ETV Bharat / state

ಹವಾಮಾನ ವೈಪರೀತ್ಯ ಪರಿಣಾಮ ನಿಯಂತ್ರಣ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಎಡವಿದ ಸರ್ಕಾರ

author img

By

Published : Jun 4, 2022, 6:55 PM IST

ಹವಾಮಾನ ವೈಪರೀತ್ಯದ ಪ್ರಭಾವ ತಗ್ಗಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಿಯಾ ಯೋಜನೆಯ ಆವೃತ್ತಿ-2 ಅನ್ನು ಸಿದ್ಧಪಡಿಸಿದೆ. ಆದರೆ, ಈ ಹಿಂದಿನ ಆವೃತ್ತಿ-2ರ ಬಹುತೇಕ ಕಾರ್ಯಕ್ರಮಗಳ ಜಾರಿ ಆಮೆಗತಿಯಲ್ಲಿದೆ ಎಂಬುವುದೇ ವಿಪರ್ಯಾಸ..

Karnataka State Climate Change Action Plan
ಹವಾಮಾನ ವೈಪರೀತ್ಯ ಪರಿಣಾಮ ನಿಯಂತ್ರಣ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಎಡವಿದ ಸರ್ಕಾರ

ಬೆಂಗಳೂರು : ಹವಾಮಾನ ವೈಪರೀತ್ಯದ ಪ್ರಭಾವ ರಾಜ್ಯವನ್ನೂ ಬಿಟ್ಟಿಲ್ಲ. ಅಕಾಲಿಕ ಮಳೆ, ಏರುತ್ತಿರುವ ತಾಪಮಾನದಿಂದ ಹವಾಮಾನ ಬದಲಾವಣೆಯ ಅಪಾಯವನ್ನು ಎದುರಿಸುತ್ತಿದೆ. ಹೀಗಾಗಿ, ಇದರ ಪರಿಣಾಮ ತಗ್ಗಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಹವಾಮಾನ ಬದಲಾವಣೆಯ ಕ್ರಿಯಾ ಯೋಜನೆಯ (ಕೆಎಸ್​​ಎಪಿಸಿಸಿ) ಆವೃತ್ತಿ-2 ಅನ್ನು ಸರ್ಕಾರ ಸಿದ್ಧಪಡಿಸಿ, ಕೇಂದ್ರ ಸರ್ಕಾರದ ಅನುಮೋದನೆಗೆ ಕಳುಹಿಸಿದೆ.

ರಾಜ್ಯವು ಹವಾಮಾನ ಬದಲಾವಣೆಯ ದುಷ್ಪರಿಣಾಮಗಳನ್ನು ಪ್ರತಿ ವರ್ಷ ಎದುರಿಸುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಅಕಾಲಿಕ ಮಳೆ, ಏರುತ್ತಿರುವ ತಾಪಮಾನದಿಂದ ಪ್ರತಿಕೂಲ ಪರಿಣಾಮ ಅನುಭವಿಸುತ್ತಿದೆ. ಈ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಕಡಿಮೆ‌ ಮಾಡಲು ಸರ್ಕಾರ ಕಸರತ್ತು ನಡೆಸುತ್ತಿದೆ. ಆದರೆ, ಇದಕ್ಕಾಗಿ ನಾನಾ ಕಾರ್ಯಕ್ರಮಗಳನ್ನು ರೂಪಿಸಿದರೂ ಅದರ ಜಾರಿಯಲ್ಲಿ ಮಾತ್ರ ಎಡವುತ್ತಿದೆ.

ಕ್ರಿಯಾ ಯೋಜನೆಯ ಆವೃತ್ತಿ-2 ಸಿದ್ಧ: ರಾಜ್ಯದಲ್ಲಿ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಎದುರಿಸಲು ಹವಾಮಾನ ಬದಲಾವಣೆಯ ಕಿಯಾ ಯೋಜನೆಯ ಆವೃತ್ತಿ-2 ಅನ್ನು ಸಿದ್ಧಪಡಿಸಿದೆ. ಪರಿಸರ ನಿರ್ವಹಣೆ ಮತ್ತು ನೀತಿ, ಸಂಶೋಧನಾ ಸಂಸ್ಥೆ ಕ್ರಿಯಾ ಯೋಜನೆ ಸಿದ್ಧಪಡಿಸಿದ್ದು, ಅದರ ಅನುಮೋದನೆಗಾಗಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ.

ಕ್ರಿಯಾ ಯೋಜನೆಯಲ್ಲಿ ರಾಜ್ಯದಲ್ಲಿ ಹವಾಮಾನ ಬದಲಾವಣೆಯ ನಿಯಂತ್ರಣಕ್ಕಾಗಿ 89 ವಿವಿಧ ಕಾರ್ಯಕ್ರಮಗಳು/ಯೋಜನೆಗಳನ್ನು ಗುರುತಿಸಲಾಗಿದೆ. ಅರಣ್ಯದಲ್ಲಿ ಇಂಗಾಲದ ಸಿಂಕ್‌ ಅನ್ನು ವೃದ್ಧಿಸಲು ಅರಣ್ಯ ಇಲಾಖೆಯು 2015-16ರಿಂದ 2019-20ರ ಅವಧಿಯಲ್ಲಿ 2,72,503 ಹೆಕ್ಟೇರ್‌ಗಳಲ್ಲಿ ಅರಣ್ಯೀಕರಣವನ್ನು ಕೈಗೊಂಡಿದೆ. ಗಿಡ ನೆಡುವಿಕೆ 2030ರ ವೇಳೆಗೆ ಸುಮಾರು 5.25 ಮಿಲಿಯನ್ ಟನ್ ಕಾರ್ಬನ್ ಡೈಯಾಕ್ಸೈಡ್​ ಅನ್ನು ಬೇರ್ಪಡಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆವೃತ್ತಿ 1ರ ಸ್ಥಿತಿ-ಗತಿ ಏನಿದೆ? : ಹವಾಮಾನ ಬದಲಾವಣೆಯ ಕುರಿತಾದ ಕಾರ್ಯತಂತ್ರ ಜ್ಞಾನ ಕೇಂದ್ರ ಸ್ಥಾಪಿಸುವ ಕಾರ್ಯ ನಡೆಯುತ್ತಿದೆ. ಜೊತೆಗೆ ಚಿಟ್ಟೆ, ಪತಂಗಗಳು ಹವಾಗುಣ ಬದಲಾವಣೆಯ ಸೂಚಕಗಳಾಗಿದ್ದು, ಈ ಕುರಿತು ಕರ್ನಾಟಕದ ವಿವಿಧ ಪರಿಸರದ ಹವಾಗುಣ ಪ್ರದೇಶಗಳಲ್ಲಿ ಒಂದು ಅಧ್ಯಯನ ಕೈಗೊಳ್ಳಲಾಗುತ್ತಿದೆ. ಮಣ್ಣಿನಿಂದ ಪ್ರತ್ಯೇಕಿಸಲ್ಪಟ್ಟ ಪ್ಲಾಸ್ಟಿಕ್ ವಿಘಟಿಸುವ ಸೂಕ್ಷ್ಮಜೀವಿಗಳ ಅಧ್ಯಯನವನ್ನೂ ನಡೆಸಲಾಗುತ್ತಿದೆ.

ಇಂಗಾಲದ ಹೀರುವಿಕೆ, ಜೀವರಾಶಿಯ ಕ್ರೂಢೀಕರಣ ಮತ್ತು ಜೈವಿಕ ಪರಿಹಾರಗಳಿಗಾಗಿ ಸೂಕ್ಷ್ಮಪಾಚಿಗಳ ಸಾಮರ್ಥ್ಯವನ್ನು ಅನ್ವೇಷಿಸುವ ಕಾರ್ಯ ನಡೆಯುತ್ತಿದೆ. ವಿಭಿನ್ನ ಕೃಷಿ ಪದ್ಧತಿ ಮತ್ತು ಬದಲಾಗುತ್ತಿರುವ ಭೂ ಬಳಕೆಯ ವಿನ್ಯಾಸದಲ್ಲಿನ ಒಂದು ಅಧ್ಯಯನ ನಡೆಸಲಾಗುತ್ತಿದೆ. ಆದರೆ, ಬಹುತೇಕ ಕಾರ್ಯಕ್ರಮಗಳ ಜಾರಿ ಆಮೆಗತಿಯಲ್ಲಿದೆ. ಇಂಗಾಲದ ತಟಸ್ಥತೆಯನ್ನು ಸಾಧಿಸಲು ಪ್ರಾಯೋಗಿಕ ಯೋಜನೆಯನ್ನು ಪೂರ್ಣಗೊಳಿಸಲಾಗಿದೆ. ಉಳಿದಂತೆ ಕಾರ್ಯಕ್ರಮಗಳ ಜಾರಿಯಲ್ಲಿ ರಾಜ್ಯ ಸರ್ಕಾರ ಎಡವಿದೆ.

ಇದನ್ನೂ ಓದಿ: ಮಹಿಳೆಯರ ಅವಹೇಳನ : ಸುಗಂಧ ದ್ರವ್ಯದ ಜಾಹೀರಾತು ತೆಗೆದುಹಾಕಲು ಕೇಂದ್ರ ಸರ್ಕಾರ ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.