ETV Bharat / state

ವಿದ್ಯುತ್ ಉತ್ಪಾದನೆಯಲ್ಲಿ ಕರ್ನಾಟಕ ಸ್ವಾವಲಂಬಿ: 1.5 ತಿಂಗಳಲ್ಲಿ 831 ಮಿ.ಯೂ. ಹೆಚ್ಚುವರಿ ವಿದ್ಯುತ್ ಮಾರಾಟ

author img

By

Published : May 16, 2022, 10:56 PM IST

Updated : May 16, 2022, 11:04 PM IST

ರಾಜ್ಯ ಇದೀಗ ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದೆ. ಇದರಲ್ಲಿ ಈವರೆಗೆ 764.48 ಕೋಟಿ ರೂ. ಆದಾಯ ಗಳಿಸಿದೆ. 2022-23ನೇ ಸಾಲಿನಲ್ಲಿ ಬರೋಬ್ಬರಿ 831.53 ಮಿಲಿಯನ್ ಯೂನಿಟ್ ವಿದ್ಯುತ್​ನನ್ನು ಇತರ ರಾಜ್ಯಗಳಿಗೆ ಮಾರಾಟ ಮಾಡಿದೆ.

ವಿದ್ಯುತ್
ವಿದ್ಯುತ್

ಬೆಂಗಳೂರು: ರಾಜ್ಯ ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿದ್ದು, ಇತರ ರಾಜ್ಯಗಳಿಗೆ ಹೆಚ್ಚುವರಿ ವಿದ್ಯುತ್​ ಮಾರಾಟ ಮಾಡುತ್ತಿದೆ. ಈ ಮೂಲಕ ಈವರೆಗೆ 764.48 ಆದಾಯ ಗಳಿಸಿದೆ. ಒಂದು ಕಾಲದಲ್ಲಿ ವಿದ್ಯುತ್ ಕೊರತೆ ಎದುರಿಸುತ್ತಿದ್ದ ರಾಜ್ಯ, ಇದೀಗ ಹೆಚ್ಚುವರಿ ವಿದ್ಯುತ್ ಉತ್ಪಾದಿಸುತ್ತಿದೆ. ಕಳೆದ ಹಲವು ವರ್ಷಗಳಿಂದ ಕರ್ನಾಟಕ ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಬೇಕು ಎಂಬ ಗುರಿ ಹೊಂದಿತ್ತು. ಈ ನಿಟ್ಟಿನಲ್ಲಿ ಸರ್ಕಾರ ಹಲವು ಕಾರ್ಯಕ್ರಮಗಳನ್ನು ರೂಪಿಸಿತ್ತು.

831 ಮಿ.ಯೂ. ವಿದ್ಯುತ್ ಮಾರಾಟ: ರಾಜ್ಯ ಸರ್ಕಾರ 2022-23ನೇ ಸಾಲಿನಲ್ಲಿ ಬರೋಬ್ಬರಿ 831.53 ಮಿಲಿಯನ್ ಯೂನಿಟ್ ವಿದ್ಯುತ್​ನನ್ನು ಇತರ ರಾಜ್ಯಗಳಿಗೆ ಮಾರಾಟ ಮಾಡಿದೆ. ಈ ಮೂಲಕ ಸುಮಾರು 764.48 ಕೋಟಿ ರೂ. ಆದಾಯ ಗಳಿಸಿದೆ. ಪವರ್ ಕಂಪನಿ ಆಫ್ ಕರ್ನಾಟಕ ಲಿಮಿಟೆಡ್‌ (PCKL) ಕಂಪನಿ ರಾಜ್ಯ ವಿದ್ಯುತ್ ರವಾನೆ ಕೇಂದ್ರದ ಸಹಯೋಗದೊಂದಿಗೆ ರಾಜ್ಯ ವಿತರಣಾ ಕಂಪನಿಗಳ ಹೆಚ್ಚುವರಿ ವಿದ್ಯುತ್​ ಅನ್ನು, ವಿದ್ಯುತ್ ವಿನಿಮಯ ಕೇಂದ್ರದ (IEX & PXIL) ಮೂಲಕ ಮಾರಾಟ ಮಾಡುತ್ತಿದೆ. ಸಾಂಪ್ರದಾಯಿಕ ಹಾಗೂ ನವೀಕರಿಸಬಹುದಾದ ವಿದ್ಯುತ್​ ಅನ್ನು ಮಾರಾಟ ಮಾಡಲಾಗಿದೆ.

ಪ್ರಸಕ್ತ 2022-23ನೇ ಸಾಲಿನಲ್ಲಿ ಮೇ.15 ರವರೆಗೆ 831.24 ಮಿ.ಯೂ. ನಷ್ಟು ವಿದ್ಯುತ್​ ಅನ್ನು ಸರಾಸರಿ 9.19 ರೂ. ಪ್ರತಿ ಯೂನಿಟ್ ನಂತೆ ಒಟ್ಟು 764.23 ಕೋಟಿ ರೂ. ಮೊತ್ತದಷ್ಟು ಮಾರಾಟ ಮಾಡಲಾಗಿದೆ. ಪ್ರಮುಖವಾಗಿ ತಮಿಳುನಾಡು, ವೇದಾಂತ, ಒಡಿಶಾ, ಕಲ್ಕತ್ತ ವಿದ್ಯುತ್ ಕಂಪನಿ, ದೆಹಲಿ, ಭಾರತ್ ಅಲ್ಯೂಮಿನಿಯಂ ಹಾಗೂ ಬಿಹಾರಕ್ಕೆ ವಿದ್ಯುತ್ ಮಾರಾಟ ಮಾಡಲಾಗಿದೆ.

ಇದನ್ನೂ ಓದಿ: ಬೈಕ್​ ರೇಸರ್​ ಹತ್ಯೆ ಪ್ರಕರಣ: ರೋಚಕತೆ ತನಿಖೆಯಲ್ಲಿ ಕೊನೆಗೂ ಬಂಧಿಯಾದ ಹೆಂಡತಿ

ವಿದ್ಯುತ್ ಖರೀದಿ ವಿವರ ಹೀಗಿದೆ: ಏಪ್ರಿಲ್ ತಿಂಗಳಲ್ಲಿ ಬೇಸಿಗೆಯಿಂದ ವಿದ್ಯುತ್ ಬೇಡಿಕೆ ಹೆಚ್ಚಾಗಿದ್ದು, ಕೇಂದ್ರದಿಂದ ಕಲ್ಲಿದ್ದಲು ಪೂರೈಕೆ ಕೊರತೆಯಾಗಿದ್ದರಿಂದ 119.60 ಮಿ.ಯೂ. ನಷ್ಟು ವಿದ್ಯುತ್​ ಅನ್ನು ಸರಾಸರಿ ರೂ.10.18 ಪ್ರತಿ ಯೂನಿಟ್​ಗೆ ಒಟ್ಟು 121.78 ಕೋಟಿ ರೂ. ಮೊತ್ತದಷ್ಟು ವಿದ್ಯುತ್ ವಿನಿಮಯ ಕೇಂದ್ರದ ಮೂಲಕ ಖರೀದಿ ಮಾಡಲಾಗಿದೆ.

ರಾಜ್ಯದ ಸದ್ಯದ ವಿದ್ಯುತ್ ಉತ್ಪಾದನೆ ಹೇಗಿದೆ?: ರಾಜ್ಯ ಇಂದು ಜಲ ವಿದ್ಯುತ್ ಹಾಗೂ ಉಷ್ಣ ವಿದ್ಯುತ್ ಸ್ಥಾವರಗಳ ಮೂಲಕ ಸುಮಾರು 11,336 ಮೆ.ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿದೆ. ಈ ಪೈಕಿ ಬೇಡಿಕೆಗೆ ಅನುಸಾರ ಸುಮಾರು 4,747 ಮೆ.ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುತ್ತಿದೆ.

ನವೀಕರಿಸಬಹುದಾದ ಇಂಧನದ ಮೂಲಕ ರಾಜ್ಯ 14,580 ಮೆ.ವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಹೊಂದಿದೆ. ಈ ಪೈಕಿ 3,817 ಮೆ.ವ್ಯಾಟ್ ವಿದ್ಯುತ್ ಉತ್ಪಾದನೆ ಆಗುತ್ತಿದೆ. ಕರ್ನಾಟಕ ಎಲ್ಲ ಮೂಲಗಳಿಂದ ಸುಮಾರು 31,398 ಮೆ.ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿದೆ. ಈ ಪೈಕಿ ಸದ್ಯ ಎಲ್ಲ ಮೂಲಗಳಿಂದ ಗರಿಷ್ಠ 8,974 ಮೆ.ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುತ್ತಿದೆ. ಸದ್ಯ 6,541 ಮೆ.ವ್ಯಾಟ್​​ಗೆ ವಿದ್ಯುತ್ ಬೇಡಿಕೆ ಕುಸಿತ ಕಂಡಿದೆ.

Last Updated : May 16, 2022, 11:04 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.