ETV Bharat / state

ರಾಜ್ಯದಲ್ಲಿ ಇಂದು 2584 ಜನರಿಗೆ ಕೊರೊನಾ ದೃಢ, ಸೋಂಕಿಗೆ 23 ಮಂದಿ ಬಲಿ... - bengaluru today corona news

ರಾಜ್ಯದಲ್ಲಿ ಇಂದಿನ ಕೊರೊನಾ ವರದಿಯ ಸಂಪೂರ್ಣ ಅಂಕಿ-ಅಂಶ ಈ ಕೆಳಗಿನಂತಿದೆ.

karnataka-state-today-corona-news
ರಾಜ್ಯದಲ್ಲಿ ಇಂದು 2584 ಜನರಿಗೆ ಕೊರೊನಾ ದೃಢ, ಸೋಂಕಿಗೆ 23 ಮಂದಿ ಬಲಿ...
author img

By

Published : Nov 11, 2020, 9:32 PM IST

ಬೆಂಗಳೂರು: ರಾಜ್ಯದಲ್ಲಿ ಇಂದು 2584 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 8,53,796ಕ್ಕೆ ಏರಿಕೆ ಆಗಿದೆ.

ಇನ್ನು ಸೋಂಕಿಗೆ 23 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 11,453ಕ್ಕೆ ಏರಿಕೆ ಆಗಿದೆ. 19 ಸೋಂಕಿತರು ಅನ್ಯ ಕಾರಣಕ್ಕೆ ಮೃತರಾಗಿದ್ದಾರೆ. ಇತ್ತ 2881 ಮಂದಿ ಡಿಸ್ಜಾರ್ಜ್ ಆಗಿದ್ದು, 8,11,581 ಸೋಂಕಿತರು ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಸದ್ಯ ಸಕ್ರಿಯ ಪ್ರಕರಣಗಳು 30,743 ಇದ್ದು, 824 ಸೋಂಕಿತರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ 7 ದಿನಗಳಲ್ಲಿ 42,565 ಜನರು ಹೋಂ ಕ್ವಾರೆಂಟೈನ್ ಇದ್ದಾರೆ. ಪ್ರಾಥಮಿಕ ಸಂಪರ್ಕದಲ್ಲಿ 2,15,249, ದ್ವಿತೀಯ ಸಂಪರ್ಕದಲ್ಲಿ 2,28,419 ಜನರು ಸೋಂಕಿತರ ಸಂಪರ್ಕದಲ್ಲಿ ಇದ್ದಾರೆ. ಈವರೆಗೆ ರಾಜ್ಯದಲ್ಲಿ 90,43,217 ಜನರಿಗೆ ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದಾರೆ.

ಬೆಂಗಳೂರು ನಗರದ ಕೊರೊನಾ ಅಂಕಿ-ಅಂಶ:

ನಗರದಲ್ಲಿಂದು 1665 ಮಂದಿಯಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ ಒಟ್ಟು 3,53,146 ಕ್ಕೆ ಏರಿಕೆಯಾಗಿದೆ. ಇಂದು 1091 ಮಂದಿ ಗುಣಮುಖರಾಗಿದ್ದು, ಈವರೆಗೆ ಒಟ್ಟು 3,31,296 ಮಂದಿ ಬಿಡುಗಡೆ ಹೊಂದಿದ್ದಾರೆ. ನಗರದ ಸಕ್ರಿಯ ಪ್ರಕರಣಗಳ ಸಂಖ್ಯೆ 17,872 ಕ್ಕೆ ಇಳಿಕೆಯಾಗಿದೆ. ಇಂದು 8 ಮಂದಿ ಮೃತಪಟ್ಟಿದ್ದು, ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 3977 ಕ್ಕೆ ಏರಿಕೆಯಾಗಿದೆ. ತೀವ್ರ ನಿಗಾ ಘಟಕದಲ್ಲಿ 424 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.