ಬೆಂಗಳೂರು: ರಾಜ್ಯದಲ್ಲಿಂದು 2016 ಮಂದಿಯಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದು, 17 ಮಂದಿ ಮೃತಪಟ್ಟಿದ್ದಾರೆ. ಇಂದು 3443 ಮಂದಿ ಬಿಡುಗಡೆಯಾಗಿದ್ದು, 28,026 ಸಕ್ರಿಯ ಪ್ರಕರಣಗಳಿವೆ.
ಈವರೆಗೆ ಒಟ್ಟು 8,18,392 ಮಂದಿ ಬಿಡುಗಡೆಯಾಗಿದ್ದು, ಕೋವಿಡ್ ಸೋಂಕಿತರ ಒಟ್ಟು ಸಂಖ್ಯೆ 8,57,928ಕ್ಕೆ ಏರಿಕೆಯಾಗಿದೆ. ಇಲ್ಲಿಯವರೆಗೆ ಮೃತಪಟ್ಟವರ ಸಂಖ್ಯೆ 11,491ಕ್ಕೆ ಏರಿಕೆಯಾಗಿದೆ. ಐಸಿಯುನಲ್ಲಿ 781 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಕೋವಿಡ್ ಪಾಸಿಟಿವ್ ಪ್ರಮಾಣ 1.71% ಇದ್ದು, 0.84% ಮರಣ ಪ್ರಮಾಣ ಇದೆ.
ಬೆಂಗಳೂರಿನಲ್ಲಿ ಒಟ್ಟು 1030 ಮಂದಿಯಲ್ಲಿ ಕೋವಿಡ್ ಪಾಸಿಟಿವ್ ಬಂದಿದ್ದು, 1200 ಮಂದಿ ಗುಣಮುಖರಾಗಿದ್ದಾರೆ. 3 ಮಂದಿ ಮೃತಪಟ್ಟಿದ್ದು, ಸೋಂಕಿತರ ಸಂಖ್ಯೆ 3,55,245ಕ್ಕೆ ಏರಿಕೆಯಾಗಿದೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 17,769 ಇದೆ.