ರಿಕೋದ್ಯಮ ಪದವಿ ಮುಗಿಸಿದ 60 ಮಹಿಳಾ ವಿದ್ಯಾರ್ಥಿಗಳಿಗೆ 15 ಸಾವಿರ ವೇತನದ ಕೆಲಸವನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.

ಸಂಘದ ಉದ್ಘಾಟನಾ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಹಿರಿಯ, ಕಿರಿಯ ಪತ್ರಕರ್ತೆಯರು, ಪ್ರಮುಖ ಪತ್ರಿಕೆಗಳ ಸಂಪಾದಕರು ಭಾಗಿಯಾಗಿದ್ದರು.

Intro:ಕರ್ನಾಟಕ ಪತ್ರಕರ್ತೆಯರ ಸಂಘದ ಉದ್ಘಾಟನೆ- ಮಹಿಳೆಯರ ಧ್ವನಿಗೆ ಹೆಚ್ಚಿನ ಒತ್ತು ನೀಡಲು ನಿರ್ಧಾರ

ಕರ್ನಾಟಕ ಪತ್ರಕರ್ತೆಯರ ಸಂಘ ಇಂದು ಉದ್ಘಾಟನೆಗೊಂಡಿದೆ. ಹಲವಾರು ವರ್ಷಗಳ ಕನಸಾಗಿದ್ದ ಮಹಿಳಾ ಪತ್ರಕರ್ತರ ಧ್ವನಿಗೆ ವೇದಿಕೆಯಾಗುವ ಈ ಸಂಘಟನೆಯನ್ನು ಇಂದು ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಿರಿಯ ಪತ್ರಕರ್ತೆ ಕಲ್ಪನಾ ಶರ್ಮಾ ಉದ್ಘಾಟನೆಗೊಳಿಸದರು.
ಬಳಿಕ ಮಾತನಾಡಿದ ಅವರು, ದೇಶದಲ್ಲಿ ಅರ್ಧಭಾಗದಷ್ಟು ಜನಸಂಖ್ಯೆಯ ಮಹಿಳೆಯರು ಇರುವಾಗ ಮಹಿಳೆಯರ ಕುರಿತು ಮಾಧ್ಯಮಗಳು ಮಾತನಾಡದಿದ್ದರೆ ಹೇಗೆ, ಕೇವಲ ಅತ್ಯಾಚಾರ ಕೊಲೆಯಾದಾಗ ಮಾತ್ರ ಮಹಿಳೆಯರ ಸುದ್ದಿಗಳು ಪ್ರಕಟವಾಗ್ತವೆ.ಇದು ಬದಲಾಗಬೇಕು ಎಂದರು. ಅಲ್ಲದೆ ಇಂಗ್ಲೀಷ್ ಭಾಷೆಯ ಪತ್ರಕರ್ತರು ಹಾಗೂ ಭಾರತೀಯ ಭಾಷೆಗಳ ಪತ್ರಕರ್ತರಿಗೆ ಸಿಗುವ ಗೌರವ, ವೇತನದಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಮಾಧ್ಯಮದಲ್ಲೂ ಮಹಿಳಾ ಪತ್ರಕರ್ತರಿಗೆ ಪುರುಷರಷ್ಟು ಸ್ಥಾನಮಾನ ಸಿಗುತ್ತಿಲ್ಲ ಎಂದರು. ಇವೆಲ್ಲವನ್ನು ಹೋಗಲಾಡಿಸಲು ಮಹಿಳೆಯರು ಒಟ್ಟಾಗಿರಬೇಕು. ಇದಕ್ಕಾಗಿ ಸಂಘಟನೆ ಅಗತ್ಯ ಎಂದರು.
ಹಿರಿಯ ಪತ್ರಕರ್ತೆ ವಿಜಯಮ್ಮ ಅವರು ಮಾತನಾಡಿ, ಎಲ್ಲೇ ಅನ್ಯಾಯವಾದರೂ ಅದರ ವಿರುದ್ಧ ಕರ್ನಾಟಕ ಪತ್ರಕರ್ತೆಯರ ಸಂಘದ ಒಂದು ಧ್ವನಿ ಸಂಚಲನ ಮೂಡುವಂತಾಗಬೇಕು. ವೈಯಕ್ತಿಕವಾದ ತಾತ್ವಿಕ ನಿಲುವುಗಳನ್ನು ಸಂಘದ ಮೇಲೆ ಹೇರದೆ, ಎಲ್ಲಾ ವರ್ಗದ ಮಹಿಳೆಯರು ಒಗ್ಗಟ್ಟಾಗಿ ಕೆಲಸ ಮಾಡಬೇಕು. ವೃತ್ತಿ ಸಂಬಂಧವಾಗಿ ಇರುವ ತೊಡಕುಗಳನ್ನು ನಿವಾರಿಸಲು ಹಾಗೂ ಮಹಿಳಾ ಪರವಾದ ಸುದ್ದಿಗಳಿಗೆ ಪ್ರಾಮುಖ್ಯತೆ ನೀಡಲು ಈ ಸಂಘ ಕೆಲಸ ಮಾಡಬೇಕು ಎಂದರು.
ವಾರ್ತಾ ಇಲಾಖೆ ನಿರ್ದೇಶಕರಾದ ಎನ್ ಭೃಂಗೇಶ್ ಮಾತನಾಡಿ, ಪತ್ರಿಕೋದ್ಯಮ ಪದವಿ ಮುಗಿಸಿದ ಅರವತ್ತು ಜನ ವಿದ್ಯಾರ್ಥಿಗಳಿಗೆ 15 ಸಾವಿರ ವೇತನದ ಕೆಲಸವನ್ನು 120 ಜನರಿಗೆ ಏರಿಕೆ ಮಾಡಿ, ಅರವತ್ತು ಜನ ಮಹಿಳೆಯರೇ ಇರುವಂತೆ ನೋಡಿಕೊಳ್ಳಲಾಗುತ್ತೆ ಎಂದರು.

ಸಂಘದ ಉದ್ಘಾಟನಾ ಕಾರ್ಯಕ್ರಮಕ್ಕೆ ರಾಜ್ಯದ ವಿವಿದೆಡೆಯಿಂದ ಹಿರಿಯ ಕಿರಿಯ ಪತ್ರಕರ್ತೆಯರು ಆಗಮಿಸಿದ್ದರು. ಅಲ್ಲದೆ ಪ್ರಮುಖ ಪತ್ರಿಕೆಗಳ ಸಂಪಾದಕರೂ ಆಗಮಿಸಿದ್ದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತೆ ನಾಗಮಣಿ ಎಸ್ ರಾವ್, ವಾರ್ತಾ ಇಲಾಖೆಯ ನಿರ್ದೇಶಕರಾದ ಎನ್ ಭೃಂಗೇಶ್, ಪ್ರೊಫೆಸರ್ ಉಷಾರಾಣಿ ನಾರಾಯಣಿ ಭಾಗಿಯಾಗಿದ್ದರು.

Body:..

Conclusion:...
ETV Bharat Logo

Copyright © 2024 Ushodaya Enterprises Pvt. Ltd., All Rights Reserved.