ETV Bharat / state

ರಾಜ್ಯದಲ್ಲಿ ಹಳೆಯ ದಾಖಲೆ ಮುರಿದ ಕೊರೊನಾ‌; 24 ಗಂಟೆಯಲ್ಲಿ 10,453 ಮಂದಿಗೆ ಸೋಂಕು ದೃಢ!

ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 87,475 ಜನರು ಕೊರೊನಾ ಪರೀಕ್ಷೆಗೆ ಒಳಪಟ್ಟಿದ್ದು, ಇದರಲ್ಲಿ 10,453 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 5,92,911 ಕ್ಕೆ ಏರಿಕೆ ಆಗಿದೆ.

ಕೊರೊನಾ
author img

By

Published : Sep 29, 2020, 9:37 PM IST

ಬೆಂಗಳೂರು: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಹಳೆಯ ದಾಖಲೆ ಮುರಿದಿರುವ ಕೊರೊನಾ ಸೋಂಕಿತರ ಸಂಖ್ಯೆ 10 ಸಾವಿರ ಗಡಿದಾಟಿದೆ.

ಕಳೆದ 24 ಗಂಟೆಗಳಲ್ಲಿ 87,475 ಜನರು ಕೊರೊನಾ ಪರೀಕ್ಷೆಗೆ ಒಳಪಟ್ಟಿದ್ದು, ಇದರಲ್ಲಿ 10,453 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 5,92,911 ಕ್ಕೆ ಏರಿಕೆ ಆಗಿದೆ. ಇತ್ತ 6,628 ಜನ ಗುಣಮುಖರಾಗಿದ್ದು, ಈವರೆಗೆ 4,76,378 ಜನರು ಡಿಸ್ಜಾರ್ಜ್ ಆಗಿದ್ದಾರೆ. ಒಟ್ಟಾರೆ ಸಕ್ರಿಯ ಪ್ರಕರಣಗಳು 1,07,737 ಇದ್ದು, ಇದರಲ್ಲಿ 815 ಜನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇತ್ತ ಇಂದು ಕೇವಲ ಸೋಂಕಿತರ ಸಂಖ್ಯೆಯಷ್ಟೇ ಅಲ್ಲ, ಸಾವಿನ ಸಂಖ್ಯೆಯಲ್ಲಿಯೂ ಏರಿಕೆ ಕಂಡಿದ್ದು, 136 ಸೋಂಕಿತರು ಬಲಿಯಾಗಿದ್ದಾರೆ. ರಾಜ್ಯದಲ್ಲಿ ಕೊರೊನಾ ಸಾವಿನ ಸಂಖ್ಯೆ 8,777ಕ್ಕೆ ಏರಿಕೆ ಆಗಿದೆ.‌

ವಿಮಾನ ನಿಲ್ದಾಣದಿಂದ 1,010 ಪ್ರಯಾಣಿಕರು ಆಗಮಿಸಿದ್ದು, ಅವರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಒಟ್ಟಾರೆ ಈವರೆಗೆ 2,19,017 ಪರೀಕ್ಷೆಗೆ ಒಳಪಟ್ಟಿದ್ದಾರೆ.

ಕಳೆದ 7 ದಿನಗಳಲ್ಲಿ 1,66,819 ಹೋಂ ಕ್ವಾರೆಂಟೈನ್ ನಲ್ಲಿ ಇದ್ದಾರೆ. ಈವರೆಗೆ 48,06,197 ಜನರು ಕೊರೊನಾ ‌ಪರೀಕ್ಷೆಗೆ ಒಳಪಟ್ಟಿದ್ದಾರೆ.

ಕೋವಿಡ್ ಹೊಸ ರೆಕಾರ್ಡ್...

ಕೊರೊನಾ ಸೋಂಕಿತರ ಸಂಖ್ಯೆ ಇದೇ ಮೊದಲ ಬಾರಿಗೆ ಹೊಸ ರೆಕಾರ್ಡ್ ಮಾಡಿದೆ. ಅತಿ ಹೆಚ್ಚು ಅಂದರೆ ಸೆಪ್ಟೆಂಬರ್ 13 ರಂದು 9,894 ಜನರಿಗೆ ಸೋಂಕು ದೃಢಪಟ್ಟಿತ್ತು. ಬಳಿಕ 9 ಸಾವಿರ ಗಡಿದಾಟುತ್ತಿದ್ದ ಸೋಂಕಿತರ ಸಂಖ್ಯೆ, ಇಂದು 10 ಸಾವಿರ ದಾಟಿದೆ.

ಈವರೆಗಿನ ಅತಿ ಹೆಚ್ಚು ಹೊಸ ಪ್ರಕರಣಗಳನ್ನು ನೋಡುವುದಾದರೆ...

  • 27-8-2020- 9,386
  • 01-9-2020- 9,058
  • 02-9-2020- 9,860
  • 04-9-2020- 9,280
  • 05-9-2020- 9,746
  • 06-9-2020- 9,319
  • 09-9-2020- 9,540
  • 10-9-2020- 9,217
  • 11-9-2020- 9,464
  • 12-9-2020- 9,140
  • 13-9-2020- 9,894 (ಎರಡನೇ‌ ಅತೀ ಹೆಚ್ಚು )
  • 16-9-2020- 9,725
  • 17-9-2020- 9,366
  • 27-9-2020- 9,543
  • 29-9-2020- 10,453( ಹೊಸ ದಾಖಲೆ)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.