ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯು 2020ನೇ ಸಾಲಿನ ಸಾಹಿತ್ಯ ಅಕಾಡೆಮಿಯ ಗೌರವ ವಾರ್ಷಿಕ ಪ್ರಶಸ್ತಿ, ಸಾಹಿತ್ಯ ಶ್ರೀ ಪ್ರಶಸ್ತಿ, ಪುಸ್ತಕ ಬಹುಮಾನಗಳನ್ನು ಪ್ರಕಟಿಸಿದೆ.
ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಗಳನ್ನು ಐವರು ಸಾಹಿತಿಗಳಿಗೆ ನೀಡಲಾಗುತ್ತಿದ್ದು, ಪ್ರಶಸ್ತಿಯು 50 ಸಾವಿರ ರೂ. ನಗದು ಬಹುಮಾನ ಒಳಗೊಂಡಿದೆ. ಪ್ರೊ. ಅಮೃತ ಸೋಮೇಶ್ವರ, ವಿದ್ವಾನ್ ಷಣ್ಮುಖಯ್ಯ ಅಕ್ಕೂರಮಠ, ಡಾ. ಕೆ.ಕೆಂಪೇಗೌಡ, ಡಾ. ಕೆ.ಆರ್.ಸಂಧ್ಯಾರೆಡ್ಡಿ, ಅಶೋಕಪುರಂ ಕೆ. ಗೋವಿಂದರಾಜು ಅವರುಗಳಿಗೆ ಗೌರವ ಪ್ರಶಸ್ತಿ ಲಭಿಸಿವೆ.
ಸಾಹಿತ್ಯ ಶ್ರೀ ಪ್ರಶಸ್ತಿಯು 10 ಮಂದಿಗೆ ಲಭಿಸಿದೆ. ಪ್ರೇಮಶೇಖರ್, ಡಾ. ರಾಜಪ್ಪ ದಳವಾಯಿ, ಬಿ.ಟಿ.ಜಾಹ್ನವಿ, ಪ್ರೊ. ಕಲ್ಯಾಣರಾವ್ ಜಿ. ಪಾಟೀಲ್, ಡಾ. ಜೆ.ಪಿ.ದೊಡ್ಡಮನಿ, ಡಾ. ಮೃತ್ಯುಂಜಯ ರುಮಾಲೆ, ಡಿ.ವಿ.ಪ್ರಹ್ಲಾದ್, ಡಾ. ಎಂ.ಎಸ್.ಆಶಾದೇವಿ, ಶಿವಾನಂದ ಕಳವೆ, ವೀಣಾ ಬನ್ನಂಜೆ ಸಾಹಿತ್ಯ ಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಹಾಗೆಯೇ 2019ನೇ ಸಾಲಿನ ಭಕ್ತಿ ಬಹುಮಾನಕ್ಕೆ 9 ಮಂದಿ ಆಯ್ಕೆಯಾಗಿದ್ದಾರೆ. ಅನುಪಮಾ ಪ್ರಸಾದ್, ನೀತಾ ರಾವ್, ಡಾ. ಬಿ.ಪ್ರಭಾಕರ ಶಿಶಿಲ, ಡಾ. ಜಿ.ಎನ್.ರಂಗನಾಥ್ ರಾವ್, ಭಾಗ್ಯಜ್ಯೋತಿ ಹಿರೇಮಠ, ಮಲ್ಲಿಕಾರ್ಜುನ ಕಡಕೋಳ, ಲಕ್ಷ್ಮಿಕಾಂತ್ ಪಾಟೀಲ್ ಹಾಗೂ ಪ್ರಮೋದ್ ಮುತಾಲಿಕ್.
2019ನೇ ಸಾಲಿನ ಪುಸ್ತಕ ಬಹುಮಾನ ಪುರಸ್ಕೃತರಾಗಿರುವ ಸತ್ಯಮಂಗಲ ಮಹಾದೇವ, ಸುಮಿತ್ ಮೇತ್ರಿ, ವಸುಧೇಂದ್ರ, ಲಕ್ಷ್ಮಣ ಬಾದಾಮಿ, ಉಷಾ ನರಸಿಂಹನ್, ರಘುನಾಥ ಚ.ಹ., ಡಿ.ಜಿ.ಮಲ್ಲಿಕಾರ್ಜುನ, ಬಿ.ಎಂ.ರೋಹಿಣಿ, ಡಾ. ಗುರುಪಾದ ಮರಿಗುದ್ದಿ, ವಸುಮತಿ ಉಡುಪ, ಡಾ. ಕೆ.ಎಸ್.ಪವಿತ್ರ, ಡಾ. ಮಹಾಬಲೇಶ್ವರ ರಾವ್, ಡಾ. ಚನ್ನಬಸವಯ್ಯ ಹಿರೇಮಠ, ಗೀತಾ ಶೆಣೈ, ಧರಣೇಂದ್ರ ಕುರಕುರಿ, ಸುಧಾ ಆಡುಕಳ, ಪ್ರೊ. ಡಿ.ವಿ.ಪರಮಶಿವಮೂರ್ತಿ, ಡಾ. ಸಿದ್ಧಗಂಗಯ್ಯ, ಕಪಿಲ ಪಿ. ಹುಮನಾಬಾದೆ ಆಯ್ಕೆಯಾಗಿದ್ದಾರೆ.