ETV Bharat / state

ಹಿಜಾಬ್ ಧರಿಸಿ, ಇಫ್ತಾರ್ ಕೂಟದಲ್ಲಿ ಪಾಲ್ಗೊಂಡ ಮುಸ್ಲಿಮೇತರ ಮಹಿಳೆಯರು - ಬೆಂಗಳೂರಿನಲ್ಲಿ ರಂಜಾನ್ ಆಚರಣೆ

ಮುಸ್ಲಿಮೇತರ ಮಹಿಳೆಯರು ರಂಜಾನ್ ಉಪವಾಸ ಆಚರಿಸಿ, ಮುಸ್ಲಿಂ ಮಹಿಳೆಯರೊಂದಿಗೆ ಇಫ್ತಾರ್ ಕೂಟದಲ್ಲಿ ಭಾಗಿಯಾಗಿದ್ದು, ಇಫ್ತಾರ್ ಕೂಟದಲ್ಲಿ ಭಾಗಿಯಾಗುವ ವೇಳೆ ಹಿಜಾಬ್ ಕೂಡಾ ಧರಿಸಿದ್ದು, ಕೋಮು ಸಾಮರಸ್ಯವನ್ನು ಎತ್ತಿ ಹಿಡಿಯುವಂತಿದೆ.

karnataka-non-muslim-women-wear-hijab-relish-iftar-feast-call-it-show-of-love
ಹಿಜಾಬ್ ಧರಿಸಿ, ಇಫ್ತಾರ್ ಕೂಟದಲ್ಲಿ ಪಾಲ್ಗೊಂಡ ಮುಸ್ಲಿಮೇತರ ಮಹಿಳೆಯರು
author img

By

Published : Apr 28, 2022, 9:36 AM IST

ಬೆಂಗಳೂರು: ಹಿಜಾಬ್ ವಿವಾದ, ಹಲಾಲ್ ಕಟ್ ವಿವಾದ ಮುಂತಾದ ಕೋಮು ಸಾಮರಸ್ಯಕ್ಕೆ ಧಕ್ಕೆ ತರುವ ವಿಚಾರಗಳ ನಡುವೆ ಕೋಮು ಸಾಮರಸ್ಯ ಮೂಡಿಸುವ ಶ್ಲಾಘನೀಯ ಕಾರ್ಯಗಳೂ ಅಲ್ಲಲ್ಲಿ ನಡೆಯುತ್ತಿವೆ. ಈಗ ರಾಜ್ಯದಲ್ಲೂ ಕೋಮು ಸಾಮರಸ್ಯದ ಘಟನೆಯೊಂದಕ್ಕೆ ನಡೆದಿದೆ. ಬೆಂಗಳೂರಿನಲ್ಲಿ ಮಂಗಳವಾರ ಮುಸ್ಲಿಮೇತರ ಮಹಿಳೆಯರು ರಂಜಾನ್ ಉಪವಾಸ ಆಚರಿಸಿ, ಮುಸ್ಲಿಂ ಮಹಿಳೆಯರೊಂದಿಗೆ ಇಫ್ತಾರ್ ಕೂಟದಲ್ಲಿ ಭಾಗಿಯಾಗಿದ್ದಾರೆ. ಇಫ್ತಾರ್ ಕೂಟದಲ್ಲಿ ಭಾಗಿಯಾಗುವ ವೇಳೆ ಹಿಜಾಬ್ ಕೂಡಾ ಧರಿಸಿದ್ದು, ಕೋಮು ಸಾಮರಸ್ಯವನ್ನು ಎತ್ತಿ ಹಿಡಿಯುವಂತಿದೆ.

ಇಫ್ತಾರ್ ಕೂಟದಲ್ಲಿ ಭಾಗಿಯಾಗಿದ್ದ ಸಾಮಾಜಿಕ ಕಾರ್ಯಕರ್ತೆ ವಿದ್ಯಾ ದಿನಕರ್ ಮಾತನಾಡಿ, ನಾವು ಒಟ್ಟಿಗೆ ಉತ್ತಮ ಸಮಯ ಕಳೆದಿದ್ದೇವೆ. ನಾವು ಸ್ನೇಹ ಮತ್ತು ಪ್ರೀತಿಗಾಗಿ ಇಲ್ಲಿ ಸೇರಿದ್ದು, ಈ ವೇಳೆ ಹಾಡಿದ್ದೇವೆ ಮತ್ತು ಮಾತನಾಡಿದ್ದೇವೆ. ಮುಸ್ಲಿಮ್ ಮಹಿಳೆಯರು ನಮಗೆ ಉಪವಾಸ ಮಹತ್ವವನ್ನು ವಿವರಿಸಿದ್ದಾರೆ. ಉಪವಾಸ ಮಾಡುವುದರಿಂದ ಹೇಗೆ ಸಹನೆ ಹೆಚ್ಚುತ್ತದೆ? ಹೇಗೆ ನಮ್ಮನ್ನು ಉತ್ತಮ ಮನುಷ್ಯನನ್ನಾಗಿ ಮಾಡುತ್ತದೆ ಎಂದು ವಿವರಣೆ ನೀಡಿದ್ದಾರೆ. ಹಿಜಾಬ್ ಧರಿಸುವುದರಿಂದ ಕಷ್ಟ ಎಂದು ನಾನು ಅರಿತಿದ್ದೆ. ಅದರೆ ಅದು ಕಷ್ಟವಲ್ಲ ಎಂದು ಮಾಹಿತಿ ನೀಡಿದ್ದಾರೆ.

ಇಫ್ತಾರ್​ನಲ್ಲಿ ಭಾಗವಹಿಸಿದ ಅತಿಥಿಗಳಿಗೆ ಮುಸ್ಲಿಮ್ ಮಹಿಳೆಯಾದ ಸೈಯದ್ ನಸ್ರೀನ್ ತೊಡಿಸಿದರು. ಹಿಜಾಬ್ ಧರಿಸಿ ಮತ್ತು ಸಾಂಕೇತಿಕವಾಗಿ ನಮಾಜ್​ನಲ್ಲಿ ಪಾಲ್ಗೊಳ್ಳಲಾಗಿತ್ತು. ನನಗೆ ತುಂಬಾ ಸಂತೋಷವಾಯಿತು. ನಸ್ರೀನ್ ನಮಗೆ ಹಿಜಾಜ್​ ಉಡುಪುಗಳನ್ನು ತೊಡಿಸಿದರು. ಅದು ತುಂಬಾ ಹೃದಯಸ್ಪರ್ಶಿಯಾಗಿತ್ತು ಎಂದು ವಿದ್ಯಾ ದಿನಕರ್ ಹೇಳಿದ್ದಾರೆ.

ಇಫ್ತಾರ್ ಕೂಟದಲ್ಲಿ ಪಾಲ್ಗೊಂಡ ಮುಸ್ಲಿಮೇತರ ಮಹಿಳೆಯರು

ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಮತ್ತೋರ್ವ ಮುಸ್ಲಿಮೇತರ ಪಾಯಲ್ ಮಿಶ್ರಾ, ಈ ಕಾರ್ಯಕ್ರಮ ಪ್ರೀತಿಯ ದ್ವೀಪದಂತೆ ಕಾಣುತ್ತಿದೆ. ನಾವು ದ್ವೇಷ ಮತ್ತು ಅಸಹಿಷ್ಣುತೆಯ ಸಮುದ್ರದಲ್ಲಿದ್ದು, ಇಂತಹ ಪ್ರೀತಿಯ ದ್ವೀಪಗಳನ್ನು ರಚಿಸಬೇಕಾಗಿದೆ. ನಮಗೆ ಪ್ರೀತಿಸುವ ಧೈರ್ಯವಿದೆ. ಇದನ್ನು ಎಲ್ಲಾ ಧರ್ಮಗಳು, ನಮ್ಮ ಸಂವಿಧಾನ, ನಮ್ಮ ಹಿರಿಯರು ನಮಗೆ ಹೇಳಿಕೊಂಡಿದ್ದಾರೆ. ಈ ಪ್ರೀತಿ ಸಮುದಾಯಗಳ ನಡುವಿನ ದ್ವೇಷದ ವಾತಾವರಣವನ್ನು ಸೋಲಿಸುತ್ತದೆ ಎಂದು ಪಾಯಲ್ ಮಿಶ್ರಾ ಭರವಸೆ ವ್ಯಕ್ತಪಡಿಸಿದ್ದಾರೆ.

ನಮ್ಮ ಸುತ್ತಲೂ ನಡೆಯುತ್ತಿರುವುದು ಧರ್ಮ ವಿರೋಧಿ, ಸಂವಿಧಾನ ವಿರೋಧಿ ಮತ್ತು ಸಮಾಜವಿರೋಧಿ ಘಟನೆಗಳು. ನಾವು ಈ ಘಟನೆಗಳಿಂದ ಹೊರಬರುತ್ತೇವೆ. ದ್ವೇಷಿಗಳು ದ್ವೇಷದ ಬೀಜಗಳನ್ನು ಬಿತ್ತುತ್ತಾರೆ. ಆದರೆ ಸಹೋದರತ್ವ ಮತ್ತು ಸೌಹಾರ್ದತೆ ದ್ವೇಷಿಗಳನ್ನು ಸೋಲಿಸುತ್ತದೆ ಎಂದು ಪಾಯಲ್ ಮಿಶ್ರಾ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಸಚಿವ ಸಿಸಿ ಪಾಟೀಲ್ ವಿರುದ್ಧ ದಿಂಗಾಲೇಶ್ವರ ಶ್ರೀಗಳ ಪ್ರತಿಭಟನೆ: ಶ್ರೀಗಳನ್ನು ತಡೆದ ಪೊಲೀಸರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.