ETV Bharat / state

ರಾಜ್ಯ ವಿವಿಗಳು ಮತ್ತು ಇತರೆ ಕೆಲ ಕಾನೂನು ತಿದ್ದುಪಡಿ ವಿಧೇಯಕಕ್ಕೆ ಪರಿಷತ್​ನಲ್ಲಿ ಅನುಮೋದನೆ - Higher Education Minister Dr. Ashwath Narayan

ಉಪಕುಲಪತಿ ನೇಮಕದಲ್ಲಿ ಅಕ್ರಮ ನಡೆಯುತ್ತಿದೆ. ಐದಾರು ಕೋಟಿ ಲಂಚ ಕೊಟ್ಟು ಸ್ಥಾನ ಪಡೆಯುತ್ತಾರೆ ಎಂಬ ಮಾಹಿತಿ ಇದೆ. ಇಷ್ಟು ಮೊತ್ತ ನೀಡಿದವರು ಅಕ್ರಮ ನಡೆಸದೇ ಇರಲು ಸಾಧ್ಯವೇ? ಇದನ್ನು ಮೊದಲು ತೆಗೆದುಹಾಕಿ. ಜತೆಗೆ ವಿಶ್ವವಿದ್ಯಾಲಯ ಪ್ರಗತಿಯಲ್ಲಿ ಶಾಸಕರು ಪಾಲ್ಗೊಳ್ಳುವ ಕಾರ್ಯ ಆಗಬೇಕು..

Karnataka State Universities Amendment bill pass
ರಾಜ್ಯ ವಿವಿಗಳು ಮತ್ತು ಇತರೆ ಕೆಲ ಕಾನೂನು ತಿದ್ದುಪಡಿ ವಿಧೇಯಕಕ್ಕೆ ಪರಿಷತ್​ನಲ್ಲಿ ಅನುಮೋದನೆ
author img

By

Published : Dec 10, 2020, 7:08 PM IST

ಬೆಂಗಳೂರು : ವಿಧಾನಸಭೆಯಿಂದ ಅನುಮೋದನೆಗೊಂಡ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಮತ್ತು ಇತರೆ ಕೆಲ ಕಾನೂನು ತಿದ್ದುಪಡಿ ವಿಧೇಯಕವನ್ನು ಡಿಸಿಎಂ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್ ನಾರಾಯಣ್ ವಿಧಾನ ಪರಿಷತ್​ನಲ್ಲಿ ಮಂಡಿಸಿದರು.

ಬೆಂಗಳೂರಿನಲ್ಲಿ ನೃಪತುಂಗ ವಿಶ್ವವಿದ್ಯಾಲಯ ಸ್ಥಾಪಿಸಲಾಗಿದೆ. ಕೇಂದ್ರ ಸರ್ಕಾರದಿಂದ 55 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ದೇಶದ ಮೂರು ಪ್ರಮುಖ ಸರ್ಕಾರಿ ವಿಜ್ಞಾನ ಕಾಲೇಜುಗಳಲ್ಲಿ ಇದು ಒಂದಾಗಿದೆ. 2,600 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇದನ್ನು ಉನ್ನತೀಕರಿಸುವ ಸಲುವಾಗಿ ಹಾಗೂ ದೂರಶಿಕ್ಷಣ ಕ್ಷೇತ್ರ ವ್ಯಾಪ್ತಿ ವಿಸ್ತರಿಸಲು ಅವಕಾಶ ನೀಡಿ ತಿದ್ದುಪಡಿ ತರಲಾಗಿದೆ.

ಹಿಂದೆ ಕುಲಪತಿ ವಿಚಾರದಲ್ಲಿ ಅವಕಾಶ ಸೀಮಿತವಾಗಿತ್ತು. ಹೊಸದಾಗಿ ಸ್ಥಾಪಿತವಾದ ವಿಶ್ವವಿದ್ಯಾಲಯಗಳಿಗೆ ಕುಲಪತಿಗಳನ್ನ ನೇಮಿಸಲು ಅನುಕೂಲ ಕಲ್ಪಿಸಲು ಕಾಯ್ದೆಯ ಸೆಕ್ಷನ್ 14ರಲ್ಲಿ ಬದಲಾವಣೆ ತರಲಾಗಿದೆ.

ಇವೂ ಸೇರಿದಂತೆ ಹಲವು ವಿಚಾರಗಳಲ್ಲಿ ನಿರ್ಧಾರ ಕೈಗೊಳ್ಳಲು ಅನುಕೂಲವಾಗುವ ಬದಲಾವಣೆ ತಂದು ತಿದ್ದುಪಡಿ ಮಾಡಿ, ಕಾಯ್ದೆ ತರಲಾಗಿದೆ. ಪರಿಷತ್​ನಲ್ಲಿ ಇದಕ್ಕೆ ಅನುಮೋದನೆ ನೀಡಬೇಕೆಂದು ಮನವಿ ಮಾಡಿದರು.

ಈ ವೇಳೆ ಮಾತನಾಡಿದ ಪ್ರತಿಪಕ್ಷ ನಾಯಕ ಎಸ್ ಆರ್ ಪಾಟೀಲ್, ಕುಲಪತಿ ನೇಮಕಕ್ಕೆ ಐಎಎಸ್, ಕೆಎಎಸ್ ಅಧಿಕಾರಿಗಳ ಬಳಕೆ ಮಾಡಬಾರದು. ಪ್ರೊಫೆಸರ್​ಗಳಿಗೆ ಅವಕಾಶ ಸಿಕ್ಕರೆ ಶಿಕ್ಷಣದ ಪ್ರಗತಿ ಸಾಧ್ಯ. ಹಣ ಹಾಗೂ ಜಾತಿ ಆಧಾರದ ಮೇಲೆ ಉಪಕುಲಪತಿಗಳ ನೇಮಕವಾದರೆ ಮಕ್ಕಳ ಭವಿಷ್ಯ ಬೆಳಗುವುದು ಹೇಗೆ? ವಿಶ್ವವಿದ್ಯಾಲಯಗಳನ್ನು ಹೆಚ್ಚಿಸುತ್ತಾ ಬರಲಾಗುತ್ತಿದೆ. ವಿಶ್ವದ ಅತ್ಯುತ್ತಮ 200 ವಿಶ್ವವಿದ್ಯಾಲಯಗಳಲ್ಲಿ ಭಾರತದ ಒಂದು ವಿವಿಯೂ ಇಲ್ಲ. ಆ 200 ವಿವಿ ಒಳಗೆ ರಾಜ್ಯದ ವಿವಿ ಬರುವಂತೆ ಮಾಡಿ ಎಂದು ಸಚಿವರಿಗೆ ಸಲಹೆ ನೀಡಿದರು.

ಜೆಡಿಎಸ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ಬೆಂಗಳೂರು ವಿಶ್ವವಿದ್ಯಾಲಯ ಅಂತಾ ಹೆಸರಿತ್ತು. ಇದನ್ನು ಬದಲಿಸಿ ಬೆಂಗಳೂರು ನಗರ ವಿಶ್ವವಿದ್ಯಾಲಯ ಎಂದು ಬದಲಿಸಿ ಹೆಸರಿಡಲಾಗಿದೆ. ಇದೆಲ್ಲಕ್ಕೂ ಅನುಕೂಲ ಕಲ್ಪಿಸಲು ನಾವು ಈ ತಿದ್ದುಪಡಿ ತಂದಿದ್ದೇವೆ. ಮಹಾರಾಣಿ ಕ್ಲಸ್ಟರ್ ವಿವಿ ಮಾಡಿದ್ದೇವೆ. ಮಂಡ್ಯದಲ್ಲಿ ಹೋಯ್ಸಳ ಕ್ಲಸ್ಟರ್ ಮಾಡಲಾಗಿದೆ. ಅಲ್ಲಿ ಕಾಲೇಜೂ ಇದೆ. ಆದರೆ, ಇವೆರಡರ ನಡುವೆ ಸಾಕಷ್ಟು ತಿಕ್ಕಾಟ ಆರಂಭವಾಗಿದೆ.

ಆದರೆ, ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದ ನಿರೀಕ್ಷೆ ಈಡೇರಿಲ್ಲ. ಮೂರು ವರ್ಷದಲ್ಲಿ ಇದು ಸಂಪೂರ್ಣ ನಿರಾಶೆ ಉಂಟಾಗಿದೆ. ಈಗಿರುವ ಬೋಧಕ, ಬೋಧಕೇತರರಿಗೆ ಏನು ಅವಕಾಶ ನೀಡುತ್ತೀರಿ. ಸಿಬ್ಬಂದಿಗೆ ಉದ್ಯೋಗ ಭದ್ರತೆ ಇಲ್ಲವಾಗಿದೆ. ಶಿಕ್ಷಣ ಸಂಸ್ಥೆಯಲ್ಲಿ ಹೊಡೆದಾಟ ಆರಂಭವಾಗಿದೆ. ಇದರ ಬಗ್ಗೆ ಗಮನ ಹರಿಸಬೇಕು ಎಂದರು.

ಜೆಡಿಎಸ್ ಸದಸ್ಯ ಭೋಜೇಗೌಡ ಮಾತನಾಡಿ, ವಿಶ್ವವಿದ್ಯಾಲಯಗಳು ನಾಯಿ ಕೊಡೆಯಂತೆ ತಲೆ ಎತ್ತುತ್ತಿವೆ. ಸಿಬ್ಬಂದಿ ಕೊರತೆ ಇದೆ. ವಿವಿಗಳು ವ್ಯಾಪಾರೀಕರಣದ ಕೇಂದ್ರವಾಗಿವೆ. ರಾಜಕೀಯ ಪ್ರಭಾವಿ ನಾಯಕರ ಆಪ್ತರೇ ಇಲ್ಲಿನ ಆಯಕಟ್ಟಿನ ಸ್ಥಾನದಲ್ಲಿದ್ದಾರೆ. ಐಎಎಸ್ ದರ್ಜೆಯ ಅಧಿಕಾರಿಗಳನ್ನು ನೇಮಿಸಬಾರದು. ಹಣ ಗಳಿಕೆ ಕೇಂದ್ರ ಆಗಬಾರದು ಹಾಗೂ ಬಿಳಿ ಆನೆಯಾಗಬಾರದು ಎಂದರು.

ಬಿಜೆಪಿ ಸದಸ್ಯ ಎಸ್.ವಿ.ಸಂಕನೂರು ಮಾತನಾಡಿ, ನಾನು ಸ್ವಾಗತಿಸುತ್ತೇನೆ. ಇದುವರೆಗೂ ಹಲವು ವಿವಿಗಳಲ್ಲಿ ದೂರಶಿಕ್ಷಣ ನಡೆಸುತ್ತಿದ್ದೆವು. ಆದರೆ, ಮುಕ್ತ ವಿವಿ ಹೊರತುಪಡಿಸಿ ಉಳಿದ ವಿವಿಗೆ ಅವಕಾಶ ಇಲ್ಲ. ವಿಶ್ವವಿದ್ಯಾಲಯಗಳು ಸಾಕಷ್ಟು ಹಣಕಾಸು ಸಮಸ್ಯೆ ಎದುರಿಸುತ್ತಿವೆ. ದೂರಶಿಕ್ಷಣ ವ್ಯವಸ್ಥೆಯಿಂದ ಒಂದಿಷ್ಟು ಆದಾಯ ಬರುತ್ತಿತ್ತು. ಅದು ನಿಂತರೆ ಶಿಕ್ಷಣ ಸಂಸ್ಥೆ ನಡೆಸುವುದು ಕಷ್ಟ. ರಿಜಿಸ್ಟ್ರಾರ್‌ಗಳನ್ನು ಹೊರಗಿನಿಂದ ತಂದು ಕೂರಿಸಿದ್ರೆ, ಮಾಹಿತಿ ಕೊರತೆ ಎದುರಾಗಲಿದೆ. ಹಿರಿಯ ಪ್ರಾಧ್ಯಾಪಕರಿಗೆ ಅವಕಾಶ ಇತ್ತು. ಈಗೇನು ಸಮಸ್ಯೆಯಾಗಿದೆ ಎಂದರು.

ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ಉಪಕುಲಪತಿ ನೇಮಕದಲ್ಲಿ ಅಕ್ರಮ ನಡೆಯುತ್ತಿದೆ. ಐದಾರು ಕೋಟಿ ಲಂಚ ಕೊಟ್ಟು ಸ್ಥಾನ ಪಡೆಯುತ್ತಾರೆ ಎಂಬ ಮಾಹಿತಿ ಇದೆ. ಇಷ್ಟು ಮೊತ್ತ ನೀಡಿದವರು ಅಕ್ರಮ ನಡೆಸದೇ ಇರಲು ಸಾಧ್ಯವೇ? ಇದನ್ನು ಮೊದಲು ತೆಗೆದುಹಾಕಿ. ಜತೆಗೆ ವಿಶ್ವವಿದ್ಯಾಲಯ ಪ್ರಗತಿಯಲ್ಲಿ ಶಾಸಕರು ಪಾಲ್ಗೊಳ್ಳುವ ಕಾರ್ಯ ಆಗಬೇಕು.

ಯಾವ ರೀತಿ ಬಳಸಿಕೊಳ್ಳಬಹುದು ಎನ್ನುವುದನ್ನು ಸಚಿವರು ನಿರ್ಧರಿಸಿ. ವಿವಿ ಅಕ್ರಮ ತಡೆಯುವ ಕಾರ್ಯ ಮಾಡಿ ಎಂದು ಸಲಹೆ ನೀಡಿದರು. ನಂತರ ಜೆಡಿಎಸ್ ಸದಸ್ಯರಾದ ರಮೇಶ್ ಗೌಡ, ಅಪ್ಪಾಜಿಗೌಡ, ಬಿಜೆಪಿ ಸದಸ್ಯರಾದ ರವಿಕುಮಾರ್, ಪುಟ್ಟಣ್ಣ, ಸಾಯಬಣ್ಣ ತಳವಾರ್, ತೇಜಸ್ವಿನಿ ಗೌಡ ಮಾತನಾಡಿದರು.

ಸದಸ್ಯರ ಚರ್ಚೆಯ ನಂತರ ಮಾತನಾಡಿದ ಡಾ.ಅಶ್ವಥ್ ನಾರಾಯಣ್, ಪರ-ವಿರುದ್ಧವಾಗಿ ಸಾಕಷ್ಟು ಸಲಹೆ ಕೇಳಿ ಬಂದಿದೆ. ರಾಜ್ಯದಲ್ಲಿ 5.5 ಸಾವಿರ ಕಾಲೇಜಿವೆ. ದೇಶದಲ್ಲಿ 80 ಸಾವಿರ ಕಾಲೇಜುಗಳಿವೆ. ಮಹಾರಾಣಿ ಕ್ಲಸ್ಟರ್ ದೇಶದಲ್ಲಿನ ಮೂರರಲ್ಲಿ ಒಂದು ಕಾಲೇಜು. ಮಂಡ್ಯದ ಕಾಲೇಜು ಸಹ ಅತ್ಯುನ್ನತ ಕಾಲೇಜಾಗಿದೆ.

ಬೇರೆ ವಿಶ್ವವಿದ್ಯಾಲಯಗಳು ಸಿ ದರ್ಜೆಯದ್ದಾಗಿವೆ. ಆದರೆ, ನಮ್ಮ ವಿವಿಗಳು ಎ+ ದರ್ಜೆಯದ್ದಾಗಿವೆ. ಇತರರಿಗೆ ನಾವು ಮಾದರಿ ಆಗಿದ್ದೇವೆ. ಉಪಕುಲಪತಿ ನೇಮಕದಲ್ಲಿ‌ ಹಣ, ಜಾತಿಗೆ ಆಸ್ಪದ ನೀಡದೇ ಉತ್ತಮ ಕುಲಪತಿ ನೇಮಿಸುವ ಕಾರ್ಯ ಆಗುತ್ತಿದೆ.

ಎಲ್ಲಿಯೂ ದುರ್ಬಳಕೆ ಆಗದ ರೀತಿ ನೇಮಕ ಆಗುತ್ತಿದೆ. ಸರ್ಕಾರದ ಮಟ್ಟದಲ್ಲಿ ಯಾವುದೇ ಅಕ್ರಮಕ್ಕೆ ಅವಕಾಶ ಇಲ್ಲ. ಗುಣಮಟ್ಟ, ಅರ್ಹ ಕುಲಪತಿ ನೇಮಿಸಿ ಶಿಕ್ಷಣ ಕ್ಷೇತ್ರ ಸುಧಾರಣೆ ಮಾಡುತ್ತೇವೆ ಎಂದು ಭರವಸೆ ಇತ್ತರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.