ETV Bharat / state

ವಿಧಾನಸಭೆಯಲ್ಲಿ ಮಾಂಸಹಾರದ ಕುರಿತು ಸ್ವಾರಸ್ಯಕರ ಚರ್ಚೆ..

ವಿಧಾನಸಭೆಯಲ್ಲಿ ಚುನಾವಣೆ ಸುಧಾರಣೆ ಮೇಲಿನ ಚರ್ಚೆ ವೇಳೆ ಮಾಂಸ ತಿನ್ನುವ ವಿಚಾರ ಚರ್ಚೆಗೆ ಗ್ರಾಸವಾಯಿತು.‌

ವಿಧಾನಸಭೆ
ವಿಧಾನಸಭೆ
author img

By

Published : Mar 30, 2022, 8:05 PM IST

ಬೆಂಗಳೂರು: ಸದನದಲ್ಲಿ ಮಾಂಸ ತಿನ್ನುವ ವಿಚಾರ ಚರ್ಚೆಗೆ ಗ್ರಾಸವಾಯಿುತು.‌ ಮಾಂಸಹಾರ ತಿನ್ನುವ ಬಗ್ಗೆ ಸ್ವಾರಸ್ಯಕರ ಚರ್ಚೆ ನಡೆಯಿತು. ವಿಧಾನಸಭೆಯಲ್ಲಿ ಚುನಾವಣೆ ಸುಧಾರಣೆ ಮೇಲಿನ ಚರ್ಚೆ ವೇಳೆ ಮಾತನಾಡುತ್ತಾ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಸಚಿವ ಕಾರಜೋಳ ಅವರು ಚುನಾವಣೆಯಲ್ಲಿ ಹೆಂಡ ಕೊಟ್ಟಿಲ್ಲ ಅಂತ ಹೇಳುತ್ತಾರೆ ಎಂದು ಪ್ರಸ್ತಾಪಿಸಿದರು. ಆಗ ಗೋವಿಂದ ಕಾರಜೋಳ ಎದ್ದು ನಿಂತು ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಒಬ್ಬ ಎರಡು ಕೋಳಿ ನೀಡಿದ್ದ. ಮತ್ತೊಬ್ಬ ಕುರಿ ನೀಡಿ ಜೊತೆಗೆ ಸ್ವೀಟ್‍ ಬಾಕ್ಸ್ ನೀಡಿದ್ದ. ಏಕೆಂದರೆ ರಮೇಶ್‍ ಕುಮಾರ್ ಮತ್ತು ಕಾಗೇರಿ ಅಂತವರು ಇರುತ್ತಾರೆ ಎಂದು ಅವರಿಗೆ ಸ್ವೀಟ್‍ ಕೊಟ್ಟಿದ್ದ ಎಂದರು.

ವಿಧಾನಸಭೆಯಲ್ಲಿ ಸ್ವಾರಸ್ಯಕರ ಚರ್ಚೆಗೆ ಗ್ರಾಸವಾದ ಮಾಂಸ ತಿನ್ನುವ ವಿಚಾರ

ಆಗ ಸಿದ್ದರಾಮಯ್ಯ ಅಂದರೆ ರಮೇಶ್‍ ಕುಮಾರ್ ಮಾಂಸ ತಿನ್ನುತ್ತಾನೆ ಎಂದು ಎಲ್ಲರ ಮುಂದೆ ಬಾಯಿ ಬಿಟ್ಟು ಹೇಳುತ್ತೀಯಾ ಎಂದು ಕಾಲೆಳೆದರು. ಕಾರಜೋಳ ಎದ್ದು ನಿಂತು ನಾವು ನೀವು ಮಾಂಸ ತಿನ್ನುವ ಜಾತಿಯಲ್ಲಿ ಹುಟ್ಟಿದ್ದೇವೆ. ಆದರೆ, ರಮೇಶ್‍ ಕುಮಾರ್ ಅವರ ರೀತಿ ಮಾಂಸ ತಿನ್ನಲು ನಮಗೂ ಬರುವುದಿಲ್ಲ ಎಂದು ಕಾಲೆಳೆದರು. ನಾನೂ ರಮೇಶ್‍ ಕುಮಾರ್ ಜೊತೆ ಸಾಕಷ್ಟು ಬಾರಿ ಊಟ ಮಾಡಿದ್ದೇನೆ. ಅವನಷ್ಟು ಕ್ಲೀನಾಗಿ ಊಟ ಮಾಡಲು ನನಗೆ ಬರುವುದಿಲ್ಲ ಎಂದು ಹಾಸ್ಯ ಚಟಾಕಿಯನ್ನು ಸಿದ್ದರಾಮಯ್ಯ ಹಾರಿಸಿದರು.

ನನ್ನ ಜೊತೆ ಶಿವಮೊಗ್ಗದ ಒಬ್ಬ ಲಿಂಗಾಯತ ಸ್ನೇಹಿತ ರಾಜಕಶೇಖರ್​ ಎಂಬಾತ ಇದ್ದ. ಅವನು ಮೂಳೆಯಲ್ಲಿ ಒಂದಿಷ್ಟು ಮಾಂಸ ಉಳಿಯದಂತೆ ತಿನ್ನುತ್ತಿದ್ದ ಎಂದರು. ಆಗ ಮಾಂಸದ ಮಾತು ಸಾಕು. ಚುನಾವಣೆ ಬಗ್ಗೆ ಮಾತನಾಡಿ ಎಂದು ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿ ಸಲಹೆ ನೀಡಿದರು. ಆಗ ಸಿದ್ದರಾಮಯ್ಯ ನೋಡಿ ನಿಮಗೆ ಈ ವಿಷಯ ಕೇಳೋಕೆ ಅಸಹ್ಯ ಅನಿಸುತ್ತಿದೆ ಎಂದರು. ಹಾಗೇನಿಲ್ಲ ವಿಷಯಾಂತರ ಆಗುವುದು ಬೇಡ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.