ಬೆಂಗಳೂರು: ರಾಜ್ಯದಲ್ಲಿ 810 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 9,21,938ಕ್ಕೆ ಏರಿಕೆ ಆಗಿದೆ.
ಇಂದು 8 ಮಂದಿ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ 12,107 ಕ್ಕೆ ಏರಿಕೆ ಆಗಿದೆ. 19 ಸೋಂಕಿತರು ಅನ್ಯ ಕಾರಣಕ್ಕೆ ಮೃತರಾಗಿದ್ದಾರೆ. 743 ಸೋಂಕಿತರು ಗುಣಮುಖರಾಗಿದ್ದು, ಈವರೆಗೆ 8,98,919 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ತೀವ್ರ ನಿಗಾ ಘಟಕದಲ್ಲಿ 186 ಜನರು ಚಿಕಿತ್ಸೆ ಪಡೆಯುತ್ತಿದ್ದು, ಸದ್ಯ ರಾಜ್ಯದಲ್ಲಿ 10,893 ಸಕ್ರಿಯ ಪ್ರಕರಣಗಳು ಬಾಕಿ ಇವೆ.
ಓದಿ: ನನ್ನ ಆರೋಗ್ಯ ಸ್ಥಿರವಾಗಿದೆ, ಶುಭ ಹಾರೈಸಿದವರಿಗೆ ಧನ್ಯವಾದ: ಸದಾನಂದ ಗೌಡ ಟ್ವೀಟ್
ಕಳೆದ 7 ದಿನಗಳಲ್ಲಿ 18,213 ಮಂದಿ ಹೋಂ ಕ್ವಾರಂಟೈನ್ ಇದ್ದು, ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿ 64,259 ಮಂದಿ ಇದ್ದರೆ, ದ್ವಿತೀಯ ಸಂಪರ್ಕದಲ್ಲಿ 73,306 ಜನರು ಇದ್ದಾರೆ. ವಿಮಾನ ನಿಲ್ದಾಣದಿಂದ 184 ಪ್ರಯಾಣಿಕರು ಬಂದಿದ್ದು ಕೋವಿಡ್ ತಪಾಸಣೆಗೆ ಒಳಪಟ್ಟಿದ್ದಾರೆ.
ಯುಕೆಯಿಂದ ಇಂದು ಯಾವುದೇ ಪ್ರಯಾಣಿಕರು ಬಂದಿರುವುದಿಲ್ಲ. ಈವರೆಗೆ 2,173 ಪರೀಕ್ಷೆ ನಡೆಸಿದ್ದು, 34 ಪಾಸಿಟಿವ್ ಕೇಸ್ ದೃಢವಾಗಿದೆ. 2075 ಮಂದಿಗೆ ನೆಗಟಿವ್ ಬಂದಿದ್ದು, 64 ವರದಿ ಬರಬೇಕಿದೆ.
ಬೆಂಗಳೂರಿನಲ್ಲಿಂದು 464 ಜನರಿಗೆ ಹೊಸ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 3,89,657 ಕ್ಕೆ ಏರಿಕೆ ಆಗಿದೆ. 302 ಡಿಸ್ಚಾರ್ಜ್ ಆಗಿದ್ದು, 3,78,208 ಜನರು ಗುಣಮುಖರಾಗಿದ್ದಾರೆ. ನಾಲ್ವರು ಸೋಂಕಿತರು ಮೃತಪಟ್ಟಿದ್ದು, 4,326 ಕ್ಕೆ ಸಾವಿನ ಸಂಖ್ಯೆ ಏರಿಕೆ ಆಗಿದೆ. ಸದ್ಯ 7,122 ಸಕ್ರಿಯ ಪ್ರಕರಣಗಳು ಇದೆ.