ಬೆಂಗಳೂರು : ಕರ್ನಾಟಕ ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆ (ಕರ್ನಾಟಕ ಪಿಜಿಸಿಇಟಿ 2020) ಮತ್ತು ಕರ್ನಾಟಕ ಡಿಪ್ಲೊಮಾ ಸಿಇಟಿ (ಕರ್ನಾಟಕ ಡಿಸಿಇಟಿ 2020) ಪರೀಕ್ಷೆಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮುಂದೂಡಿದೆ.
ಪ್ರವೇಶ ಪರೀಕ್ಷೆಗಳ ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ಕರ್ನಾಟಕ ಪಿಜಿಸಿಇಟಿ- 2020 ಪರೀಕ್ಷೆಗಳನ್ನು 2020 ರ ಅಕ್ಟೋಬರ್ 13 ಮತ್ತು 14 ರಂದು ನಡೆಸಲಾಗುತ್ತದೆ. ಕರ್ನಾಟಕ ಡಿಪ್ಲೊಮಾ ಸಿಇಟಿಯನ್ನು 2020 ರ ಅಕ್ಟೋಬರ್ 14 ರಂದು ನಡೆಸಲಾಗುತ್ತದೆ. ಈ ಹಿಂದೆ ಪಿಜಿಸಿಇಟಿಯನ್ನು 2020 ರ ಅಕ್ಟೋಬರ್ 6 ಮತ್ತು 7 ರಂದು ಮತ್ತು ಡಿಪ್ಲೊಮಾ ಸಿಇಟಿಯನ್ನು ಅಕ್ಟೋಬರ್ 7 ರಂದು ನಡೆಸಲು ನಿರ್ಧರಿಸಲಾಗಿತ್ತು.
ಪ್ರವೇಶ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ cetonline.karnataka.gov.in. ಪರಿಷ್ಕೃತ ವೇಳಾಪಟ್ಟಿಯನ್ನು ಪರಿಶೀಲಿಸಬಹುದು. ವೇಳಾಪಟ್ಟಿ ಕುರಿತ ಪಿಡಿಎಫ್ಗಾಗಿ ಕೆಳಗಿನ ಲಿಂಕ್ ಕ್ಲಿಕ್ ಬಳಸಿಕೊಳ್ಳಬಹುದು.
PGCET - http://kea.kar.nic.in/pgcet_2020/pgcet2020_revised_english.PDF
Diploma CET - http://164.100.133.71/keawebentry456/dcet20/DCET-2020%20revised%20time%20tableenglish.pdf
ಹೊಸ ಅಧಿಸೂಚನೆಯ ಪ್ರಕಾರ, ಪಿಜಿಸಿಇಟಿ ಮತ್ತು ಡಿಪ್ಲೊಮಾ ಸಿಇಟಿಗೆ ಇನ್ನೂ ಅರ್ಜಿ ಸಲ್ಲಿಸದ ವಿದ್ಯಾರ್ಥಿಗಳು 2020 ರ ಸೆಪ್ಟೆಂಬರ್ 21 ರವರೆಗೆ ಅರ್ಜಿ ಸಲ್ಲಿಸಬಹುದು. 22 ಸೆಪ್ಟೆಂಬರ್ 2020 ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕವಾಗಿದೆ.
ಒಟ್ಟು 100 ಅಂಕಗಳಿಗೆ ಕರ್ನಾಟಕ ಪಿಜಿಸಿಇಟಿ ಮತ್ತು ಒಟ್ಟು 180 ಅಂಕಗಳಿಗೆ ಡಿಪ್ಲೊಮಾ ಸಿಇಟಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಪಿಜಿಸಿಇಟಿ ಪರೀಕ್ಷೆಗಳು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12.30 ರವರೆಗೆ ಮತ್ತು ಮಧ್ಯಾಹ್ನ 02:30 ರಿಂದ 04.30 ರವರೆಗೆ ನಡೆಯಲಿದೆ. ಡಿಪ್ಲೊಮಾ ಸಿಇಟಿ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1:00 ಮತ್ತು ಸಂಜೆ 3 ರಿಂದ ಸಂಜೆ 4 ರವರೆಗೆ ನಡೆಯಲಿದೆ.