ETV Bharat / state

ಕರ್ನಾಟಕ ಬಂಧೀಖಾನೆ ಅಭಿವೃದ್ಧಿ ಮಂಡಳಿ ವಿಧೇಯಕ 2021 ಪರಿಷತ್​​​ನಲ್ಲಿ ಅಂಗೀಕಾರ

ಈಗೀಗ ಒಂದಿಷ್ಟು ಸುಧಾರಣೆಯಾಗಿದೆ. ಜವಳಿ‌ ಕಾರ್ಯಕ್ಕೂ ಉತ್ತೇಜಿಸುವ ಕಾರ್ಯ ಮಾಡುತ್ತೇವೆ. ಜೈಲಿಂದ ಹೊರ ಬರುವ ಅನಾಥರಿಗೆ ಪುನರ್ವಸತಿ ಕೇಂದ್ರ ನಿರ್ಮಿಸುತ್ತೇವೆ. ಮುಂದಿನ ದಿನಗಳಲ್ಲಿ ಭ್ರಷ್ಟಾಚಾರ ಆಗದಂತೆ ತಡೆಯುತ್ತೇವೆ ಎಂದರು. ಸುದೀರ್ಘ ಚರ್ಚೆಯ ಬಳಿಕ ವಿಧೇಯಕ ಅಂಗೀಕಾರವಾಯಿತು..

Council
ಪರಿಷತ್
author img

By

Published : Sep 20, 2021, 8:00 PM IST

ಬೆಂಗಳೂರು : ಕರ್ನಾಟಕ ಬಂಧೀಖಾನೆ ಅಭಿವೃದ್ಧಿ ಮಂಡಳಿ ವಿಧೇಯಕ 2021 ಪರಿಷತ್​​​ನಲ್ಲಿ ಅಂಗೀಕಾರವಾಯಿತು. ಗೃಹ ಸಚಿವ ಆರಗ ಜ್ಞಾನೇಂದ್ರ ವಿಧೇಯಕ ಮಂಡಿಸಿ ವಿವರಣೆ ನೀಡಿ, ಬಂಧೀಖಾನೆ ಅಭಿವೃದ್ಧಿಗೆ ಅಗತ್ಯ ಕ್ರಮಕೈಗೊಳ್ಳಲು, ಸುಧಾರಣೆ, ಅಭಿವೃದ್ಧಿ ತರಲು ಪ್ರತ್ಯೇಕ ಮಂಡಳಿ ರಚಿಸಲು ತರುತ್ತಿರುವ ಕಾನೂನಾಗಿದೆ. ಬಂಧೀಖಾನೆ ಉದ್ಯಮ ವಿಸ್ತರಣೆ, ಆಧುನೀಕರಣ, ಬಂಧಿಗಳ ಪ್ರೋತ್ಸಾಹ, ಸಿಬ್ಬಂದಿ ಕಲ್ಯಾಣಕ್ಕೆ ಈ ಮಂಡಳಿ ರಚನೆಯಿಂದ ಸಹಾಯವಾಗಲಿದೆ ಎಂದರು.

ಸದಸ್ಯರ ಮಾತು : ಆಯನೂರು ಮಂಜುನಾಥ್ ಮಾತನಾಡಿ, ಹಿಂಡಲಗಾ ಜೈಲು ಹೊರತುಪಡಿಸಿ ಇತರೆ ನಾಲ್ಕು ಜೈಲಿನಲ್ಲಿ ವಾಸ ಮಾಡಿ ಬಂದಿದ್ದೇನೆ. ವಿವಿಧ ಹೋರಾಟದ ಕಾರಣಕ್ಕೆ ಜೈಲಿಗೆ ಹೋಗಿದ್ದೆ. ಜೈಲು ಸಿಬ್ಬಂದಿ, ಅಧಿಕಾರಿಗಳ ಭ್ರಷ್ಟಾಚಾರ ನಿಲ್ಲಿಸಬೇಕಿದೆ. ಭ್ರಷ್ಟಾಚಾರ ಅತ್ಯುನ್ನತ ಮಟ್ಟದಲ್ಲಿದೆ. ಗೃಹ ಸಚಿವರು ಸಹ ಖುದ್ದು ಜೈಲುವಾಸ ಅನುಭವಿಸಿದ ಕಾರಣಕ್ಕೆ ಸುಧಾರಣೆ ತರಲು ಬಯಸಿದ್ದಾರೆ ಅನಿಸುತ್ತಿದೆ ಎಂದರು.

ಜೈಲಿನಲ್ಲಿ ದೌರ್ಜನ್ಯ : ಜೈಲಿನಲ್ಲಿ‌ ಬಾಲ ಕಾರ್ಮಿಕರನ್ನು ಲೈಂಗಿಕತೆಗೆ ಬಳಸಲಾಗುತ್ತಿದೆ. ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಆಗುತ್ತಿದೆ. ಇದಕ್ಕೆ ತಡೆ ಇಲ್ಲವೇ?, ಶೌಚಾಲಯ ಸಂಖ್ಯೆ ಕಡಿಮೆ, ಜೈಲುವಾಸ ನರಕ ಸದೃಶ. ಇಲ್ಲಿದ್ದು ಬಂದವರ ಮಾನಸಿಕ ಸ್ಥಿತಿ ಹೇಗಿರಬೇಡ?. ಸೌಲಭ್ಯ ಇಲ್ಲದ ಜೈಲಿನಲ್ಲಿ ಕೈದಿಗಳ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದೆ.

ಅಧಿಕಾರಿಗಳ ವಿವರಣೆಗೆ ತೃಪ್ತಿಪಡುವುದು ಬೇಡ. ಹಣದ ಬಲ ಇದ್ದವರಿಗೆ ಎಲ್ಲಾ ಸೌಲಭ್ಯ ಸಿಗುತ್ತದೆ. ಹೊರಗಡೆ ಸಿಗುವ ಎಲ್ಲಾ ವ್ಯವಸ್ಥೆ ಒಳಗೆ ಸಿಗುತ್ತದೆ. ಇದನ್ನು ಪೂರೈಸುತ್ತಿರುವವರು ಯಾರು?, ಕೈದಿಗಳ ಮನೋ ವಿಕಾಸದ ಜೊತೆ ಅಧಿಕಾರಿಗಳ ಮನಃ ಪರಿವರ್ತನೆ ಆಗಬೇಕು ಎಂದರು.

ಜೈಲಿನ ಅಧಿಕಾರಿಗಳು, ಸಿಬ್ಬಂದಿ ಪರಿವರ್ತನೆಯಾಗಬೇಕು : ಬಳಿಕ ಪ್ರತಿಪಕ್ಷ ನಾಯಕ ಎಸ್ ಆರ್ ಪಾಟೀಲ್ ಮಾತನಾಡಿ, ದೊಡ್ಡ ದೊಡ್ಡ ಅಪರಾಧದ ಮೇಲೆ ಜೈಲಿಗೆ ಹೋದವರ ಪರಿವರ್ತನೆ ಆಗಬೇಕಾದ ಅಗತ್ಯವಿದೆ. ಸಮಾಜಕ್ಕೆ ಬೇಕಾದ ಬದಲಾವಣೆ ಆದರೆ ಅತ್ಯುತ್ತಮ. ಜೈಲಿಗೆ ನಾನೂ ಹೋಗಿದ್ದೆ. ಆದರೆ, ಕೈದಿಯಾಗಿ ಅಲ್ಲ. ಸಮಾರಂಭಕ್ಕೆ ಅತಿಥಿಯಾಗಿ ಹೋಗಿದ್ದೆ. ಆಗ ಅಲ್ಲಿನ ಬ್ಯಾರಕ್​​​ಗಳನ್ನು ಪರಿಶೀಲಿಸಿದ್ದೆ. ಮಹಿಳಾ ಕೈದಿಗಳು ನೋವು ತೋಡಿಕೊಂಡಿದ್ದರು. ಇಲ್ಲಿನ ದೌರ್ಜನ್ಯ ನಿಯಂತ್ರಿಸುವ ಕಾರ್ಯ ಆಗಬೇಕು. ಜೈಲಿಗಿಂತ ಜೈಲು ಅಧಿಕಾರಿ, ಸಿಬ್ಬಂದಿ ಪರಿವರ್ತನೆ ಮಾಡಬೇಕು.

ಸದಸ್ಯರಾದ ಶ್ರೀಕಂಠೇಗೌಡ, ಸದಸ್ಯೆ ತೇಜಸ್ವಿನಿಗೌಡ, ತಿಪ್ಪೇಸ್ವಾಮಿ, ರಮೇಶ್ ಗೌಡ, ಅಪ್ಪಾಜಿಗೌಡ, ಮರಿತಿಬ್ಬೇಗೌಡ, ನಜೀರ್ ಅಹ್ಮದ್, ಸಾಯಬಣ್ಣ ತಳವಾರ್, ಕೆ ಸಿ ಕೊಂಡಯ್ಯ, ಪ್ರತಾಪ್ ಸಿಂಹ ನಾಯಕ್‌ ವಿಧೇಯಕದ ಮೇಲೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಗೃಹ ಸಚಿವ ಆರಗ ಜ್ಞಾನೇಂದ್ರ ಸದಸ್ಯರ ಸಲಹೆ, ಸೂಚನೆ ಸ್ವೀಕರಿಸಿ ಬದಲಾವಣೆಯನ್ನು ಅಳವಡಿಸಿಕೊಳ್ಳುತ್ತೇವೆ. ತಜ್ಞರ ಜೊತೆ ಚರ್ಚಿಸುವ ಅವಕಾಶ ಕಲ್ಪಿಸುತ್ತೇವೆ. ಕೈದಿಗಳಿಗೆ ಸಂಬಳ ಕಡಿಮೆ ಬರುತ್ತಿರುವುದು ಗಮನಕ್ಕೆ ಬಂದಿದೆ. ವೈದ್ಯಕೀಯ ಸೇವೆ, ಎಜಿಒ, ಸಿಎಸ್ಆರ್ ನಿಧಿ ಬಳಕೆ ಮಾಡುತ್ತೇವೆ ಎಂದರು.

ಜೈಲ್​ಮೇಟ್​​ಗಳು : ನಾನು, ಆಯನೂರು ಮಂಜುನಾಥ್, ಜೆ ಹೆಚ್ ಪಟೇಲ್ ಮತ್ತಿತರರು ಜೈಲ್​ಮೇಟ್​​ಗಳು. ಅಲ್ಲಿನ ಉತ್ತಮ ಅನುಭವ ನನಗಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕೃಪೆ ಮೇರೆಗೆ ತುರ್ತು ಪರಿಸ್ಥಿತಿಯ ಸಮಯದಲ್ಲಿ ಜೈಲಿಗೆ ಕಳುಹಿಸಿದರು. ಐದಾರು ತಿಂಗಳು ಜೈಲಲ್ಲಿ ಇದ್ದೆವು. ಆಗಿನ ಅನುಭವದ ಮೇಲೆ ಸುಧಾರಣಾ ಕ್ರಮ ಕೈಗೊಳ್ಳುತ್ತೇವೆ.

ಈಗೀಗ ಒಂದಿಷ್ಟು ಸುಧಾರಣೆಯಾಗಿದೆ. ಜವಳಿ‌ ಕಾರ್ಯಕ್ಕೂ ಉತ್ತೇಜಿಸುವ ಕಾರ್ಯ ಮಾಡುತ್ತೇವೆ. ಜೈಲಿಂದ ಹೊರ ಬರುವ ಅನಾಥರಿಗೆ ಪುನರ್ವಸತಿ ಕೇಂದ್ರ ನಿರ್ಮಿಸುತ್ತೇವೆ. ಮುಂದಿನ ದಿನಗಳಲ್ಲಿ ಭ್ರಷ್ಟಾಚಾರ ಆಗದಂತೆ ತಡೆಯುತ್ತೇವೆ ಎಂದರು. ಸುದೀರ್ಘ ಚರ್ಚೆಯ ಬಳಿಕ ವಿಧೇಯಕ ಅಂಗೀಕಾರವಾಯಿತು.

ಇದನ್ನೂ ಓದಿ: ಅನ್ನಭಾಗ್ಯ ಅಕ್ಕಿ ವಿಚಾರವಾಗಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು.. ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.