ಬೆಂಗಳೂರು: ರಾಜ್ಯದಲ್ಲಿಂದು 87,469 ಜನರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 222 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 30,02,649 ಕ್ಕೆ ಏರಿಕೆಯಾಗಿದೆ.
ಇನ್ನು ಚಿಕಿತ್ಸೆ ಪಡೆಯುತ್ತಿದ್ದವರ ಪೈಕಿ 286 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಒಟ್ಟು ಸೋಂಕಿನಿಂದ 29,57,256 ಚೇತರಿಸಿಕೊಂಡಂತಾಗಿದೆ. ಇಬ್ಬರು ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 38,290 ಕ್ಕೆ ಏರಿದೆ.
ರಾಜ್ಯದಲ್ಲಿ ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 7,074 ಕ್ಕೆ ಏರಿಕೆ ಕಂಡಿದೆ. ಈ ಮೂಲಕ ಸೋಂಕಿತರ ಪ್ರಮಾಣ ಶೇ 0.25% ರಷ್ಟು ಇದ್ದು, ಸಾವಿನ ಪ್ರಮಾಣ ಶೇ. 0.90 % ರಷ್ಟಿದೆ. ವಿಮಾನ ನಿಲ್ದಾಣದಿಂದ 2,000 ಪ್ರಯಾಣಿಕರು ತಪಾಸಣೆಗೊಳ್ಳಪಟ್ಟಿದ್ದು, ಹೈ ರಿಸ್ಕ್ ದೇಶದಿಂದ 751 ಜನ ಆಗಮಿಸಿದ್ದಾರೆ.
ಬೆಂಗಳೂರಿನಲ್ಲಿ 146 ಮಂದಿಗೆ ಸೋಂಕು
ರಾಜಧಾನಿ ಬೆಂಗಳೂರಿನಲ್ಲಿಂದು 146 ಮಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 12,60,277 ಕ್ಕೆ ಏರಿದೆ. 147 ಜನರು ಡಿಸ್ಜಾರ್ಜ್ ಆಗಿದ್ದು, ಗುಣಮುಖರಾದವರ ಸಂಖ್ಯೆ 12,38,240ಕ್ಕೇ ಏರಿದೆ. ಒಬ್ಬ ಸೋಂಕಿತ ಮೃತರಾಗಿದ್ದು, ಸೋಂಕಿಗೆ 16,378 ಮಂದಿ ಮೃತಪಟ್ಟಂತಾಗಿದೆ.
ರೂಪಾಂತರಿ ಅಪಡೇಟ್ಸ್
ಅಲ್ಪಾ- 155
ಬೇಟಾ-08
ಡೆಲ್ಟಾ- 2569
ಡೆಲ್ಟಾ ಸಬ್ ಲೈನ್ ಏಜ್- 949
ಕಪ್ಪಾ-160
ಈಟಾ-01
ಒಮಿಕ್ರಾನ್- 19
ಇದನ್ನೂ ಓದಿ:24 ಗಂಟೆಗಳಲ್ಲಿ 6,563 ಕೋವಿಡ್ ಸೋಂಕಿತರು ಪತ್ತೆ.. ಒಮಿಕ್ರಾನ್ ಕೇಸ್ಗಳ ಸಂಖ್ಯೆ 153 ಕ್ಕೆ ಏರಿಕೆ