ETV Bharat / state

ರಾಜ್ಯದಲ್ಲಿ ಒಂದೇ ದಿನ 9,925 ಸೋಂಕಿತರು ಗುಣಮುಖ... 122 ಸಾವು - ಕರ್ನಾಟಕ ಕೋವಿಡ್ ಕೇಸ್​

ರಾಜ್ಯದಲ್ಲಿಂದು ಮಹಾಮಾರಿ ಕೊರೊನಾ ಸೋಂಕಿತ ಪ್ರಕರಣಗಳಿಗಿಂತಲೂ ಗುಣಮುಖರಾಗಿ ಡಿಸ್ಚಾರ್ಜ್​ ಆದವರ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದೆ.

Karnataka  covid
Karnataka covid
author img

By

Published : Sep 21, 2020, 6:46 PM IST

ಬೆಂಗಳೂರು: ಮಹಾಮಾರಿ ಕೊರೊನಾ ಸೋಂಕಿಗೊಳಗಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಕೋವಿಡ್​ ರೋಗಿಗಳು ಗುಣಮುಖರಾಗಿ ಇಂದು ದಾಖಲೆಯ ಪ್ರಮಾಣದಲ್ಲಿ ಡಿಸ್ಚಾರ್ಜ್​ ಆಗಿದ್ದಾರೆ. ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ ಒಟ್ಟು 9,925 ಜನರು ಆಸ್ಪತ್ರೆಯಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.

ಇದರ ಮಧ್ಯೆ 7,339 ಜನರಿಗೆ ಹೊಸದಾಗಿ ಸೋಂಕು ಕಾಣಿಸಿಕೊಂಡಿದ್ದು, 122 ಜನರು ಸಾವನ್ನಪ್ಪಿದ್ದಾರೆ. ಸದ್ಯ ರಾಜ್ಯದಲ್ಲಿ 5,26,876 ಕೋವಿಡ್​ ಪ್ರಕರಣಗಳಿದ್ದು, 4,23,377 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್​ ಆಗಿದ್ದಾರೆ. ಇದರ ಮಧ್ಯೆ 95,335 ಸಕ್ರಿಯ ಪ್ರಕರಣಗಳಿವೆ.

  • Karnataka reports 7,339 #COVID19 cases, 9925 discharges and 122 in the last 24 hours. The total cases in the state rise to 5,26,876, including 4,23,377 discharges and 8,145 deaths. Active cases stand at 95,335: Government of Karnataka pic.twitter.com/dGXU2XoX1h

    — ANI (@ANI) September 21, 2020 " class="align-text-top noRightClick twitterSection" data=" ">

ರಾಜ್ಯದಲ್ಲಿ ಇಲ್ಲಿಯವರೆಗೆ ಕೊರೊನಾ ಸೋಂಕಿನಿಂದ 8,184 ಜನರು ಸಾವನ್ನಪ್ಪಿದ್ದಾಗಿ ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಬೆಂಗಳೂರಿನಲ್ಲಿ 2885 ಸೋಂಕಿತ ಪ್ರಕರಣ ಕಾಣಿಸಿಕೊಂಡಿದ್ದು, 35 ಜನರು ಸಾವನ್ನಪ್ಪಿದ್ದಾರೆ. ಬಳ್ಳಾರಿಯಲ್ಲಿ 196, ಬಾಗಲಕೋಟೆ 123, ಬೆಂಗಳೂರು ಗ್ರಾಮೀಣ 114, ಬೆಳಗಾವಿ 171,ಚಿತ್ರದುರ್ಗ 326, ದಕ್ಷಿಣ ಕನ್ನಡ 233, ಹಾಸನ 268, ಮೈಸೂರು 524,ಶಿವಮೊಗ್ಗ 348, ತುಮಕೂರಿನಲ್ಲಿ 300 ಕೇಸ್​ ಕಾಣಿಸಿಕೊಂಡಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.