ETV Bharat / state

ಕರ್ನಾಟಕಕ್ಕೆ 'ರಾಷ್ಟ್ರೀಯ ಶಕ್ತಿ ಸಂರಕ್ಷಣಾ ಪ್ರಶಸ್ತಿ' - ಕೇಂದ್ರ ಇಂಧನ ಸಚಿವಾಲಯ

ರಾಜ್ಯದಲ್ಲಿ ಅಳವಡಿಸಿರುವ ಶಕ್ತಿ ಸಾಮರ್ಥ್ಯದಾಯಕ ಯೋಜನೆಗಳ ಆಧಾರದ ಮೇಲೆ ಕೆಆರ್​ಇಡಿಎಲ್​ ಅನ್ನು ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

http://10.10.50.85:6060/reg-lowres/21-December-2023/award_2112newsroom_1703154983_569.jpg

author img

By ETV Bharat Karnataka Team

Published : Dec 21, 2023, 5:47 PM IST

ಬೆಂಗಳೂರು: ರಾಷ್ಟ್ರೀಯ ಶಕ್ತಿ ಸಂರಕ್ಷಣಾ ಪ್ರಶಸ್ತಿ-2023 ರಾಜ್ಯ ನಿರ್ದೇಶಿಕ ಏಜೆನ್ಸಿ ವಲಯದಲ್ಲಿ ಕರ್ನಾಟಕಕ್ಕೆ ಪ್ರಥಮ ಪ್ರಶಸ್ತಿ ಲಭಿಸಿದೆ. ಕೇಂದ್ರ ಇಂಧನ ಸಚಿವಾಲಯ ಈ ಆಯ್ಕೆ ಮಾಡಿದೆ.

ರಾಷ್ಟ್ರೀಯ ಶಕ್ತಿ ಸಂರಕ್ಷಣಾ ದಿನದ ಭಾಗವಾಗಿ ಶಕ್ತಿ ಸಾಮರ್ಥ್ಯ ಬ್ಯೂರೋ ರಾಷ್ಟ್ರೀಯ ಶಕ್ತಿ ಸಂರಕ್ಷಣಾ ಪ್ರಶಸ್ತಿ -2023 ನೀಡುತ್ತದೆ. ಕರ್ನಾಟಕ ನವೀಕರಣ ಶಕ್ತಿ ಅಭಿವೃದ್ಧಿ ಲಿಮಿಟೆಡ್‌ನ​ (ಕೆಆರ್​ಇಡಿಎಲ್​​) ಎಂಡಿ ಕೆ.ಪಿ.ರುದ್ರಪ್ಪಯ್ಯ ಈ ಪ್ರಶಸ್ತಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮ ಅವರಿಂದ ಸ್ವೀಕರಿಸಿದರು. ನವದೆಹಲಿಯ ವಿಜ್ಞಾನ್​ ಭವನದನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಕ್ತಿ ಸಂರಕ್ಷಣೆಗೆ ರಾಜ್ಯ ನಡೆಸಿರುವ ಕಾರ್ಯಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಶಸ್ತಿ ಪಡೆದ ಕರ್ನಾಟಕ ನವೀಕರಣ ಶಕ್ತಿ ಅಭಿವೃದ್ಧಿ ಲಿಮಿಟೆಡ್​​​ನ ಅಧಿಕಾರಿಗಳಿಗೆ, ಅವರ ಸಾಧನೆ ಮತ್ತು ಜಾಗತಿಕ ತಾಪಮಾನ ಹಾಗೂ ಹವಾಮಾನ ಬದಲಾವಣೆಯಿಂದ ಎದುರಾಗುತ್ತಿರುವ ನಿಟ್ಟಿನಲ್ಲಿ ಶಕ್ತಿ ಸಂರಕ್ಷಣೆ ಅಗತ್ಯವನ್ನು ಒತ್ತಿ ಹೇಳಿರುವ ಕ್ರಮವನ್ನು ಇಂಧನ ಸಚಿವ ಕೆ.ಜೆ.ಜಾರ್ಜ್​ ಶ್ಲಾಘಿಸಿದ್ದಾರೆ. ಇಲಾಖೆಯು ಶುದ್ಧ ಮತ್ತು ಹಸಿರುವ ಶಕ್ತಿ ಉಪಕ್ರಮವನ್ನು ತನ್ನ ಪ್ರಾಥಮಿಕ ಗುರಿಯಾಗಿಸಿಕೊಂಡು ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುತ್ತಿದೆ. ಈ ಮೂಲಕ ಶಕ್ತಿ ಸಂರಕ್ಷಣೆ ಮತ್ತು ಶಕ್ತಿ ಸಾಮರ್ಥ್ಯವನ್ನು ವೃದ್ಧಿಸಿದೆ ಎಂದಿದ್ದಾರೆ.

ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಶಕ್ತಿ) ಗೌರವ್​ ಗುಪ್ತಾ ಮಾತನಾಡಿ, ಪ್ರಶಸ್ತಿ ಲಭಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು. ಭಾರತದ ಶಕ್ತಿ ಸಾಮರ್ಥ್ಯದ ನಿಯಮ ಅಳವಡಿಕೆಯಲ್ಲಿ ರಾಜ್ಯ ಪ್ರಮುಖ ಪಾತ್ರ ಹೊಂದಿದೆ. ಸುಸ್ಥಿರ ಅಭಿವೃದ್ಧಿಗಾಗಿ ನಿರ್ದಿಷ್ಟ ಗುರಿ ತಲುಪಲು ರಾಜ್ಯವು ಅವಿರಹಿತವಾಗಿ ಕಾರ್ಯ ನಿರ್ವಹಿಸುತ್ತಿದೆ. ಈ ನಿಟ್ಟಿನಲ್ಲಿ ಶಕ್ತಿ ಸಾಮರ್ಥ್ಯದ ಸಾಧನೆಗೆ ಹಲವು ಕ್ರಮಗಳನ್ನು ನಡೆಸಿದೆ ಎಂದು ಹೇಳಿದ್ದಾರೆ.

ರಾಜ್ಯಗಳ ವಲಯದಲ್ಲಿ ಉತ್ತಮ ಕಾರ್ಯ ನಿರ್ವಹಣೆಯಲ್ಲಿ ಕರ್ನಾಟಕ ಸತತ ಮೂರು ವರ್ಷಗಳಿಂದ ಉತ್ತಮ ಅಂಕಗಳನ್ನು ನಡೆಸುವ ಮೂಲಕ ಉತ್ತಮ ಪ್ರದರ್ಶನ ತೋರುತ್ತಿದೆ. ಶಕ್ತಿ ಸಾಮರ್ಥ್ಯದ ದಕ್ಷತೆ ಮತ್ತು ಶಕ್ತಿ ಸಂರಕ್ಷಣೆ ನಿರ್ಣಾಯಕವಾಗಿದ್ದು, ಈ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬೇಕಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. (ಐಎಎನ್​ಎಸ್​​)

ಇದನ್ನೂ ಓದಿ: ಕೆಂಪೇಗೌಡ ಟರ್ಮಿನಲ್​ 2ಗೆ​​​​ 'ವಿಶ್ವದ ಅತಿ ಸುಂದರ ವಿಮಾನ ನಿಲ್ದಾಣ' ಪ್ರಶಸ್ತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.