ETV Bharat / state

ಬೈಕಲ್ಲಿ ನಿಯಮ ಮೀರಿ ರೀಲ್ಸ್​​ ಮಾಡಿದ್ದಕ್ಕೆ ದಂಡ.. ಫೈನ್​ ಕಟ್ಟಿದ್ದನ್ನು ತಿಳಿಸೋಕೆ ಮತ್ತೊಂದು ರೀಲ್ಸ್​ ಮಾಡಿದ ಭೂಪ! - ಹೆಲ್ಮೆಟ್ ಧರಿಸದೇ ಬೈಕ್ ರೈಡಿಂಗ್ ವೇಳೆ ರೀಲ್ ವಿಡಿಯೋ ಮಾಡಿದ್ರೆ ದಂಡ

ಬೈಕ್​ನಲ್ಲಿ ನಿಯಮ ಮೀರಿ ರೀಲ್ಸ್ ಮಾಡುತ್ತಿರುವವರಿಗೆ ಪೊಲೀಸ್​ ಇಲಾಖೆ ದಂಡ ಹಾಕುವ ಎಚ್ಚರಿಕೆ ನೀಡಿದೆ. ಈಗಾಗಲೇ ಪೊಲೀಸ್​ ಇಲಾಖೆಯಿಂದ 40 ಮಂದಿಗೆ ಬಿಸಿ ಮುಟ್ಟಿಸಲಾಗಿದೆ.

Karnataka police impose fine for bike riding over reels video, fine for bike riding reels video without Helmet, Karnataka police news, ಬೈಕ್​ ಚಲಿಸುತ್ತಿರುವಾಗ ರೀಲ್ಸ್ ವಿಡಿಯೋ ಮಾಡ್ರಿದ್ರೆ ಕರ್ನಾಟಕ ಪೊಲೀಸರಿಂದ ದಂಡ, ಹೆಲ್ಮೆಟ್ ಧರಿಸದೇ ಬೈಕ್ ರೈಡಿಂಗ್ ವೇಳೆ ರೀಲ್ ವಿಡಿಯೋ ಮಾಡಿದ್ರೆ ದಂಡ, ಕರ್ನಾಟಕ ಪೊಲೀಸ್ ಸುದ್ದಿ,
ನಗರ ಸಂಚಾರಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಹೇಳಿಕೆ
author img

By

Published : Jun 29, 2022, 1:51 PM IST

ಬೆಂಗಳೂರು: ನೀವೇನಾದರೂ ರೀಲ್ಸ್ ಮಾಡುವ ಹವ್ಯಾಸ ಹೊಂದಿದ್ರೆ ಈ ಸ್ಟೋರಿಯನ್ನು ಪೂರ್ತಿ ಆಗಿ ಓದ್ಲೇಬೇಕು. ಯಾಕಂದ್ರೆ ನಿಯಮ‌ ಮೀರಿ ರೀಲ್ಸ್ ಮಾಡುವವರ ವಿರುದ್ಧ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದೆ.

ಕೆಲವೊಬ್ಬರು ರೀಲ್ಸ್ ಮಾಡುವ ಶೋಕಿಗೆ ಬಿದ್ದು, ಬೈಕ್​ನಲ್ಲಿ ಹೆಲ್ಮೆಟ್ ಧರಿಸದೇ ಬೇಕಾಬಿಟ್ಟಿಯಾಗಿ ನಿಯಮ ಮೀರಿ ರೀಲ್ಸ್ ಮಾಡುತ್ತಾರೆ. ಹೀಗೆ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾಗೆ ಅಪ್​ಲೋಡ್ ಮಾಡ್ತಾರೆ. ಅಂತವರ ವಿರುದ್ಧ ಸಂಚಾರಿ ಪೊಲೀಸರು ದೂರು ದಾಖಲಿಸಿಕೊಂಡು ದಂಡ ವಸೂಲಿಗೆ ಮುಂದಾಗಿದ್ದಾರೆ.

ಓದಿ: ಪುಣ್ಯ ಕ್ಷೇತ್ರಗಳಲ್ಲಿ ಯುವತಿಯರ ರೀಲ್​​​.. ಪುರೋಹಿತ್, ಬ್ರಾಹ್ಮಣ ಸಭಾದಿಂದ ಆಕ್ಷೇಪ

ಕಳೆದ ಒಂದೇ ವರ್ಷದಲ್ಲಿ ಒಟ್ಟು 44 ಕೇಸ್​ಗಳು ದಾಖಲಾಗಿದ್ದು, ಸಂಚಾರಿ ಪೊಲೀಸರ ಸೋಷಿಯಲ್ ಮೀಡಿಯಾ ಸೆಲ್ ಇಂತಹ ವಿಡಿಯೋಗಳನ್ನು ಮಾನಿಟರಿಂಗ್ ಮಾಡುತ್ತಿರುತ್ತೆ‌. ಸದ್ಯ ಹೀಗೆ ರೀಲ್ಸ್ ಮಾಡುವ ಯುವಕನೊಬ್ಬ ಹೆಲ್ಮೆಟ್ ಇಲ್ಲದೇ ಬೈಕ್ ಓಡಿಸಿ ವಿಡಿಯೋ‌ ಮಾಡಿದ್ದಾನೆ. ಇದನ್ನು ಗಮನಿಸಿದ ಪೊಲೀಸರು ಈತನಿಗೆ 17,500 ಸಾವಿರ ರೂಪಾಯಿ ದಂಡ ಜಡಿದು ವಾರ್ನ್ ಮಾಡಿ ಕಳುಹಿಸಿದ್ದಾರೆ.

ವಿಪರ್ಯಾಸವೆಂದರೆ ಆತ ತಾನು ನಿಯಮ ಮೀರಿದ್ದಕ್ಕೆ ದಂಡ ಕಟ್ಟಿದ್ದೇನೆ ಎಂದು ಕೂಡ ರೀಲ್ಸ್ ಮಾಡಿದ್ದಾನೆ. ಆ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಳೆದ ವಾರ ಸಹ ಸೋಷಿಯಲ್ ಮೀಡಿಯಾದಲ್ಲಿ ಬೈಕ್ ವ್ಹೀಲಿಂಗ್ ಮಾಡಿ ವಿಡಿಯೋ ಹರಿಬಿಟ್ಟವರ ವಿರುದ್ದ ಒಟ್ಟು 40 ಪ್ರಕರಣಗಳನ್ನು ದಾಖಲಿಸಲಾಗಿದೆ.

ನಿಯಮ ಮೀರಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಸಂಚಾರಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಎಚ್ಚರಿಕೆ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.