ETV Bharat / state

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ; ದಕ್ಷಿಣ ಕನ್ನಡ ಫಸ್ಟ್​, ಯಾದಗಿರಿ ಲಾಸ್ಟ್​ - ದ್ವಿತೀಯ ಪಿಯುಸಿ ಫಲಿತಾಂಶ

ದ್ವಿತೀಯ ಪಿಯು ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ದಕ್ಷಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದಿದೆ.

ಫಲಿತಾಂಶ ಪ್ರಕಟಿಸಿದ ಶಿಕ್ಷಣ ಇಲಾಖೆ ಕಾರ್ಯದರ್ಶಿ

author img

By

Published : Apr 21, 2023, 10:37 AM IST

Updated : Apr 21, 2023, 12:21 PM IST

ಬೆಂಗಳೂರು: ಕರ್ನಾಟಕ ರಾಜ್ಯ ದ್ವಿತೀಯ ಪಿಯು ಫಲಿತಾಂಶ ಪ್ರಕಟಗೊಂಡಿದೆ. ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ದಕ್ಷಣ ಕನ್ನಡ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದರೇ, ಕೊಡಗು ಮೂರನೇ ಸ್ಥಾನ, ಉತ್ತರ ಕನ್ನಡ ಜಿಲ್ಲೆ ನಾಲ್ಕನೇ ಸ್ಥಾನ ಪಡೆದಿದೆ. ಇನ್ನು ಯಾದಗಿರಿ ಜಿಲ್ಲೆ ಕೊನೆಯ ಸ್ಥಾನ ಪಡೆದಿದೆ. ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೀಶ್ ಸಿಂಗ್ ಹಾಗೂ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷ ರಾಮಚಂದ್ರನ್ ಅವರು ಮಾಧ್ಯಮಗೋಷ್ಟಿಯಲ್ಲಿ ಫಲಿತಾಂಶ ಪ್ರಕಟಿಸಿದರು.

ಬಾಲಕಿಯರೇ ಮೇಲುಗೈ: ಬಾಲಕಿಯರ ಒಟ್ಟಾರೆ ಫಲಿತಾಂಶ ಶೇ.80.25 ಇದ್ದರೆ, ಬಾಲಕರ ಒಟ್ಟಾರೆ ಫಲಿತಾಂಶ ಶೇ.69.05 ರಷ್ಟು ಇದೆ. ಇನ್ನು ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳು ಶೇ.82.30 ರಷ್ಟು ಫಲಿತಾಂಶ ಪಡೆದರೆ, ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಶೇ.65.05 ರಷ್ಟು ಫಲಿತಾಂಶ ಪಡೆದಿದ್ದಾರೆ. ಇನ್ನು ದಕ್ಷಿಣ ಕನ್ನಡ ಜಿಲ್ಲೆ ಶೇ.88.02 ಫಲಿತಾಂಶದ ಮೂಲಕ ಅತೀ ಹೆಚ್ಚು ಫಲಿತಾಂಶ ಪಡೆದ ಜಿಲ್ಲೆಯಾಗಿ ಹೊರ ಹೊಮ್ಮಿದೆ. ಯಾದಗಿರಿ ಜಿಲ್ಲೆ ಶೇ. 67.14 ರಷ್ಟು ಫಲಿತಾಂಶದ ಮೂಲಕ ಕೊನೆಯ ಸ್ಥಾನದಲ್ಲಿದೆ.

ಟಾಪ್ ಫೈವ್ ಸ್ಥಾನ:

1. ದಕ್ಷಿಣ ಕನ್ನಡ ಶೇ. 95.33

2. ಉಡುಪಿ ಶೇ. 95.24

3. ಕೊಡಗು ಶೇ.90.55

4. ಉತ್ತರ ಕನ್ನಡ ಶೇ.89.74

5. ವಿಜಯಪುರ ಶೇ. 84.69

ಟಾಪರ್ಸ್​: ಬೆಂಗಳೂರಿನ ಜಯನಗರ ಎನ್ಎಂಕೆಆರ್ ವಿ ಕಾಲೇಜು ವಿದ್ಯಾರ್ಥಿನಿ ತಬಸುಂ ಶೇಖ್ ಕಲಾ ವಿಭಾಗದದಲ್ಲಿ 600 ಕ್ಕೆ 593 ಅಂಕ ಪಡೆದ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಆಳ್ವಾಸ ಪಿಯು ಕಾಲೇಜು ಮೂಡಬಿದರೆ ವಿದ್ಯಾರ್ಥಿನಿ ಅನಾನ್ಯ ಕೆ.ಎ ವಾಣಿಜ್ಯ ವಿಭಾಗದಲ್ಲಿ 600ಕ್ಕೆ 600 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಕೋಲಾರದ ಗಂಗೋತ್ರಿ ಕಾಲೇಜು ವಿದ್ಯಾರ್ಥಿಗಳಾದ ಕೌಶಿಕ್​, ಸುರಭಿ ಎಸ್​ ವಿಜ್ಞಾನ ವಿಭಾಗದಲ್ಲಿ 600 ಕ್ಕೆ 596 ಅಂಕ ಪಡೆದ ಮೊದಲ ಸ್ಥಾನ ಗಳಿಸಿದ್ದಾರೆ.

ಫಲಿತಾಂಶದಲ್ಲಿ ಹೆಚ್ಚಳ: ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸಚಿವರ ಬದಲಾಗಿ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ಫಲಿತಾಂಶ ಪ್ರಕಟ ಮಾಡಿದರು. ಪಿಯುಸಿ ಪರೀಕ್ಷೆ ‌ಇತಿಹಾಸದಲ್ಲಿ ಈ ಬಾರಿ ಅತ್ಯಧಿಕ ಫಲಿತಾಂಶ ಬಂದಿದೆ. ಈ ಬಾರಿ ಶೇ.74.67 ರಷ್ಟು ಫಲಿತಾಂಶ ಬಂದಿದೆ. ಕಳೆದ ಬಾರಿಗಿಂತ ಶೇ.12.79 ರಷ್ಟು ಈ ಬಾರಿ ಫಲಿತಾಂಶ ಹೆಚ್ಚಳವಾಗಿದೆ. ದ್ವಿತೀಯ ಪಿಯುಸಿ ಫಲಿತಾಂಶವನ್ನು 11 ಗಂಟೆಯಿಂದ https://karresults.nic.in ವೆಬ್‌ಸೈಟ್‌ನಲ್ಲಿ ರಿಸಲ್ಟ್‌ ವೀಕ್ಷಿಸಬಹುದು.

ಇದನ್ನೂ ಓದಿ: ಇಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ... ಈ ವೆಬ್​ಸೈಟ್​ನಲ್ಲಿ ರಿಸಲ್ಟ್ ನೋಡಿ

Last Updated : Apr 21, 2023, 12:21 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.